ವಿಶ್ವದ 500 ಶೈಕ್ಷಣಿಕ ಸಂಸ್ಥೆ ಪಟ್ಟಿಯಲ್ಲಿ IIScಗಷ್ಟೇ ಸ್ಥಾನ

Academic Ranking of World Universities (ARWU) ಪ್ರಕಾರ 2013ನೇ ಶೈಕ್ಷಣಿಕ ಸಾಲಿನಲ್ಲಿ ವಿಶ್ವದ 500 ಶ್ರೇಷ್ಠ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ IIScಗಷ್ಟೇ ಸ್ಥಾನ ದೊರೆತಿದೆ.
104 ವರ್ಷಗಳಷ್ಟು ಹಳೆಯದಾದ IISc 300ರಿಂದ 400ರ ಗಡಿಯಲ್ಲಿ ಕಾಣಿಸಿಕೊಂಡಿದೆ. ಕಳೆದ ವರ್ಷ ರಸಾಯನಶಾಸ್ತ್ರ ವಿಭಾಗದಲ್ಲಿ 45ನೇ ಸ್ಥಾನ ಗಳಿಸಿದ್ದ IISc, ಈ ಬಾರಿ 43ನೇ ಸ್ಥಾನಕ್ಕೆ ಏರಿದೆ. Computer Science ವಿಭಾಗದಲ್ಲಿಯೂ ಸಂಸ್ಥೆ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. 2012ರಲ್ಲಿ ಈ ವಿಭಾಗದಲ್ಲಿ 101-150 ಗಡಿಯಲ್ಲಿತ್ತು. ಅದೀಗ 51-75ರ ವ್ಯಾಪ್ತಿಗೆ ಒಳಪಟ್ಟಿದೆ. ಇನ್ನು ಗಣಿಯ ವಿಭಾಗದಲ್ಲಿ ಕಳೆದ ವರ್ಷದಂತೆ 151-200 ಸ್ಲಾಟಿನಲ್ಲಿಯೆ ಇದೆ.
ಹಾರ್ವರ್ಡ್ ಅಗ್ರ ಸ್ಥಾನದಲ್ಲಿದ್ದರೆ Stanford and University of California, Berkeley ಎರಡು ಮತ್ತು ಮೂರನೆಯ ಸ್ಥಾನದಲ್ಲಿವೆ. ಮೆಸಾಚ್ಯುಸೆಟ್ಸ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ನಾಲ್ಕನೆಯ ಸ್ಥಾನದಲ್ಲಿವೆ.
ಕಂಪ್ಯೂಟರ್ ಸೈನ್ಸಿನಲ್ಲಿ Stanford University ಮುಂಚೂಣಿಯಲ್ಲಿದ್ದರೆ MIT ದ್ವಿತೀಯ ಸ್ಥಾನದಲ್ಲಿದೆ. Princeton University ಗಣಿತದಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ.
ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಎಕನಾಮಿಕ್ಸ್ ವಿಷಯಗಳಲ್ಲಿ ಹಾರ್ವರ್ಡ್ ವಿವಿ ಅಗ್ರಪಟ್ಟ ಅಬಾಧಿತವಾಗಿದೆ. ಸದರಿ ಸಮೀಕ್ಷೆಗಾಗಿ ಪ್ರತಿ ವರ್ಷ ARWU 1,000 ವಿಶ್ವವಿದ್ಯಾಲಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಅಂತಿಮವಾಗಿ ಅದು ತನ್ನ ವೆಬ್ ಸೈಟಿನಲ್ಲಿ 500 ಶಿಕ್ಷಣ ಸಂಸ್ಥೆಗಳನ್ನು ಆಯ್ದು ಸೂಕ್ತ ಸ್ಥಾನಮಾನ ನೀಡುತ್ತದೆ.












Click it and Unblock the Notifications