ಸಿಎಂ ಸಿದ್ದುಗೆ ಮೊದಲು ಶುಭಾಶಯ ಹೇಳಿದ ಪ್ರಧಾನಿ ಸಿಂಗ್

ಅಂದಹಾಗೆ ನಮ್ಮ birth day boyಗೆ ಮೊದಲು ಶುಭಾಶಯ ಕೋರಿದ್ದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು. ಬೆಳಗ್ಗೆಯೇ ಪ್ರಧಾನ ಮಂತ್ರಿಯಿಂದ ದೂರವಾಣಿ ಮೂಲಕ ಶುಭಾಶಯ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖದಲ್ಲಿ ಆನಂದ ಮನೆಮಾಡಿತು. ಪ್ರತಿಯಾಗಿ ಸಿದ್ದು thank you sir ಎಂದಿದ್ದಾರೆ.
ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದ ಮುಂದೆ ಜಮಾಯಿಸಿ ಅವರ ಅಸಂಖ್ಯಾತ ಅಭಿಮಾನಿಗಳು ಹೂಗುಚ್ಚ, ಶಾಲು ಹೊದಿಸಿ ಶುಭಾಶಯ ಕೋರಿದರು. ತಮಗೆ ಜನುಮ ದಿನದ ಶುಭಾಶಯ ಕೋರಲು ನಾಡಿದ ದೂರದ ಊರುಗಳಿಂದ ಆಗಮಿಸಿದ ಬೆಂಬಲಿಗರನ್ನು ಕಂಡು ಸಿಎಂ ಸಿದ್ದು ಆನಂದತುಂದಿಲಿತರಾದರು. ಪ್ರತಿಯೊಬ್ಬರಿಗೂ ಖುದ್ದಾಗಿ ವಂದನೆ ಸಲ್ಲಿಸಿದರು.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications