ತೆರಿಗೆ ರಹಿತ ಫ್ಲಾಟ್ ಟಿವಿ ಆಮದು ನಿಷೇಧ

ಡಾಲರ್ ಎದುರು ರುಪಾಯಿ ಆಪಮೌಲ್ಯ ಮುಂದುವರೆದಿರುವ ಕಾರಣ ಅನೇಕ ರೀತಿ ಐಷಾರಾಮಿ ವಸ್ತುಗಳು, ಚಿನ್ನ ಮುಂತಾದ ಬೆಲೆಬಾಳುವ ಲೋಹಗಳ ಆಮದಿನ ಮೇಲೆ ಹೆಚ್ಚಿನ ಪ್ರಮಾಣ ಸುಂಕ ವಿಧಿಸಲು ಸರ್ಕಾರ ಮುಂದಾಗಿದೆ. ಇದರ ಜೊತೆಗೆ ಅನೇಕ ವಸ್ತುಗಳ ಆಮದು ನಿಷೇಧ, ನಿರ್ಬಂಧಕ್ಕೆ ಸರ್ಕಾರ ಮುಂದಾಗಿದೆ.
ಸರ್ಕಾರ ಸೋಮವಾರ ಹೊರಡಿಸಿದ ಆದೇಶದ ಪ್ರಕಾರ, ತೆರಿಗೆ ರಹಿತ ಫ್ಲಾಟ್ ಪರದೆವುಳ್ಳ ಟಿವಿಗಳನ್ನು ಆಮದು ಮಾಡಿಕೊಳ್ಳುವಂತಿಲ್ಲ. ಇದರಲ್ಲಿ ಎಲ್ ಸಿಡಿ, ಎಲ್ ಇಡಿ,ಪ್ಲಾಸ್ಮಾ ಹಾಗೂ ಎಚ್ ಡಿ ಮುಂತಾದ ಟಿವಿಗಳು ಸೇರಿವೆ. ತೆರಿಗೆ ರಹಿತ ಟಿವಿಗಳು ಉಚಿತ ಬ್ಯಾಗೇಜ್ ರಿಯಾಯಿತಿ ಸಿಗುತ್ತಿತ್ತು. ಇನ್ಮುಂದೆ ಎಲ್ಲಕ್ಕೂ ಹೆಚ್ಚಿನ ಸುಂಕ ತೆರಬೇಕಾಗುತ್ತದೆ.
ವಿದೇಶಗಳಿಂದ ಕಡಿಮೆ ವೆಚ್ಚದಲ್ಲಿ ಫ್ಲಾಟ್ ಪರದೆವುಳ್ಳ ಟಿವಿ ಖರೀದಿಸಿ ಯಾವುದೇ ಅಧಿಕ ವೆಚ್ಚ(ಸುಂಕದ ರೂಪದಲ್ಲಿ) ನೀಡದೆ ವಿಮಾನ ನಿಲ್ದಾಣದ ಸುಂಕಾಧಿಕಾರಿಗಳ ಪರೀಕ್ಷೆಯಲ್ಲಿ ಪಾಸಾಗಿ ಮನೆಗೆ ತಲುಪಿಸುತ್ತಿದ್ದ ಯಾತ್ರಿಗಳು ಇನ್ಮುಂದೆ ಸುಂಕ ಕಟ್ಟಬೇಕಾಗುತ್ತದೆ.
ಈ ಹೊಸ ನಿಮಯ ಆಗಸ್ಟ್ 26ರಿಂದ ಜಾರಿಗೆ ಬರಲಿದ್ದು, ಫ್ಲಾಟ್ ಟಿವಿ ಖರೀದಿ ಮಾಡಿದ್ದರೆ ಭಾರತದೊಳಗೆ ಪ್ರವೇಶ ಪಡೆದ ಮೇಲೆ ಹೆಚ್ಚಿನ ಸುಂಕ ತೆರಬೇಕಾಗುತ್ತದೆ.
ಚಾಲ್ತಿ ವಿತ್ತೀಯ ಕೊರತೆ(CAD) ನಿಭಾಯಿಸಲು ಹಾಗೂ ರುಪಾಯಿ ಅಪಮೌಲ್ಯ ತಡೆಗಟ್ಟಲು ಸರ್ಕಾರ ಈ ರೀತಿ ಕ್ರಮಕ್ಕೆ ಮುಂದಾಗಿದೆ. ಚಿನ್ನ, ಪ್ಲಾಟಿನಮ್ ಹಾಗೂ ಬೆಳ್ಳಿ ಆಮದಿನ ಮೇಲೆ ಶೇ 10 ರಷ್ಟು ಹೆಚ್ಚುವರಿ ಸುಂಕ ವಸೂಲಿ ಮಾಡಲಾಗುತ್ತಿದೆ.
ಅನಗತ್ಯ ವಸ್ತುಗಳ ಆಮದು ಮೇಲೆ ನಿಯಂತ್ರಣ ಸಾಧಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಕೂಡಾ ಸರ್ಕಾರದ ನಿಯಮಗಳಿಗೆ ತಕ್ಕಂತೆ ವರ್ತಿಸಿದರೆ ರುಪಾಯಿ ಮೌಲ್ಯದಲ್ಲಿ ಚೇತರಿಕೆ ಹೊಂದಬಹುದಾಗಿದೆ ಎಂದು ಪಿ ಚಿದಂಬರಂ ಹೇಳಿದ್ದಾರೆ. ಡಾಲರ್ ಎದುರು ರುಪಾಯಿ ಮೌಲ್ಯ 64.05 ಗೆ ಕುಸಿದಿದೆ. (ಪಿಟಿಐ)












Click it and Unblock the Notifications