ಮೃಗಾಲಯದಲ್ಲಿ ಬೌ ಬೌ ಎಂದ ಸಿಂಹ!

ಚೀನಾದ ಲೂಹಿ ಪ್ರಾಂತ್ಯದಲ್ಲಿನ ಮೃಗಾಲಯದಲ್ಲಿ ಸಿಂಹ ನೋಡಲು ಹೋಗಿದ್ದ ಪ್ರವಾಸಿಗರು ಅದು ಬೌ ಬೌ ಎಂದು ಬೊಗಳಿದ್ದು ನೋಡಿ ಅಚ್ಚರಿಗೊಂಡಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಅದು ಸಿಂಹವಲ್ಲ, ನಾಯಿ ಎಂದು ತಿಳಿದು ಮೃಗಾಲಯದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಗಿದ್ದೇನು : ಲಿಯೂ ಎಂಬಾತ ರಜೆಯ ಮೋಜಿನಲ್ಲಿ ತನ್ನ ಮಗನನ್ನು ಕರೆದುಕೊಂಡು ಮೃಗಾಲಯಕ್ಕೆ ಹೋಗಿದ್ದಾನೆ. ಎಲ್ಲಾ ಪ್ರಾಣಿಗಳು ಹೇಗೆ ಸ್ವರ ಮಾಡುತ್ತೆ ಎಂದು ಮಗನಿಗೆ ವಿವರಿಸುತ್ತಾ ಬಂದಿದ್ದಾನೆ.
ಸಿಂಹದ ಬಳಿ ಬಂದಾಗ ಅದು ಗಜರಾಜನ ಠೀವಿಯಲ್ಲಿ ಘರ್ಜಿಸುವ ಬದಲು ಬೌ ಬೌ ಎಂದಿದೆ. ಇದನ್ನು ಕೇಳಿ ಲೂ ಗಾಬರಿ ಬಿದ್ದಿದ್ದಾನೆ. ಆತನ ಪುಟ್ಟ ಮಗನಿಗೂ ಗೊಂದಲ ಉಂಟಾಗಿದೆ. ತಕ್ಷಣ ಅವರು ಸಿಬ್ಬಂದಿಯನ್ನು ಕೂಗಿದ್ದಾರೆ.
ಸಿಂಹ ಘರ್ಜಿಸುವುದು ಕೇಳಿದ್ದೇವೆ ಇದು ನಾಯಿಯಂತೆ ಬೊಗಳುತ್ತಿದೆ. ಇದಕ್ಕೆ ಉತ್ತರ ನೀಡಿ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಮೃಗಾಯಲದ ಸಿಬ್ಬಂದಿ ಇದು ಆಫ್ರಿಕನ್ ಸಿಂಹ. ಇದು ಹೀಗೆ ಕೂಗುವುದು ಎಂದು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.
ಮೃಗಾಲಯದ ಸಿಬ್ಬಂದಿ ಮೇಲೆ ಅನುಮಾನಗೊಂಡ ಲೂ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಬಂದಾಗ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಮೃಗಾಲಯದಲ್ಲಿರುವುದು ಸಿಂಹವಲ್ಲ, ಅದು ನಾಯಿಯೇ ಎಂದು ತಮ್ಮ ತಪ್ಪೊಪ್ಪಿಕೊಂಡಿದ್ದಾರೆ.
ಮೃಗಾಲಯದಲ್ಲಿದ್ದ ಸಿಂಹ ಸಂತಾನೋತ್ಪತ್ತಿಗೆ ಹೋಗಿತ್ತು. ಆದ್ದರಿಂದ ಸಿಬ್ಬಂದಿ ಟಿಬೆಟ್ ಪ್ರದೇಶದಲ್ಲಿ ಕಂಡುಬರುವ ಒಂದು ಜಾತಿಯ ನಾಯಿಯನ್ನು ತಂದು ಅಲ್ಲಿ ಕೂಡಿಹಾಕಿದ್ದರು. ಮೈತುಂಬಾ ಕೂದಲು ಇದ್ದ ಅದು ಸಿಂಹದಂತೆಯೇ ಇತ್ತು. ಆದರೆ, ಪ್ರವಾಸಿಗರ ಎದುರು ಬೊಗಳಿ ಸಿಬ್ಬಂದಿಯನ್ನು ಪೇಚಿಗೆ ಸಿಲುಕಿಸಿತು.












Click it and Unblock the Notifications