ಹುಷಾರು! ಬ್ಯಾಂಕುಗಳು SMSಗೆ ದುಡ್ಡು ಪೀಕುತ್ತಿವೆ

ನವದೆಹಲಿ, ಆಗಸ್ಟ್ 24: ಬ್ಯಾಂಕ್ ಗ್ರಾಹಕರೇ ಹುಷಾರು! ಬ್ಯಾಂಕುಗಳು ಸದ್ದಿಲ್ಲದೆ SMSಗೆ ದುಡ್ಡು ಪೀಕುತ್ತಿವೆ! ಇದನ್ನು ಖುದ್ದು ಹಣಕಾಸು ಸಚಿವ ಪಿ ಚಿದಂಬರಂ ಅವರೇ ಸಂಸತ್ತಿನಲ್ಲೇ ಹೇಳಿದ್ದಾರೆ.

ನಿಮ್ಮ ಬ್ಯಾಂಕು ಆಗಾಗ ನಿಮಗೆ ಕಳುಹಿಸುವ SMS ಸಂದೇಶಗಳಿಗಾಗಿ ನಿಮ್ಮ ಗಮನಕ್ಕೂ ತಾರದೆ ನಿಮ್ಮ ಖಾತೆಯಿಂದ ಶುಲ್ಕ ಪಡೆಯುತ್ತಿದೆ. ನಂಬಿಕೆ ಬರಲಿಲ್ಲವಾದರೆ ಒಮ್ಮೆ ನಿಮ್ಮ ಮ್ಯಾಂಕ್ ಸ್ಟೇಟ್ ಮೆಂಟ್ ನೋಡಿ ಖಾತ್ರಿಪಡಿಸಿಕೊಳ್ಳಿ.

ಎಲ್ಲ ಗ್ರಾಹಕರಿಗೂ ಅವರವರ ಮೊಬೈಲುಗಳ ಮೂಲಕ ಅವರು ನಡೆಸುವ ಎಲ್ಲ ವ್ಯವಹಾರಗಳ ಬಗ್ಗೆ SMS ಸಂದೇಶ ಕಳುಹಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ 2011ರ ಮಾರ್ಚ್ ತಿಂಗಳಲ್ಲಿ ತಾಕೀತು ಮಾಡಿತು.

ಆದರೆ ಅದಕ್ಕೆ ತಗಲುವ ವೆಚ್ಚವನ್ನು ಗ್ರಾಹಕರಿಂದ ಪಡೆಯಬೇಕೇ ಅಥವಾ ಸ್ವತಃ ಬ್ಯಾಂಕ್ ಹೊರಬೇಕೇ ಎಂಬುದನ್ನು ಆಯಾ ಬ್ಯಾಂಕುಗಳೇ ನಿರ್ಧರಿಸತಕ್ಕದ್ದು ಎಂದೂ ಅಡ್ಡಗೋಡೆ ಮೇಲೆ ದೀಪವಿಟ್ಟಿತು. ಅಂದಹಾಗೆ, ಈ ಬ್ಯಾಂಕುಗಳು SMS ಸಂದೇಶಗಳನ್ನು ಕಳುಹಿಸುವುದರಿಂದಲೇ ತಲಾ ಅಂದಾಜು 1 ಕೋಟಿ ರೂ. ಗಳಿಸುತ್ತಿವೆ.

ಅಡ್ಡಗೋಡೆ ಮೇಲೆ ದೀಪ

ಅಡ್ಡಗೋಡೆ ಮೇಲೆ ದೀಪ

SMS ಸಂದೇಶದಿಂದ ಗೋಡೆಯ ಒಂದು ಕಡೆಗೆ ಗ್ರಾಹಕರಿಗೆ ಒಳ್ಳೆಯದೇ ಆಯಿತಾದರೂ ಮತ್ತೊಂದು ಕಡೆ ಗ್ರಾಹಕರನ್ನು ಕತ್ತಲೆಯಲ್ಲಿಟ್ಟು ಅವರಿಂದ ಶುಲ್ಕಾರ್ಥವಾಗಿ ಹಣ ಪೀಕತೊಡಗಿದೆ. ಇದೀಗ ಚಿದಂಬರಂ ಸಹ RBI ನಂತೇ ಗ್ರಾಹಕರಿಂದ SMS charge ಸ್ವೀಕರಿಸುವ ನಿರ್ಧಾರವನ್ನು ಬ್ಯಾಂಕುಗಳ ವಿವೇಚನೆಗೇ ಬಿಟ್ಟಿದ್ದಾರೆ.

