ಹೆದ್ದಾರಿಯಲ್ಲಿ ಶವ ಸಾಗಿಸುತ್ತಿದ್ದ ಪೇದೆ ಗ್ಯಾಂಗ್ ರೇಪ್

Ranchi Latehar woman constable was gang-raped by highway robbers
ರಾಂಚಿ, ಆಗಸ್ಟ್ 24: ಮಹಿಳಾ ಪೊಲೀಸ್ ಪೇದೆಯ ಮೇಲೆ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಜಾರ್ಖಂಡಿನ ಲಾತೇಹಾರ್ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ದರೋಡೆಕೋರರು ಗುರುವಾರ ರಾತ್ರಿ ಈ ಕುಕೃತ್ಯವೆಸಗಿದ್ದಾರೆ.

ಇತ್ತೀಚೆಗೆ ಮಾವೋ ಉಗ್ರರು ನಡೆಸಿದ ದಾಳಿಯಲ್ಲಿ ಸದರಿ ಪೊಲೀಸ್ ಪೇದೆಯ ಸೋದರ ಸಂಬಂಧಿ ಹತ್ಯೆಗೀಡಾಗಿದ್ದರು. ಅವರೂ ಪೊಲೀಸ್ ಪೇದೆಯಾಗಿದ್ದರು. ತನ್ನ ಪೋಷಕರೊಂದಿಗೆ ಕಾರಿನಲ್ಲಿ ಆತನ ಶವವನ್ನು ಹೊತ್ತುತರುವಾಗ ಪಾಪಿಗಳು ಅಮಾನುಷವಾಗಿ ಪೊಲೀಸ್ ಪೇದೆಯ ಮೇಲೆ ಈ ದುಷ್ಕೃತ್ಯವೆಸಗಿದ್ದಾರೆ.

ರಾಂಚಿ ಮತ್ತು ದಾಲ್ತೋಗಂಜ್ ನಡುವಣ ಈ ಹೆದ್ದಾರಿ ತುಂಬಾ ಪ್ರಕ್ಷುಬ್ಧ ಪ್ರದೇಶವಾಗಿದ್ದು, ಜನ ಸಂಚಾರ ಕಡಿಮೆಯಾಗಿದೆ. ಇದೀಗ ಗ್ಯಾಂಗ್ ರೇಪ್ ಬಳಿಕ ಜನ ಮತ್ತಷ್ಟು ಆತಂಕ/ಭೀತಿಗೊಳಗಾಗಿದ್ದು ಈ ಭಾಗದ ಹೆದ್ದಾರಿಯಲ್ಲಿ ಸಂಚರಿಸುವುದಕ್ಕೆ ಮತ್ತಷ್ಟು ಹಿಂದೇಟು ಹಾಕುವ ಸಾಧ್ಯತೆಯಿದೆ.

ದರೋಡೆಕೋರರು ಹೆದ್ದಾರಿಯಲ್ಲಿ ಮಹಿಳಾ ಪೇದೆಯ ಕಾರನ್ನು ತಡೆದು ಗಲಾಟೆ ಮಾಡಿದ್ದಾರೆ. ಬಳಿಕ ಪೇದೆಯನ್ನು ಮತ್ತು ಆಕೆಯ ಸಂಬಂಧಿಕರನ್ನು ಕಾರಿಂದ ಕೆಳಗಿಳಿಸಿ, ಥಳಿಸಿದ್ದಾರೆ. ಆ ನಂತರ ಮಹಿಳಾ ಪೇದೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಮಹಿಳಾ ಪೇದೆಯ ಲಾತೇಹಾರ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಸಂಬಂಧ ಇನ್ನೂ ಯಾರನ್ನೂ ಬಂಧಿಸಿಲ್ಲವಾದರೂ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+