ಗೌಡರು Vs ಡಿಕೆಶಿ ಹಾಕ್ಯಾಟ ಇಂದು ನಿನ್ನೆಯದಲ್ಲ
ಮಾಜಿ ಪ್ರಧಾನಿ, ಮಜಿ ಮುಖ್ಯಮಂತ್ರಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ 81ರ ಹರೆಯದ (ಮೇ 18, 1933) ಹರದನಹಳ್ಳಿ ದೊಡ್ಡೇಗೌಡರ ಮಗ ದೇವೇಗೌಡರು ಮತ್ತು ಕಾಂಗ್ರೆಸ್ ಪಕ್ಷದ ನಾಯಕ, 51ರ ಹರೆಯದ ದೊಡ್ಡಹಳ್ಳಿ ಕೆಂಪೇಗೌಡರ ಮಗ ಶಿವಕುಮಾರ್ ಕುಟುಂಬದ ನಡುವಿನ ರಾಜಕೀಯ ಹಾಕ್ಯಾಟ ಇಂದು ನಿನ್ನೆಯದಲ್ಲ. ಸರಿಸುಮಾರು 1985ರಿಂದ ರಾಜಕೀಯ ಅಂಗಳದಲ್ಲಿ ಜಂಗಿಕುಸ್ತಿ ಆಡುತ್ತಲೇ ಬಂದಿದ್ದಾರೆ. ಇಲ್ಲಿಯವರೆಗೆ ಯಾರೂ ಯುದ್ಧವನ್ನು ಬಿಟ್ಟುಕೊಟ್ಟಿಲ್ಲ. ಆ ಕುಟುಂಬ ಕದನದ ವಿವರ ಕೆಳಗಿದೆ.
ಏನೀ ಕುಟುಂಬ ಕದನ?
* 1985ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದ ಚುನಾವಣೆ ದೇವೇಗೌಡ ವರ್ಸಸ್ ಡಿಕೆಶಿವಕುಮಾರ್ ನಡುವೆ ಫೈಟ್. ದೇವೇಗೌಡರಿಗೆ ಗೆಲುವು.
* 1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದ ಚುನಾವಣೆ. ಡಿಕೆಶಿ ವರ್ಸಸ್ ಎಚ್‍ಡಿಕೆ ನಡುವೆ ಫೈಟ್. ಡಿ.ಕೆ.ಶಿವಕುಮಾರ್‍ಗೆ ಗೆಲುವು.
* 2002ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆ. ದೇವೇಗೌಡ ವರ್ಸಸ್ ಡಿಕೆಶಿವಕುಮಾರ್ ನಡುವೆ ಫೈಟ್. ಮಾಜಿ ಪ್ರಧಾನಿ ದೇವೇಗೌಡಗೆ ಗೆಲುವು.
* 2013 - ಬೆಂಗಳೂರು ಗ್ರಾ. ಲೋಕಸಭಾ ಕ್ಷೇತ್ರದ ಉಪಚುನಾವಣೆ. ಅನಿತಾ ಕುಮಾರಸ್ವಾಮಿ ವರ್ಸಸ್ ಡಿ.ಕೆ.ಸುರೇಶ್ ನಡುವೆ ಫೈಟ್ ಗೆಲುವು ಯಾರಿಗೆ?

ಭಾರತೀಯ ಜನತಾ ಪಕ್ಷದ ಬೆಂಬಲದಿಂದ ಕಣಕ್ಕಿಳಿದಿರುವ ಅನಿತಾ ಕುಮಾರಸ್ವಾಮಿ ಅವರು ಕಾಂಗ್ರೆಸ್ ಪರವಾಗಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ಡಿಕೆಶಿ ಸಹೋದರ ಡಿಕೆ ಸುರೇಶ್ ಅವರಿಗೆ ಟಕ್ಕರ್ ನೀಡಲಿದ್ದಾರೆ. ಆಗಸ್ಟ್ 21ರಂದು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಸೆಣಸಲಿದ್ದಾರೆ. ಯಾರಿಗೆ ಗೆಲುವು ಲಭಿಸಲಿದೆ ಎಂಬುದು ಆ.24ರ ಶನಿವಾರ ಪ್ರಕಟವಾಗುವ ಫಲಿತಾಂಶದಿಂದ ತಿಳಿದುಬರಲಿದೆ.
