ಹೃದಯಾಘಾತವಾಗಿದ್ದರೂ ಮಹಿಳೆ ಸಾಯಲಿಲ್ಲ
ಸಿಡ್ನಿ, ಆಗಸ್ಟ್ 20: ಇದಕ್ಕೇ ಹೇಳೋದು - ವೈದ್ಯೋ ನಾರಾಯಣೋ ಹರಿ ಎಂದು. ಏನಪ್ಪಾ ಅಂದರೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವನಿಸಾ ಟನಾಸಿಯೊ ಎಂಬ 41 ವರ್ಷದ ಮಹಿಳೆ 41 ನಿಮಿಷ ಕಾಲ ಸತ್ತು, ಮರಳಿ ಬದುಕಿಬಂದಿದ್ದಾಳೆ.
ಜೀವಂತವಾಗಿರಬೇಕೆಂದರೆ ಹೃದಯ ಟು ಮೆದುಳು ರಕ್ತ ಪರಿಚಲನೆ ನಿರಂತರವಾಗಿ ಸಾಗಬೇಕು. ಒಂದೇ ಕ್ಷಣ ನಿಂತುಹೋದರೂ ಅಷ್ಟೇಯಾ... ಸ್ವರ್ಗವೋ ನರಕವೋ ಅಂತೂ ಈ ಲೋಕಕ್ಕೆ ಗುಡ್ ಬೈ ಹೇಳಬೇಕು.

ಸಿಡ್ನಿಯ ವನಿಸಾ ಕೇಸಿನಲ್ಲೂ ಹೀಗೆ ಆಯ್ತು. 2 ಮಕ್ಕಳ ಈ ತಾಯಿಗೆ ಕಳೆದ ವಾರ ತೀವ್ರ ಹೃದಯಾಘಾತವಾಯ್ತು. ತಕ್ಷಣ ಆಕೆ ಆಸ್ಪತ್ರೆ ಹಾದಿ ಹಿಡಿದಳು. ಅವಳ ಹೃದಯದ ಒಂದು ಅಪಧಮನಿ ಬಂದ್ ಆಗಿತ್ತು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಸತ್ತಿದ್ದಾಳೆಂದು ತೀರ್ಮಾನಿಸಿದರು. ಆದರೂ ಯಾಕೋ ಕೇಸನ್ನು ಕೈಚೆಲ್ಲದೆ ಆಕೆಯನ್ನು ಬದುಕಿಸುವ ಪ್ರಯತ್ನದಲ್ಲಿ ತೊಡಗಿದರು.
ಹೃದಯದ ಒಂದು ಅಪಧಮನಿ ಕ್ಲೋಸ್ ಆಗಿಬಿಟ್ಟಿದೆ. ಮೆದುಳಿಗೆ ರಕ್ತ ಹೋಗ್ತಿಲ್ಲ. ಏನು ಮಾಡಬೇಕು? ತಕ್ಷಣ ವೈದ್ಯರು ಮಾಡಿದ್ದು ಇಷ್ಟೇಯಾ... ಮೊದಲು ಆಕೆಯ ಮೆದುಳಿಗೆ ರಕ್ತ ಸರಬರಾಜು ಆಗುವುದನ್ನು ಜಾರಿಯಲ್ಲಿಟ್ಟಿರಬೇಕು. ಅದಕ್ಕಾಗಿ ಲುಕಸ್- 2ಟು ಎನ್ನುವ ವೈದ್ಯಕೀಯ ಉಪಕರಣದಿಂದ ಆಕೆಗೆ ಮಿದುಳಿಗೆ ರಕ್ತ ಚಲಿಸುವಂತೆ ನೋಡಿಕೊಂಡರು. ಅಲ್ಲಿಗೆ ಆಕೆ ಜೀವಂತವಾಗಿದ್ದಾಳೆ ಎಂದೇ ಅರ್ಥ.
ಆದರೆ ಅಷ್ಟಕ್ಕೇ ಸುಮ್ಮನಾಗುವಂತಿಲ್ಲ. ಕ್ಲೋಸ್ ಆಗಿರುವ ಹೃದಯದ ಒಂದು ಅಪಧಮನಿಯ (ಕೊಳವೆ ಮಾರ್ಗ) ಬಾಗಿಲನ್ನು ತೆರೆಯಲೇಬೇಕು. ಸರಿ, ಆ ಪ್ರಯತ್ನದಲ್ಲಿ ತೊಡಗಿ ಕೇವಲ 41 ನಿಮಿಷಗಳಲ್ಲಿ ಅದನ್ನು ಸರಿದಾರಿಗೆ ತಂದರು ಅನ್ನಿ. ಹೃದ್ರೋಗ ತಜ್ಞ ವಾಲಿ ಅಹ್ಮರ್ ಶಸ್ತ್ರಚಿಕಿತ್ಸೆ ಮೂಲಕ ಆಕೆಯನ್ನು ಯಶಸ್ವಿಯಾಗಿ ಬದುಕಿಸಿಕೊಟ್ಟರು ಅನ್ನಿ.
ಸಿಡ್ನಿಯ ವನಿಸಾ ಈಗ ಮಾಮೂಲಿಯಾಗಿ ನಮ್ಮ ನಿಮ್ಮಂತೆ ಉಸಿರಾಡುತ್ತಿದ್ದಾರೆ ಅನ್ನಿ. ಹಾಗಂತ ಆಸ್ಟ್ರೇಲಿಯಾದಲ್ಲಿ ಇಂತಹ ಪವಾಡಗಳು ಇದೇ ಮೊದಲಲ್ಲ ಅನ್ನಿ. ಆಸ್ಟ್ರೇಲಿಯಾದಲ್ಲಿ ಸಿಗುವ ಏಕೈಕ 'ಲುಕಸ್-2' ಎಂಬ ವೈದ್ಯಕೀಯ ಉಪಕರಣದಿಂದ (cardiopulmonary resuscitation procedure) ಆಗಾಗ ಕೆಲವರು ಬದುಕಿ ಬರುತ್ತಿದ್ದಾರೆ. ಬೇರೆ ಕಡೆ ಅಂತಹ ಸೌಲಭ್ಯ ಇಲ್ಲದಿರುವುದರಿಂದ ವೈದ್ಯೋ ನಾರಾಯಣೋ ಯಮಃ ಆಗುತ್ತಿದ್ದಾರೆ, ಅಷ್ಟೇ!












Click it and Unblock the Notifications