ಬೆಂಗಳೂರು ಗ್ರಾ. : ಗೆಲುವಿನ ಸರದಾರರಿವರು
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಇತಿಹಾಸ ಗಮನಿಸೋದಾದ್ರೆ, 1967ರಲ್ಲಿ ಕಾಂಗ್ರೆಸ್‍ನ ಎಂ.ವಿ ರಾಜಶೇಖರನ್ ಇಲ್ಲಿ ಜಯ ಸಾಧಿಸಿದ್ದರು. ನಂತರ 1972ರಲ್ಲಿ ಕಾಂಗ್ರೆಸ್‍ನವರೇ ಆದ ಜಾಫರ್ ಷರೀಫ್ ಗೆದ್ದಿದ್ದರು. ಇದಾದ ಬಳಿಕ 1977ರಿಂದ 96ರವರೆಗೂ ಕಾಂಗ್ರೆಸ್‍ನ ಚಂದ್ರಶೇಖರ ಮೂರ್ತಿ ಅವರೇ ಜಯ ಸಾಧಿಸುತ್ತಾ ಬಂದ್ದರು.
ಆದರೆ, 1996ರಲ್ಲಿ ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್‍ಗೆ ಶಾಕ್ ಕೊಟ್ಟರು. ನಂತರ 1999ರಲ್ಲಿ ನಡೆದ ಚುನಾವಣೆಯಲ್ಲಿ ಚಂದ್ರಶೇಖರ್ ಮೂರ್ತಿ ಅವರನ್ನೇ ಮತದಾರರು ಗೆಲ್ಲಿಸಿದರು. ದುರಾದೃಷ್ಟವಶಾತ್ 2002ರಲ್ಲಿ ಚಂದ್ರಶೇಖರ್ ಮೂರ್ತಿ ನಿಧನರಾದರು. ಆಗ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಜಯಭೇರಿ ಬಾರಿಸಿದರು.

ಆದರೆ, 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‍ನ ತೇಜಸ್ವಿನಿ, ದೇವೇಗೌಡರಿಗೆ ಭರ್ಜರಿ ಶಾಕ್ ಕೊಟ್ಟರು. ನಂತರ 2009ರ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸುವ ಮೂಲಕ, ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಂಡರು.
ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣಾ ಕಣದಲ್ಲಿ ಕುಟುಂಬ ರಾಜಕಾರಣದ್ದೇ ಸುದ್ದಿ, ಸದ್ದುಗದ್ದಲ. ದೇವೇಗೌಡ ಹಾಗೂ ಡಿಕೆ ಶಿವಕುಮಾರ್ ಕುಟುಂಬಗಳ ನಡುವೆ 4ನೇ ಬಾರಿಗೆ ಕದನ ಏರ್ಪಟ್ಟಿರೋದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಎರಡೂ ಕುಟುಂಬಗಳು ಕೆಸರೆರಚಾಟದಲ್ಲಿ ತೊಡಗಿವೆ. ಜನರು ಯಾರಿಗೆ ಬುದ್ಧಿ ಕಲಿಸಲಿದ್ದಾರೆ ಎಂಬುದು ಆ.21ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಗೊತ್ತಾಗಲಿದೆ.












Click it and Unblock the Notifications