ಬೆಂಗ್ಳೂರು ಗ್ರಾಮಾಂತರ : ಒಣ ಪ್ರತಿಷ್ಠೆಯ ಹಸಿ ಬೈಎಲೆಕ್ಷನ್

ಲೋಕಸಭೆ ಉಪಚುನಾವಣೆಯ ಕಾದಾಟ ರಂಗು ರಂಗಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ, ಜೆಡಿ(ಎಸ್)ನ ಅನಿತಾ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಡಿಕೆ ಸುರೇಶ್ ಅವರು ಪಾರ್ಲಿಮೆಂಟಿನ ಮೆಟ್ಟಿಲೇರಲು ಸಜ್ಜಾಗಿ ನಿಂತಿದ್ದಾರೆ. ಅವರಿಬ್ಬರ ಹಿಂದೆ ಪ್ರಬಲ ಶಕ್ತಿಯಾಗಿ ನಿಂತಿರುವ ಎಚ್‍ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ ನಡುವಣ ಕದನ ಭಾರೀ ಕುತೂಹಲ ಮೂಡಿಸಿದೆ. ಕ್ಷೇತ್ರದ ರಾಜಕೀಯ ಜಿದ್ದಾಜಿದ್ದಿ ಕುರಿತು, ಒಂದು ರಿಪೋರ್ಟ್ ಇಲ್ಲಿದೆ.

ಮುಂದಿನ ಲೋಕಸಭೆ ಚುನಾವಣೆ ಇನ್ನು ಕೇವಲ ಕೆಲವೇ ತಿಂಗಳಿದ್ದರೂ ಈ ಉಪಚುನಾವಣೆಯ ಕಣ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಒಣ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಇಲ್ಲಿಯ ಗೆಲುವು ಮುಂದಿನ ದೊಡ್ಡ ಸಮರಕ್ಕೆ ನಾಂದಿ ಹಾಡಲಿದೆ ಎಂದು ಎರಡೂ ಪಕ್ಷಗಳು ನಂಬಿವೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ, ಒಕ್ಕಲಿಗರ ಪ್ರಾಬಲ್ಯವಿರೋ ಕ್ಷೇತ್ರ. ದಲಿತರು ಹಾಗೂ ಮುಸ್ಲಿಮರೇ ನಿರ್ಣಾಯಕ ಮತದಾರರು. ಈ ಕ್ಷೇತ್ರದ ಸಂಸದರಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, 2013ರಲ್ಲಿ ನಡೆದ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಬೈ ಎಲೆಕ್ಷನ್ ಬಂದಿದೆ. ಈ ಕ್ಷೇತ್ರವನ್ನು ಹಿಂದೆ ಯಾರ್ಯಾರು ಪ್ರತಿನಿಧಿಸಿದ್ದರು ಎಂಬುದರತ್ತ ಒಂದು ನೋಟ ಹರಿಸೋಣ.

Bangalore Rural Lok Sabha by poll : Constituency history

ಕ್ಷೇತ್ರದ ಹಿನ್ನೆಲೆ :

1967 - ಎಂ.ವಿ ರಾಜಶೇಖರನ್ - ಕಾಂಗ್ರೆಸ್
1972 - ಜಾಫರ್ ಷರೀಫ್ - ಕಾಂಗ್ರೆಸ್
1977-96 - ಚಂದ್ರಶೇಖರ ಮೂರ್ತಿ - ಕಾಂಗ್ರೆಸ್
1996 - ಎಚ್.ಡಿ.ಕುಮಾರಸ್ವಾಮಿ - ಜೆಡಿಎಸ್
1999 - ಚಂದ್ರಶೇಖರ್ ಮೂರ್ತಿ - ಕಾಂಗ್ರೆಸ್
2002 - ಚಂದ್ರಶೇಖರ್ ಮೂರ್ತಿ ನಿಧನ
2002 ಉಪಚುನಾವಣೆ - ಎಚ್.ಡಿ.ದೇವೇಗೌಡ - ಜೆಡಿಎಸ್
2004 - ತೇಜಸ್ವಿನಿ - ಕಾಂಗ್ರೆಸ್
2009 - ಎಚ್.ಡಿ.ಕುಮಾರಸ್ವಾಮಿ - ಜೆಡಿಎಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+