ಪ್ರಿಯಕರನಿಗಾಗಿ ಅಮ್ಮನ 20 ಕೆಜಿ ಆಭರಣ ಎಗರಿಸಿದಳು

indian-girl-robs-20-kg-gold-jewellery-to-elope-with-pakistani-bf-held
ದುಬೈ, ಆಗಸ್ಟ್ 14: ಇತ್ತ ಭಾರತ ಮತ್ತು ಪಾಕಿಸ್ತಾನ ದೇಶಗಳು ಸ್ವಾತಂತ್ರ್ಯವನ್ನು ಆಚರಿಸಿಕೊಳ್ಳುತ್ತಿವೆ. ಆದರೆ ಅತ್ತ ಪಾಕಿಸ್ತಾನದ ಪ್ರಿಯಕರನಿಗಾಗಿ ಹಂಬಲಿಸಿದ ಭಾರತದ ಯುವತಿಯೊಬ್ಬಳು ಅಮ್ಮನ 20 ಕೆಜಿ ಆಭರಣವನ್ನು ಎಗರಿಸಿ, ಪ್ರಿಯಕರ ಜತೆ ಸ್ವಚ್ಚಂದವಾಗಿ ಸ್ವತಂತ್ರ ಹಕ್ಕಿಯಾಗಲು ಬಯಸಿ, ಕೊನೆಗೆ ಜೈಲು ಹಕ್ಕಿಯಾಗಿದ್ದಾಳೆ. ಜತೆಗೆ ಪ್ರೇಮಬಂಧನದಲ್ಲಿದ್ದ ಪ್ರೇಮಿಯೂ ಪ್ರಿಯತಮೆಯ ಜತೆ ಜೈಲಿನಲ್ಲೀಗ ಬಂಧಿಯಾಗಿದ್ದಾನೆ.

ದುಬೈನಲ್ಲಿ ವಾಸವಾಗಿದ್ದ ಈ ಜೋಡಿ, 5 ಕೋಟಿ ರೂ ಬೆಲೆಬಾಳುವ ಅಮ್ಮನ ಆಭರಣ ದೋಚಿ, ವಿದೇಶದಲ್ಲಿ ಸೆಟ್ಲ್ ಆಗಲು ಬಯಸಿತ್ತು. ಆದರೆ... ಷಾರ್ಜಾ ಪೊಲೀಸರು ಇಬ್ಬರನ್ನೂ ಬಂಧಿಸಿಟ್ಟುಕೊಂಡಿದ್ದಾರೆ.

ಆ ಪಾಗಲ್ ಪ್ರೇಮಿಗೆ ಇನ್ನೂ 20 ವರ್ಷ. ಆಕೆಯನ್ನು ಷಾರ್ಜಾ ಪೊಲೀಸರು NKD ಎಂದಷ್ಟೇ ಗುರುತಿಸಿದ್ದಾರೆ. ಹುಡುಗಿಯ ತಾಯಿಯು ಅಷ್ಟೂ ಬಂಗಾರದಾಭರಣವನ್ನು ಭಾರತಕ್ಕೆ ವಾಪಸ್ ತರಲು ಸಿದ್ಧತೆ ನಡೆಸಿದ್ದಾಗ ಷಾರ್ಜಾ ಕಸ್ಟಮ್ಸ್ ಕಚೇರಿ ಬಳಿ ಈ ಆಭರಣ ದೋಚುವಿಕೆ ಪ್ರಕರಣ ನಡೆದಿದೆ.

ಕಚೇರಿ ಬಳಿಗೆ ಅಮ್ಮನೊಂದಿಗೆ ಬಂದವಳೇ ತಾನು ಅಪಹರಣಕ್ಕೀಡಾಗುವ ನಾಟಕವಾಡಿದ್ದಾಳೆ. ಆಭರಣದೊಂದಿಗೆ ಅಮ್ಮನಿಂದ ದೂರವಾಗುತ್ತಿದ್ದಂತೆ ಮೊದಲು ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾಳೆ. ನಂತರ ಸೀದಾ ತನ್ನ ಪ್ರಿಯಕರನ ಮನೆಗೆ ಓಡಿಹೋಗಿದ್ದಾಳೆ.

ಪೊಲೀಸರು ಅವನನ್ನು MAM ಎಂದು ಗುರುತಿಸಿದ್ದು ಜೋಡಿ ಹಕ್ಕಿಗಳು ಪಾಕಿಸ್ತಾನಕ್ಕೆ ಹಾರಿಹೋಗುವ ಯೋಜನೆ ಹಾಕಿಕೊಂಡಿದ್ದವು ಎನ್ನಲಾಗಿದೆ. ಜೋಡಿ ಯೋಜನೆಯಂತೆ ಹುಡುಗಿಯು ವಿಮಾನ ನಿಲ್ದಾಣದಲ್ಲಿ ಇನ್ನೇನು ವಿಮಾನ ಹತ್ತಬೇಕು. ಆ ವೇಳೆಗೆ ಸರಿಯಾಗಿ ಪೊಲೀಸರು ಆಕೆಯನ್ನು ಬಂಧಿಸಿ, ಅವರ ಯೋಜನೆಯನ್ನು ವಿಫಲಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+