ಟ್ರೈನ್ ಶೌಚಾಲಯದಲ್ಲಿ ಬಾಲಕಿ ಮೇಲೆ ರೇಪ್

ಛತ್ತೀಸ್ ಗಢದ ಬಿಲಾಸಪುರ ಸಮೀಪ ಹೌರಾ-ಕುರ್ಲಾ ಎಕ್ಸ್ ಪ್ರೆಸ್ ರೈಲಿನಲ್ಲಿ ಶುಕ್ರವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿ 7 ವರ್ಷದ ಬಾಲಕಿಯ ಮೇಲೆ ಟ್ರೈನಿನ ಶೌಚಾಲಯದಲ್ಲಿ ಅತ್ಯಾಚಾರವೆಸಗಿ, ಬಳಿಕ ಆಕೆಯನ್ನು ಬಿಲಾಸಪುರ ರೈಲ್ವೆ ನಿಲ್ದಾಣದಲ್ಲಿ ಆಕೆಯನ್ನು ಕೆಳಗಿಳಿಸಿ ಹೋಗಿದ್ದಾನೆ.
ಬಿಲಾಸಪುರದ ಕೊತ್ವಾಲಿ ಪೊಲೀಸ್ ಠಾಣೆಯ ಮಾರುಕಟ್ಟೆ ಪ್ರದೇಶದಲ್ಲಿ ರಕ್ತಸಿಕ್ತವಾಗಿದ್ದ ಬಾಲಕಿಯನ್ನು ಕಂಡು ಸಾರ್ವಜನಿಕರು ಆಕೆಯನ್ನು ಛತ್ತೀಸ್ ಗಢ ವೈದ್ಯಕೀಯ ಮಹಾ ಕಾಲೇಜಿಗೆ ದಾಖಲಿಸಿದ್ದಾರೆ ಎಂದು ಬಿಲಾಸಪುರ ಪೊಲೀಸ್ ವರಿಷ್ಠಾಧಿಕಾರಿ ರತನ್ ಲಾಲ್ ಡಂಗಿ ಹೇಳಿದ್ದಾರೆ.
ಬಳಿಕ ಪೊಲೀಸರು ಬಾಲಕಿಯನ್ನು ವಿಚಾರಿಸಲಾಗಿ ಆಕೆ ತನ್ನ ದುಃಸ್ಥಿತಿಯನ್ನು ಹೇಳಿಕೊಂಡಿದ್ದಾಳೆ. ಹೌರಾ-ಕುರ್ಲಾ ಎಕ್ಸ್ ಪ್ರೆಸ್ ರೈಲಿನಲ್ಲಿ ತಾನು ಪ್ರಯಾಣಿಸುತ್ತಿದ್ದಾಗಿಯೂ, ರಾತ್ರಿ ಟಾಯ್ಲೆಟಿಗೆ ಹೋಗಿದ್ದಾಗ ವ್ಯಕ್ತಿಯೊಬ್ಬ ತನ್ನನ್ನು ಹಿಂಬಾಲಿಸಿ, ತನಗೆ ಚಿತ್ರಹಿಂಸೆ ನೀಡಿದ. ಕೊನೆಗೆ ಬಿಲಾಸಪುರ ರೈಲ್ವೆ ನಿಲ್ದಾಣದಲ್ಲಿ ನನ್ನನ್ನು ಕೆಳಗಿಳಿಸಿ, ಕೈಗೆ 10 ರೂ ನೋಟು ತುರುಕಿದ ಎಂದು ಬಾಲಕಿ ಹೇಳಿದ್ದಾಳೆ.
ವೈದ್ಯಕೀಯ ಪರೀಕ್ಷೆಯಿಂದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಪೊಲೀಸರು ಸಿಸಿಟಿವಿ ಮೊರೆಹೋಗಿದ್ದು, ಆರೋಪಿ ಬಗ್ಗೆ ಸುಳಿವು ನೀಡಿದವರಿಗೆ 25 ಸಾವಿರ ರೂ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications