ಪಕ್ಷದ ನಾಯಕರ ಪಾಲಿಗೆ ರಾಹುಲ್ ಗಾಂಧಿ ಟೀಚರ್!

ಆ.22ರಂದು ಪಕ್ಷದ ಹಿರಿಯ ಮುಖಂಡರ ಸಭೆಯ ನಡೆಯಲಿದೆ, ಸಭೆಯಲ್ಲಿ ಪ್ರಚಾರ ಕಾರ್ಯದಲ್ಲಿ ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಳ್ಳುವ ಕುರಿತು ರಾಹುಲ್ ಗಾಂಧಿ ನಾಯಕರಿಗೆ ಮಾಹಿತಿ ನೀಡಲಿದ್ದಾರೆ.
ಪಕ್ಷದ ನಾಯಕರ ವೆಬ್ ಸೈಟ್ ತೆರೆದು ಪ್ರಚಾರ ಆರಂಭಿಸಲು ಸಭೆಯಲ್ಲಿ ರಾಹುಲ್ ಗಾಂಧಿ ಸೂಚನೆ ನೀಡಲಿದ್ದಾರೆ. ಟ್ವಿಟರ್ ಮತ್ತು ಫೇಸ್ ಬುಕ್ ಗಳ ಖಾತೆಗಳನ್ನು ತೆರೆದು ಜನರೊಂದಿಗೆ ಸಂವಹನ ನಡೆಸುವಂತೆ ರಾಹುಲ್ ಸಲಹೆ ನೀಡಲಿದ್ದಾರೆ.
ಬಿಜೆಪಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಈಗಾಗಲೇ ದೇಶದ ಯುವಕರನ್ನು ತಲುಪುತ್ತಿದೆ. ಅದರಲ್ಲೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಾಮಾಜಿಕ ತಾಣಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲಗಳಲ್ಲೂ ಬಿಜೆಪಿಯನ್ನು ಎದುರಿಸಿ, ಯುವಕರನ್ನು ತಲುಪಬೇಕಾಗಿದೆ. ಆದ್ದರಿಂದ ಪಕ್ಷದ ನಾಯಕರಿಗೆ ಸಾಮಾಜಿಕ ಜಾಲ ತಾಣಗಳ ಮೂಲಕವೂ ಪ್ರಚಾರ ಮಾಡುವಂತೆ ರಾಹುಲ್ ಪಾಠ ಮಾಡಲಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಸಾಮಾಜಿಕ ಜಾಲಗಳ ಪ್ರಭಾವವೂ ಹೆಚ್ಚು ಎಂಬುದು ಈಗಾಗಲೇ ಸಮೀಕ್ಷೆಗಳಿಂದ ಸಾಬೀತಾಗಿದೆ. ಚುನಾವಣೆಯಲ್ಲಿ ಬಹುಮತ ಪಡೆದು ಮತ್ತೊಮ್ಮೆ ಕೇಂದ್ರದಲ್ಲಿ ಸರ್ಕಾರ ಸ್ಥಾಪಿಸಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಸಾಮಾಜಿಕ ಜಾಲತಾಣಗಳ ಸಹಾಯವೂ ಬೇಕಾಗುತ್ತದೆ.
ಇದನ್ನು ಅರಿತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ನಾಯಕರಿಗೆ ಸಾಮಾಜಿಕ ಜಾಲಗಳ ಬಗ್ಗೆ ಮಾಹಿತಿ ನೀಡಲು ಮುಂದಾಗಿದ್ದಾರೆ. ಜುಲೈನಲ್ಲಿ ಸಹ ರಾಹುಲ್ ಸಂವಹನದ ಬಗ್ಗೆ ಪಕ್ಷದ ನಾಯಕರಿಗೆ ತರಬೇತಿ ನೀಡಿದ್ದರು.
(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)












Click it and Unblock the Notifications