ಬೆಂಗಳೂರು : ಅರಿಶಿನಕುಂಟೆ ಬಳಿ ಯುವತಿ ಮೇಲೆ ರೇಪ್

ಆ.20ರ ರಾತ್ರಿ ಯುವತಿ ಮೇಲೆ ಆಕೆಯ ಸಹೋದ್ಯೋಗಿಗಳು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಪೋಷಕರು, ನೆಲಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅರಿಶಿನಕುಂಟೆ ಬಳಿಯ ಅಂಡರ್ ಪಾಸ್ ಹತ್ತಿರ ಯುವತಿ ಆ.20ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ಸ್ಥಳೀಯರು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವತಿ ಪ್ಯಾರಗಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಆಕೆಯ ಸಹೋದ್ಯೋಗಿಗಳು ಅತ್ಯಾಚಾರ ನಡೆಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ನೆಲಮಂಗಲ ಪೊಲೀಸರು 20 ಸಹೋದ್ಯೋಗಿಗಳನ್ನು ವಿಚಾರಣೆ ನಡೆಸಿದ್ದು, ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗ ಮೂಲದವರು : ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯವರಾದ ಯುವತಿ ಕುಟುಂಬದವರು ಮಾದನಾಯಕನಹಳ್ಳಿಯಲ್ಲಿ ವಾಸಿಸುತ್ತಿದ್ದರು. ಯುವತಿ ಪ್ಯಾರಗಾನ್ ಕಾರ್ಖನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಪ್ರತಿದಿನ ಸಂಜೆ 5 ಗಂಟೆಗೆ ಯುವತಿ ಮನೆಗೆ ಆಗಮಿಸುತ್ತಿದ್ದಳು. ಆ.20ರಂದು ರಾತ್ರಿ 8 ಗಂಟೆಯಾದರೂ ಮಗಳು ಮನೆಗೆ ಬಾರದಿದ್ದರಿಂದ ಪೋಷಕರು ಆತಂಕಗೊಂಡಿದ್ದಾರೆ.
ಆಕೆಯ ಸ್ನೇಹಿತೆಯರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಒಬ್ಬಳು ಸ್ನೇಹಿತೆ ನಿಮ್ಮ ಮಗಳು ಅರಿಶಿನಕುಂಟೆ ಬಳಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಆಕೆಯನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ನಂತರ ಆಸ್ಪತ್ರೆಗೆ ಭೇಟಿ ನೀಡಿದ ಪೋಷಕರು ಬುಧವಾರ ನೆಲಮಂಗಳ ಪೊಲೀಸ್ ಠಾಣೆಯಲ್ಲಿ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ನೀಡಿದ್ದಾರೆ. ಯುವತಿ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಯುವತಿಗೆ ಪ್ರಜ್ಞೆ ಬಂದರೆ ಘಟನೆಯ ಕುರಿತು ಮಾಹಿತಿ ತಿಳಿದು ಬರಲಿದೆ.












Click it and Unblock the Notifications