ಕೋಲ್ಕೊತ್ತಾ ವಿಮಾನದಲ್ಲಿ ಜಪಾನಿ ಯುವತಿಗೆ ಕಿರುಕುಳ

ವಿಮಾನ ಇನ್ನೇನು ನಿಲ್ದಾಣದಲ್ಲಿ ಇಳಿಯಲಿದೆ ಅನ್ನುವಾಗ ವಿಮಾನದ ಸಿಬ್ಬಂದಿ ನಿಲ್ದಾಣದ ಅಧಿಕಾರಿಗಳು ಮತ್ತಿತರ ಸಂಸ್ಥೆಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರು. ಅದಾಗುತ್ತಿದ್ದಂತೆ ವಿಮಾನ ಲ್ಯಾಂಡಿಗ್ ಆದಾಗ ಪೊಲೀಸರು ಆರೋಪಿ ಪ್ರಯಾಣಿಕನನ್ನು ಬಂಧಿಸಿದರು.
ಬಾಧಿತ ಯುವತಿಯು 'ವಿಮಾನ ಪ್ರಯಾಣದ ವೇಳೆ ಆರೋಪಿಯು 2 ಬಾರಿ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ' ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿ ಉದ್ಯಮಿಯನ್ನು ನಾರಾಯಣ ಸಿಂಗ್ ಎಂದು ಗುರುತಿಸಲಾಗಿದೆ. ಆದರೆ 'ಯುವತಿಯ ಮೇಲೆ ಅತ್ಯಾಚಾರವೆಸಗುವುದಾಗಲಿ ಅಥವಾ ಲೈಂಗಿಕ ದೌರ್ಜನ್ಯವೆಸಗುವ ಉದ್ದೇಶ ತನಗಿರಲಿಲ್ಲ. ನಿದ್ದೆ ಮಾಡಿದ ನಂತರ ಕಾಲುಚಾಚಿ ಮೈಮುರಿಯುವಾಗ ಆಕಸ್ಮಿಕವಾಗಿ ಆಕೆಯನ್ನು ತಾಕಿರಬಹುದಷ್ಟೇ' ಎಂದು ನಾರಾಯಣ ಸಿಂಗ್ ಅಲವತ್ತುಕೊಂಡಿದ್ದಾರೆ.
ಭಾರತೀಯ ಸಂಸ್ಕೃತಿ ಅಧ್ಯಯನ ವಿಷಯವಾಗಿ ಮದರ್ ಥೆರೆಸಾ ಸ್ಥಾಪಿತ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಲು ಕೋಲ್ಕತ್ತಾಗೆ ಬಂದಿರುವುದಾಗಿ ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ಸದರಿ ಪ್ರಕರಣವನ್ನು ಜಪಾನ್ ರಾಯಭಾರ ಕಚೇರಿಯ ಗಮನಕ್ಕೆ ತರಲಾಗಿದೆ ಎಂದು ಪೊಲೀಸ್ ಹೆಚ್ಚುವರಿ ಆಯುಕ್ತ ಸಂತೋಷ್ ನಿಂಬಾಳ್ಕರ್ ತಿಳಿಸಿದ್ದಾರೆ.












Click it and Unblock the Notifications