ಕುಸ್ತಿಯಲ್ಲೂ ಫಿಕ್ಸಿಂಗ್, ಸುಶೀಲ್ ಸಿಕ್ಕಿತ್ತು ಆಫರ್

2010ರಲಿ ರಷ್ಯಾದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಸೋಲಲು ತನಗೆ ಕೋಟ್ಯಂತರ ರೂ. ಆಮಿಷವೊಡ್ಡಲಾಗಿತ್ತು ಎಂದು ಸುಶೀಲ್ ಕುಮಾರ್ ಆರು ಟೈಮ್ ಆಫ್ ಇಂಡಿಯಾಗೆ ಹೇಳಿದ್ದಾರೆ.
ಫೈನಲಿಗೆ ಸ್ವಲ್ಪ ಮೊದಲು ರಷ್ಯಾದ ಎದುರಾಳಿ ಅಲನ್ ಗೊಗೇವ್ ಅವರಿಗೆ ನಿಮ್ಮ ಜತೆ ಮಾತನಾಡಬೇಕಂತೆ ಎಂದು ನನ್ನ ಕೋಚಿಂಗ್ ಸಿಬ್ಬಂದಿ ಹೇಳಿದರು. ನನಗೆ ಎಲ್ಲಾ ವಿಷಯವನ್ನು ತಿಳಿಸಿದಾಗ ದೊಡ್ಡ ಆಘಾತವಾಯಿತು. ನನಗೆ ಹಲವು ಕೋಟಿ ರೂ. ಪ್ರಸ್ತಾವ ಮಾಡಲಾಗಿತ್ತು. ಆದರೆ ನಾನು ಇದನ್ನು ನಯವಾಗಿ ತಿರಸ್ಕರಿಸಿದೆ ಮತ್ತು ರಷ್ಯಾದ ಆಟಗಾರನನ್ನು 3-1ರಿಂದ ಮಣಿಸಿದೆ ಎಂದು ಸುಶೀಲ್ ತಿಳಿಸಿದರು.
ವಿದೇಶಿ ಕೋಚ್ ಗಳ ಮೂಲಕ ನನ್ನನ್ನು ಬಲೆಗೆ ಬೀಳಿಸಿಕೊಳ್ಳುವ ಯತ್ನ ನಡೆದಿತ್ತು. ರಷ್ಯಾದಲ್ಲಿ ಪಂದ್ಯಾವಳಿ ನಡೆದಿದ್ದರಿಂದ ನಮ್ಮ ಆಟಗಾರ ಗೆಲ್ಲಬೇಕು ಎಂದು ರಷ್ಯಾ ಕೋಚಿಂಗ್ ಸಿಬ್ಬಂದಿ ಹೇಳಿದ್ದರು. ಇದು ಎರಡು ಅಥವಾ ನಾಲ್ಕು ಕೋಟಿಗಳ ವಿಷಯವಲ್ಲ, ಇದು ದೇಶದ ಪ್ರತಿಷ್ಠೆಯ ವಿಷಯ ಹಾಗಾಗಿ ನಾನು ಒಪ್ಪಿಕೊಳ್ಳಲಿಲ್ಲ ಎಂದು ಸುಶೀಲ್ ಹೇಳಿದ್ದಾರೆ.
2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು ಮತ್ತು 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದ ಗೆದ್ದಿದ್ದ ಸುಶೀಲ್ 2010ರಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ಮತ್ತು ಏಶ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕ ಜಯಿಸಿದ್ದರು.












Click it and Unblock the Notifications