ಅನಿತಾ ಕುಮಾರಸ್ವಾಮಿ ವರ್ಸಸ್ ಡಿಕೆ ಸುರೇಶ್

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪುರುಷರು ಮತ್ತು ಮಹಿಳೆಯರ ಪ್ರಮಾಣ ಸರಿಸಮವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಿಡಿತ ಸಾಧಿಸಿತ್ತು. ಈ ಬಾರಿ ಕಾಂಗ್ರೆಸ್ ಕೈಯಲ್ಲಿ ರಾಜ್ಯದ ಅಧಿಕಾರದ ಚುಕ್ಕಾಣಿ ಇದೆ. ಡಿಕೆ ಸುರೇಶ ಮತ್ತು ಅನಿತಾ ಕುಮಾರಸ್ವಾಮಿ ಅವರು ಸಮಪ್ರಮಾಣದ ಹುರಿಯಾಳುಗಳಾಗಿದ್ದಾರೆ.

ಎರಡೂ ಪಕ್ಷಗಳು ಇತರ ಪಕ್ಷಗಳ ಬೆಂಬಲ ಪಡೆದಿರುವುದು ನೋಡಿದರೆ ಆಗಸ್ಟ್ 21ರ ಬುಧವಾರ ನಡೆಯಲಿರುವ ಉಪಚುನಾವಣೆಯಲ್ಲಿ ಸಮಬಲದ ಹೋರಾಟ ನಡೆಯುವುದು ಖಚಿತ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೂರು ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡು ಸರಿಸಮವಾದ ಯಶಸ್ಸು ಕಂಡಿದ್ದವು.

Bangalore Rural Lok Sabha by-poll : DK Suresh Vs Anitha Kumaraswamy

ಕಳೆದ ಲೋಕಸಭೆ ಚುನಾವಣೆಯ ಚಿತ್ರಣ (2009)

ತೇಜಸ್ವಿನಿಗೌಡ, ಕಾಂಗ್ರೆಸ್ - 1,92,822
ಎಚ್. ಡಿ. ಕುಮಾರಸ್ವಾಮಿ, ಜೆಡಿಎಸ್ - 4,93,302 (ಗೆಲುವು)
ಸಿ. ಪಿ. ಯೋಗೇಶ್ವರ್, ಬಿಜೆಪಿ - 3,63,027

ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಗಳ ಬಲಾಬಲ (2013)

ಒಟ್ಟು ಕ್ಷೇತ್ರಗಳು - 8
ಕಾಂಗ್ರೆಸ್ - 3
ಜೆಡಿಎಸ್ - 3
ಎಸ್‍ಪಿ - 1
ಬಿಜೆಪಿ - 1

ಡಿ. ಕೆ. ಸುರೇಶ್ ಪ್ಲಸ್ ಪಾಯಿಂಟ್

* ಕ್ಷೇತ್ರದಲ್ಲಿ ಪ್ರಬಲ ರಾಜಕಾರಣಿ ಡಿ. ಕೆ. ಶಿವಕುಮಾರ್ ಬಲ
* ಅಣ್ಣ ಡಿಕೆಶಿ ಜೊತೆ ಕೆಲಸ ಮಾಡಿದ ಅನುಭವ
* ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋದು

ಡಿ. ಕೆ. ಸುರೇಶ್ ಮೈನಸ್ ಪಾಯಿಂಟ್

* ಅಕ್ರಮ ಗಣಿಗಾರಿಕೆ ಆರೋಪ
* ಸುರೇಶ್ ಮೇಲೆ ಹಲವಾರು ಕೇಸ್‍ಗಳಿವೆ
* ಒರಟು ಸ್ವಭಾವದಿಂದ ಹೆಸರುವಾಸಿ

ಅನಿತಾ ಕುಮಾರಸ್ವಾಮಿ ಪ್ಲಸ್ ಪಾಯಿಂಟ್

* ಮಾವ ದೇವೇಗೌಡ, ಪತಿ ಎಚ್‍ಡಿಕೆ ಶಕ್ತಿ
* ಚನ್ನಪಟ್ಟಣದಲ್ಲಿ ಸೋತ ಅನುಕಂಪ
* ಬಿಜೆಪಿ, ಜೆಡಿಎಸ್ ಹೊಂದಾಣಿಕೆ

ಅನಿತಾ ಕುಮಾರಸ್ವಾಮಿ ಮೈನಸ್ ಪಾಯಿಂಟ್

* ಜನರ ಒಡನಾಟ ಇಲ್ಲ
* ಪ್ರಚಾರ ಅಖಾಡಕ್ಕೆ ಕಾಂಗ್ರೆಸ್ ಸರ್ಕಾರವೇ ಇಳಿದಿದೆ
* ಜೆಡಿಎಸ್‍ನಿಂದಲೇ ಬೈ ಎಲೆಕ್ಷನ್ ಬಂದಿದೆ ಅನ್ನೋ ಅಪವಾದ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+