ಗನ್ ತೋರಿಸಿ ಮಹಿಳೆಯ ರೇಪ್ ಮಾಡಿದ ಪೇದೆಗಳು

ಆರೋಪಿ ಪೇದೆಗಳಾದ ದೀಪಕ್ ರಾಠಿ ಮತ್ತು ವಿಕಾಸ್ ಚೌಧರಿ ವಿರುದ್ಧ ಸ್ಥಳೀಯ ಪೊಲೀಸರು ಅತ್ಯಾಚಾರ ಮತ್ತು ಲೂಟಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಬಾಧಿತಳ ಮನೆಗೆ ನುಗ್ಗಿದ ಸದರಿ ಪೇದೆಗಳು ಆಕೆಗೆ ಬಂದೂಕು ತೋರಿಸಿ, ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿಪಿ ಸಿಂಗ್ ತಿಳಿಸಿದ್ದಾರೆ.
ಪಾತಕಿಗಳಿಬ್ಬರೂ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದೂ ಅಲ್ಲದೆ ಆಕೆಯ ಮನೆಯಿಂದ ನಗದು ಮತ್ತು ಆಭರಣಗಳನ್ನೂ ದೋಚಿದ್ದಾರೆ. ಘಟನೆಯ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಸಾಯಿಸುವುದಾಗಿಯೂ ಬೆದರಿಕೆಯೊಡ್ಡಿದ್ದರು ಎಂದು ಅವರು ಹೇಳಿದ್ದಾರೆ.
ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮಧ್ಯೆ ಆರೋಪಿ ಪೊಲೀಸರ ವಿರುದ್ಧ ಕಠಿಣಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಧರಣಿ ನಡೆಸಿದ್ದಾರೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications