ಬೆಂಗಳೂರು ಗ್ರಾಮಾಂತರ, ಚುನಾವಣಾ ವಿಶ್ಲೇಷಣೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಯನ್ನು ಎರಡು ಕುಟುಂಬಗಳ ನಡುವಿನ ಫೈಟ್ ಅಂತಾನೇ ಹೇಳಲಾಗ್ತಿದೆ. ಎಚ್‍ಡಿಕೆ ವರ್ಸಸ್ ಡಿಕೆಶಿ ನಡುವಿನ ಗುದ್ದಾಟದಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲವಿದೆ. ಜೆಡಿಎಸ್‍ನಿಂದ ಎಚ್‍ಡಿಕೆ ಪತ್ನಿ ಅನಿತಾ, ಕಾಂಗ್ರೆಸ್‍ನಿಂದ ಡಿಕೆಶಿ ಸಹೋದರ ಸುರೇಶ್ ಅಖಾಡದಲ್ಲಿದ್ದಾರೆ. ಆದ್ರೆ ಬಿಜೆಪಿ ಕಣದಿಂದ ಹಿಂದೆ ಸರಿದಿದ್ದು, ಪ್ರತ್ಯಕ್ಷವಾಗಿ ಜೆಡಿಎಸ್‍ಗೆ ಜೈ ಅಂದಿದೆ. ಸಮಾಜವಾದಿ ಪಕ್ಷ ಕಾಂಗ್ರೆಸ್ ಬೆನ್ನಿಗೆ ನಿಂತಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿ ವಿಧಾನಸಭಾ ಕ್ಷೇತ್ರಗಳಲ್ಲಿ 3ರಲ್ಲಿ ಜೆಡಿಎಸ್, 3ರಲ್ಲಿ ಕಾಂಗ್ರೆಸ್, ತಲಾ ಒಂದು ಕ್ಷೇತ್ರದಲ್ಲಿ ಬಿಜೆಪಿ, ಸಮಾಜವಾದಿ ಪಕ್ಷ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಮಬಲದ ಪೈಪೋಟಿ ಇದೆ.
2009ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಭರ್ಜರಿಯಾಗಿಯೇ ವಿಜಯ ಸಾಧಿಸಿತ್ತು. ಜೆಡಿಎಸ್ ರಾಜಾಧ್ಯಕ್ಷರಾದ ಕುಮಾರಸ್ವಾಮಿ 1 ಲಕ್ಷದ ಮೂವತ್ತು ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜೆಡಿಎಸ್ 3 ವಿಧಾನಸಭಾ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದರೆ, 5 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು.

ಬೆಂಗಳೂರು ಗ್ರಾ. ಲೋಕಸಭಾ ಕ್ಷೇತ್ರ ಪರಿಚಯ
ರಾಮನಗರ
ಚನ್ನಪಟ್ಟಣ
ಕನಕಪುರ
ಮಾಗಡಿ
ಕುಣಿಗಲ್
ರಾಜರಾಜೇಶ್ವರಿನಗರ
ಬೆಂಗಳೂರು ದಕ್ಷಿಣ
ಆನೇಕಲ್
ಪ್ರಮುಖ ಹುರಿಯಾಳುಗಳು
ಕಾಂಗ್ರೆಸ್ - ಡಿ.ಕೆ. ಸುರೇಶ್
ಜೆಡಿಎಸ್ - ಅನಿತಾ ಕುಮಾರಸ್ವಾಮಿ
ಒಟ್ಟು ಮತದಾರರು- 19,03,363
ಪುರುಷರು - 9,86,387
ಮಹಿಳೆಯರು - 9,16,976
ಚುನಾವಣೆಯ ದಿನಾಂಕ : ಆಗಸ್ಟ್ 21, ಬುಧವಾರ
ಫಲಿತಾಂಶ : ಆಗಸ್ಟ್ 24, ಶನಿವಾರ












Click it and Unblock the Notifications