ಚಿನ್ನದ ಆಮದು ಸುಂಕ ಜತೆಗೆ ಬೆಲೆಯೂ ಏರಿಕೆ

ನವದೆಹಲಿ, ಆ.14: ಬಂಗಾರದ ಬೆಲೆ ಮಂಗಳವಾರ ಪ್ರತಿ 10 ಗ್ರಾಮ್ ಗೆ 830 ರು ಏರಿದ್ದು ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಚಿನ್ನದ ದರ 29 ಸಾವಿರದ ಗಡಿ ದಾಟಲು ಮುಂದಾಗಿತ್ತು. ಇದು ನಾಲ್ಕು ತಿಂಗಳಲ್ಲಿಯೇ ಗರಿಷ್ಠ ಮಟ್ಟದ ಏರಿಕೆ. ಇದಕ್ಕೆ ಕಾರಣವೂ ಇದೆ. ಸರ್ಕಾರ ಮತ್ತೊಮ್ಮೆ ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಿದೆ.

ಕೇಂದ್ರ ಸರ್ಕಾರ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂಗಳ ಮೇಲಿನ ಆಮದು ಸುಂಕವನ್ನು ಶೇ 8ರಿಂದ ಶೇ10ಕ್ಕೆ ಹೆಚ್ಚಿಸಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಹಳದಿ ಲೋಹದ ದರ ಮತ್ತಷ್ಟು ಹೆಚ್ಚಲಿದೆ, ಜತೆಗೆ ಶ್ರಾವಣ ಮಾಸ ಆರಂಭವಾಗಿರುವುದರಿಂದ ಮದುವೆ ಮತ್ತು ಸಾಲು ಸಾಲು ಹಬ್ಬಗಳ ಕಾಲ ಪ್ರಾರಂಭವಾಗಿದ್ದು ಚಿನ್ನದ ಬೇಡಿಕೆ ಹೆಚ್ಚುವ ನಿರೀಕ್ಷೆಯಲ್ಲಿ ವರ್ತಕರು ಖರೀದಿಗೆ ಮುಗಿಬಿದ್ದಿದ್ದಾರೆ. ಇದೂ ಕೂಡ ದರ ಹೆಚ್ಚಳಕ್ಕೆ ಕಾರಣವಾಗಲಿದೆ.

ಚಾಲ್ತಿ ಖಾತೆ ಕೊರತೆ (CAD) ತಗ್ಗಿಸಲು ಮತ್ತು ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಕುಸಿತ ತಡೆಯಲು ಕೇಂದ್ರ ಸರ್ಕಾರ ಚಿನ್ನದ ಮೇಲಿನ ಸುಂಕ ಹೆಚ್ಚಳ ಅನಿವಾರ್ಯ ಎನ್ನಲಾಗಿದೆ. 'ಸದ್ಯ ವ್ಯಾಪಾರ ಕೊರತೆಯು ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ ಶೇ 3.7ರಷ್ಟಿದೆ. ಇದನ್ನು ಹಿತಕರ ಮಟ್ಟಕ್ಕೆ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಎಂಟು ತಿಂಗಳಲ್ಲಿ ಮೂರು ಬಾರಿ ಸರ್ಕಾರ ಚಿನ್ನದ ಆಮದು ಸುಂಕ ಹೆಚ್ಚಿಸಿದೆ. 2012 ಜನವರಿಯಲ್ಲಿ ಸ್ಟ್ಯಾಂಡರ್ಡ್ ಚಿನ್ನದ ಆಮದು ಸುಂಕ 10 ಗ್ರಾಂಗೆ ರೂ300 ಇತ್ತು. ಕೆ.ಜಿ ಬೆಳ್ಳಿ ಆಮದಿಗೆ ರೂ1,500 ಸುಂಕ ವಿಧಿಸಲಾಗುತ್ತಿತ್ತು. ಸುಂಕ ಹೆಚ್ಚಳದಿಂದ ಸರ್ಕಾರ ಬೊಕ್ಕಸ ತುಂಬಲಿದೆ ನಿಜ ಆದರೆ, ಗ್ರಾಹಕರಿಗೆ, ವರ್ತಕರಿಗೆ ಇದರಿಂದ ಲಾಭವೇನು? ಮುಂದೆ ಓದಿ...