ಆದರೆ ಬ್ಯಾಂಕುಗಳು ಹೇಳುವುದೇ ಬೇರೆ

ಆದರೆ ಬ್ಯಾಂಕುಗಳು ಹೇಳುವುದೇ ಬೇರೆ

mobile operatorಗಳು bulk message ಎಂಬ ಸೌಲಭ್ಯವನ್ನು ಕಲ್ಪಿಸುತ್ತಾರೆ. ಅದರಂತೆ ಒಂದು SMSಗೆ 2 ಪೈಸೆಯಿಂದ 20 ಪೈಸೆ ವರೆಗೂ ಶುಲ್ಕ ಪಡೆಯುತ್ತಿವೆ. ಆದ್ದರಿಂದ 'ಉಚಿತ' ಸೇವೆ ನೀಡುವುದು ಬ್ಯಾಂಕುಗಳಿಗೆ ಕಷ್ಟಸಾಧ್ಯವಾಗುತ್ತದೆ. ಹಾಗಾಗಿ SMS ಸಂದೇಶ ಶುಲ್ಕವನ್ನು ಗ್ರಾಹಕರ ಖಾತೆಗೆ ವರ್ಗಾಯಿಸುತ್ತೇವೆ ಎನ್ನುತ್ತಿವೆ.

ಯಾವೆಲ್ಲಾ ಬ್ಯಾಂಕುಗಳು ಚಾರ್ಜ್ ಮಾಡುತ್ತಿವೆ:

ಯಾವೆಲ್ಲಾ ಬ್ಯಾಂಕುಗಳು ಚಾರ್ಜ್ ಮಾಡುತ್ತಿವೆ:

State Bank of India, ICICI Bank ಮತ್ತು Axis Bank ವಾರ್ಷಿಕ 60 ರೂ SMS ಶುಲ್ಕ ಪಡೆಯುತ್ತಿವೆ. ಇನ್ನು, Canara Bank 100 ರೂಪಾಯಿಗಿಂತ ಹೆಚ್ಚು ಮೊತ್ತವನ್ನು ಪಡೆಯುತ್ತಿವೆ.

HDFC Bank ಜಾಣ್ಮೆಯ ನಡೆ

HDFC Bank ಜಾಣ್ಮೆಯ ನಡೆ

HDFC Bank ವಾರ್ಷಿಕ 60 ಶುಲ್ಕ ಪಡೆಯುತ್ತಿದೆ. ಆದರೆ ಅದು ಎಲ್ಲರಿಗೂ ಅಲ್ಲ. ವಿಶೇಷ SMS ಸಂದೇಶಗಳಿಗೆ ಮಾತ್ರ ಅನ್ವಯವಾಗುತ್ತದೆ. ಚೆಕ್ ಬೌನ್ಸ್, ಸ್ಯಾಲರಿ ಕ್ರೆಡಿಟ್ ಅಥವಾ ಬ್ಯಾಲೆನ್ಸ್ ನಿಗದಿತ ಮೊತ್ತಕ್ಕಿಂತ ಕಡಿಮೆ ಬಿದ್ದಾಗ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಗ್ರಾಹಕರೇ ಈ ಸೇವೆಯನ್ನು ಬಯಸಿದರೆ ಮಾತ್ರ ಸೂಕ್ತ ಶುಲ್ಕದೊಂದಿಗೆ HDFC Bank ಕೊಡಮಾಡುತ್ತದೆ. ಇಲ್ಲವಾದಲ್ಲಿ ಇಲ್ಲ, ಅಷ್ಟೇ.

IDBI Bank ಮತ್ತು Vijaya Bank ಇನ್ನೂ ಉತ್ತಮ:

IDBI Bank ಮತ್ತು Vijaya Bank ಇನ್ನೂ ಉತ್ತಮ:

ಹೇಗೆಂದರೆ ಈ ಎರಡೂ ಬ್ಯಾಂಕುಗಳು savings bank ಖಾತೆದಾರರಿಗೆ SMS ಸಂದೇಶ ಕಳುಹಿಸುತ್ತದೆಯಾದರೂ ಶುಲ್ಕ ವಿಧಿಸುವುದಿಲ್ಲ! ಅಷ್ಟರಮಟ್ಟಿಗೆ savings bank ಖಾತೆದಾರರಿಗೆ ರಿಯಾಯ್ತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+