ಕಳೆದ ಬಾರಿಯ ಹಿನ್ನೋಟ : 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ, ಜೆಡಿಎಸ್ ಪಕ್ಷ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈ ಪೈಕಿ, ಯಾವ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಅತಿ ಹೆಚ್ಚು ಮತಗಳು ಸಿಕ್ಕಿತ್ತು ಅನ್ನೋದನ್ನ ಇದೀಗ ನೋಡೋಣ.
ಯಾವ ಕ್ಷೇತ್ರದಲ್ಲಿ ಯಾರಿಗೆ ಲೀಡ್?
ಕುಣಿಗಲ್ - ಜೆಡಿಎಸ್
ರಾಜರಾಜೇಶ್ವರಿನಗರ - ಬಿಜೆಪಿ
ಬೆಂಗಳೂರು ದಕ್ಷಿಣ - ಬಿಜೆಪಿ
ಆನೇಕಲ್ - ಬಿಜೆಪಿ
ಮಾಗಡಿ - ಜೆಡಿಎಸ್
ರಾಮನಗರ - ಜೆಡಿಎಸ್
ಕನಕಪುರ - ಜೆಡಿಎಸ್
ಚನ್ನಪಟ್ಟಣ - ಜೆಡಿಎಸ್
ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನ ಕುಮಾರಸ್ವಾಮಿ ಎಲ್ಲ ಅಭ್ಯರ್ಥಿಗಳಿಂದ ಅತಿ ಹೆಚ್ಚು ಅಂದರೆ, 58366 ಮತಗಳನ್ನ ಪಡೆದಿದ್ದರು. ರಾಜರಾಜೇಶ್ವರಿನಗರದಲ್ಲಿ ಬಿಜೆಪಿಯ ಸಿ.ಪಿ.ಯೋಗೇಶ್ವರ್‍ಗೆ 64331 ಮತಗಳು ಸಿಕ್ಕಿದ್ವು. ಬೆಂಗಳೂರು ದಕ್ಷಿಣದಲ್ಲೂ 79171 ಮತಗಳನ್ನ ಪಡೆದಿದ್ದ ಬಿಜೆಪಿಯ ಸಿ.ಪಿ.ಯೋಗೇಶ್ವರ್, ಎಲ್ಲರಿಗಿಂತ ಮುಂದಿದ್ದರು. ಇತ್ತ ಆನೇಕಲ್‍ನಲ್ಲೂ ಬಿಜೆಪಿಯೇ ಲೀಡ್ ಸಾಧಿಸಿತ್ತು. ಆದ್ರೆ, ಮಾಗಡಿ, ರಾಮನಗರ, ಕನಕಪುರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಭಾರೀ ಮುನ್ನಡೆ ಸಾಧಿಸಿದ್ದ ಜೆಡಿಎಸ್‍ನ ಕುಮಾರಸ್ವಾಮಿ ಭರ್ಜರಿ ಜಯ ಸಾಧಿಸಿದ್ದರು.
ಈ ಬಾರಿಯ ಚುನಾವಣೆಯಲ್ಲಿ, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಗೆ ಬಿಜೆಪಿ ಬೆಂಬಲ ನೀಡಿದೆ. ಆದ್ರೆ, ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಸಿ.ಪಿ.ಯೋಗೀಶ್ವರ್, ಸಮಾಜವಾದಿ ಪಕ್ಷ ಸೇರಿದ್ದು, ಕಾಂಗ್ರೆಸ್‍ಗೆ ಬೆಂಬಲ ಘೋಷಿಸಿದ್ದಾರೆ. ಹೀಗಾಗಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪಚುನಾವಣೆ, ಕಾಂಗ್ರೆಸ್ ಸರ್ಕಾರ ಹಾಗೂ ಜೆಡಿಎಸ್‍ನ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿದೆ.












Click it and Unblock the Notifications