ಹೆಚ್ಚುವರಿ ವರಮಾನ

ಹೆಚ್ಚುವರಿ ವರಮಾನ

ಚಿನ್ನದ ಆಮದು ಸುಂಕ ಶೇ 10 ರಷ್ಟು ಹಾಗೂ ಬೆಳ್ಳಿ ಸುಂಕ ಶೇ 10 ರಷ್ಟು ಏರಿಕೆಯ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚುವರಿಯಾಗಿ 4,830 ಕೋಟಿ ರು ವರಮಾನ ಸಂಗ್ರಹವಾಗುವ ನಿರೀಕ್ಷೆ ಇದೆ. ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಕುಸಿತ ತಡೆಗೂ ಈ ಕ್ರಮ ನೆರವಾಗಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಆಮದು ಏರಿಕೆ ಇಳಿದಿಲ್ಲ

ಆಮದು ಏರಿಕೆ ಇಳಿದಿಲ್ಲ

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಏಪ್ರಿಲ್-ಜುಲೈ ಅವಧಿಯಲ್ಲಿ ಚಿನ್ನದ ಆಮದು ಶೇ 87ರಷ್ಟು ಹೆಚ್ಚಿದೆ. ಒಟ್ಟು 56,488 ಕೋಟಿ ರು ಮೌಲ್ಯದ ಚಿನ್ನ ಮತ್ತು 12,789 ಕೋಟಿ ರು ಮೌಲ್ಯ ಬೆಳ್ಳಿ ಆಮದು ಮಾಡಿಕೊಳ್ಳಲಾಗಿದೆ. 2012-13ನೇ ಸಾಲಿನಲ್ಲಿ ಒಟ್ಟಾರೆ ರೂ2.45 ಲಕ್ಷ ಕೋಟಿ ಮೌಲ್ಯದ 845 ಟನ್ ಚಿನ್ನ ಆಮದಾಗಿತ್ತು.

ಕಳ್ಳಸಾಗಾಣಿಕೆಗೆ ದಾರಿ

ಕಳ್ಳಸಾಗಾಣಿಕೆಗೆ ದಾರಿ

ಚಿನ್ನದ ಆಮದು ಸುಂಕ ಹೆಚ್ಚಳ ಕಳ್ಳಸಾಗಣೆಗೆ ದಾರಿ ಮಾಡಿಕೊಡುತ್ತದೆ. ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂಗಳಿಗೆ ಇನ್ನೂ 600- 700 ರು. ನಷ್ಟು ಹೆಚ್ಚಲಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ಚಂದ್ರಜಿತ್ ಬ್ಯಾನರ್ಜಿ ಹೇಳಿದ್ದಾರೆ.

ಏನಾಗಲಿದೆ ಬದಲಾವಣೆ?

ಏನಾಗಲಿದೆ ಬದಲಾವಣೆ?

* ಬಂಗಾರ, ಪ್ಲಾಟಿನಂ ಮೇಲಿನ ಆಮದು ಸುಂಕ ಶೇ.8 ರಿಂದ ಶೇ.10ಕ್ಕೆ ಹೆಚ್ಚಳ
* ಬೆಳ್ಳಿ ಮೇಲಿನ ಆಮದು ಸುಂಕ ಶೇ.6 ರಿಂದ ಶೇ.10ಕ್ಕೆ ಏರಿಕೆ
* ಗೋಲ್ಡ್ ಬಾರ್ ಗಳ ಮೇಲಿನ ಆಮದು ಸುಂಕ ಶೇ.7 ರಿಂದ ಶೇ.9ಕ್ಕೆ ಹೆಚ್ಚಳ
* ಬ್ರಾಂಡೆಡ್ ಆಭರಣಗಳ ದರ ಹೆಚ್ಚಳ ಸಾಧ್ಯತೆ
* ಆಭರಣಗಳ ಮೇಲಿನ ಬೇಡಿಕೆ ಕಡಿಮೆಯಾಗದಿದ್ದರೂ, ಬಂಗಾರದ ಮೇಲಿನ ಹೂಡಿಕೆ ಪ್ರಮಾಣ ತಗ್ಗಬಹುದು.
* ಚಿನ್ನದ ನಾಣ್ಯ ಹಾಗೂ ಬಾರ್ ಮಾರಾಟಕ್ಕೆ ಸರ್ಕಾರದಿಂದ ಕೊಕ್ಕೆ

 ರುಪಾಯಿ ಮೌಲ್ಯ ಚೇತರಿಕೆಗೆ?

ರುಪಾಯಿ ಮೌಲ್ಯ ಚೇತರಿಕೆಗೆ?

* ಈ ಏರಿಕೆಯಿಂದಾಗಿ 2014ರ ಮಾರ್ಚ್ 31 ರೊಳಗೆ 4,830 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷೆ.
* ಬಂಗಾರದ ಮೇಲಿನ ಆಮದು ಬೇಡಿಕೆ ತಗ್ಗಿಸಲು ಕೇಂದ್ರದಿಂದ ಈ ಕ್ರಮ
* ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.3.3ಕ್ಕೆ ನಿಲ್ಲಿಸಲು ಈ ಕ್ರಮ
* ಕೇಂದ್ರದ ಈ ಕ್ರಮದಿಂದಾಗಿ ರುಪಾಯಿ ಮೌಲ್ಯ ಚೇತರಿಕೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+