ಮಲ್ಯ ಮುಂಬೈ 'ಕಿಂಗ್' ಕಚೇರಿ ಬ್ಯಾಂಕ್ ವಶಕ್ಕೆ

ಮುಂಬೈ, ಆ.12: ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನೆಲಕಚ್ಚಿರುವ ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ವಿಮಾನ ಕಂಪೆನಿ ಬ್ಯಾಂಕ್ ಸಾಲವನ್ನು ಮರುಪಾವತಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಕಿಂಗ್ ಫಿಷರ್ ಕೇಂದ್ರ ಕಚೇರಿಯನ್ನು ಬ್ಯಾಂಕ್ ಗಳು ವಶಪಡಿಸಿಕೊಂಡಿದೆ.
ಉದ್ಯಮಿ ವಿಜಯ್ ಮಲ್ಯ ಒಡೆತನದ (ಮುಂಬೈ ನಲ್ಲಿರುವ )ಕಿಂಗ್ ಫಿಷರ್ಸ್ ಏರ್ ಲೈನ್ಸ್ ನ ಕೇಂದ್ರ ಕಚೇರಿಯನ್ನು ಹರಾಜು ಹಾಕಲು ಬ್ಯಾಂಕ್ ಗಳು ಸಜ್ಜಾಗಿವೆ ಎಂದು ವರದಿಗಳು ತಿಳಿಸಿವೆ.

ಎಸ್ ಬಿಐಸಿಎಪಿ ಟ್ರಸ್ಟಿ ಕಂಪೆನಿಯು (ಸಾಲ ನೀಡಿಕೆ) ಈ ಸ್ವತ್ತನ್ನು (ಮುಂಬೈ ಕಚೇರಿ) ಸ್ವಾಧೀನ ಪಡಿಸಿಕೊಂಡಿದೆ.2012ರ ಅಕ್ಟೋಬರ್ ನಲ್ಲಿ ಸಂಸ್ಥೆ ಸಾಲದ ಮೊತ್ತ 6,072 ಕೋಟಿ ರೂ.ಗಳನ್ನು ಬ್ಯಾಂಕ್ ಗೆ ಪಾವತಿಸಬೇಕಾಗಿತ್ತು. ಆದರೆ, ಸಾಲ ವಾಪಸ್ ನೀಡುವಲ್ಲಿ ಸಾಲದ ಹೊಣೆಗಾರರಾದ ವಿಜಯ್ ಮಲ್ಯ ಅವರ ಸಂಸ್ಥೆ ವಿಫಲವಾಗಿದ್ದು, ಬ್ಯಾಂಕ್ ಈಗ ಈ ಕ್ರಮ ಕೈಗೊಂಡಿದೆ.

ಸಾಲದ ಮೊತ್ತದ ಕೆಲ ಭಾಗವನ್ನು ಮಾತ್ರ ಈ ಕ್ರಮದಿಂದ ಪಡೆಯಬಹುದಾಗಿದ್ದು, ಕೇಂದ್ರ ಕಚೇರಿ ಹರಾಜಿನಿಂದ ಪೂರ್ಣ ಮೊತ್ತದ ಮರು ಪಾವತಿ ಆಗದು. ಬರುವಷ್ಟು ಮೊತ್ತವನ್ನು ಜಮಾಮಾಡಿಕೊಳ್ಳಲು ಈ ಪ್ರಕ್ರಿಯೆ ನಡೆದಿದೆ ಎಂದು ಸಾರ್ವಜನಿಕ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

Lenders take over Mumbai office of Kingfisher Airlines

ಸಾಲದ ಭಾಗಶಃ ವಸೂಲಾತಿಗಾಗಿ ವಿವಿಧ ಬ್ಯಾಂಕ್ ಗಳು ಕಳೆದ ವರ್ಷವೇ ಮಲ್ಯರಿಗೆ ಸೇರಿರುವ ಯುನೈಟೆಡ್ ಸ್ಪಿರಿಟ್ ಹಾಗೂ ಮಂಗಳೂರು ಕೆಮಿಕಲ್ಸ್ (ಕೆಎಂಎಫ್) ಕಂಪೆನಿಗಳಿಗೆ ಸೇರಿದ ಷೇರುಗಳನ್ನು ಮಾರಾಟ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಸಾಲ ಮರು ಪಾವತಿಗೆ ಸಂಬಂಧಪಟ್ಟವರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಅವರು ವಿಫಲವಾಗಿದ್ದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದಲ್ಲಿ ಕೆಎಫ್ ಎ ಬ್ಯಾಂಕ್ ಮತ್ತಿತರೆ ಬ್ಯಾಂಕ್‌ಗಳು ಕಡೆಗೆ 2013ರ ಫೆಬ್ರವರಿಯಲ್ಲಿ ಸುಮಾರು 7500 ಕೋಟಿ ರೂ. ಸಾಲದ ಹಣ ಪಾವತಿಗಾಗಿ ವಿಜ್ಞಾಪನೆ ಸಲ್ಲಿಸಿದ್ದವು ಎಂದು ಅವರು ಹೇಳಿದ್ದಾರೆ.

ಮಲ್ಯ ವಿಚಾರಣೆ ಸಾಧ್ಯತೆ: ಈ ಮಧ್ಯೆ ಸೇವಾ ತೆರಿಗೆ ವಂಚನೆ ಪ್ರಕರಣದಲ್ಲಿ ವಿಜಯಮಲ್ಯ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುವ ಸಾಧ್ಯತೆಯಿದೆ ಎಂದು ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಕಿಂಗ್ ಫಿಷರ್ ಕಂಪೆನಿ ಮಾಲೀಕರು ತೆರಿಗೆ ಬಾಕಿ ಪಾವತಿಸುವಲ್ಲಿ ವಿಫಲರಾಗಿರುವುದು ಮತ್ತು ತೆರಿಗೆ ವಂಚನೆ ಆರೋಪಗಳ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸುವುದು ಅನಿವಾರ್ಯ ಎಂದು ಮೂಲಗಳು ತಿಳಿಸಿವೆ.

ಉಳಿದಿರುವ ಸಾಲದ ಮರು ಪಾವತಿಗೆ ಬ್ಯಾಂಕ್ ಗಳು, ತೆರಿಗೆ ಇಲಾಖೆಗಳು ಇನ್ನಿಲ್ಲದ ಪ್ರಯತ್ನ ನಡೆಸಿವೆ ಎಂದು ತೆರಿಗೆ ಇಲಾಖೆಗೆ ಸಂಬಂಧಿಸಿದ ಹಿರಿಯ ಅಧಿಕಾರಿ ಲಿಪಿಕ ಮಜುಮ್ದಾರ್ ರಾಯ್ ಚೌಧುರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಸ್ತುತ ಕಿಂಗ್ ಫಿಷರ್ ಸೇವಾ ತೆರಿಗೆ ಇಲಾಖೆಗೆ 190 ಕೋಟಿ ರೂ. ಪಾವತಿಸಬೇಕಾಗಿದ್ದು, ಈ ಪೈಕಿ 127 ಕೋಟಿ ರೂ.ಗಳ ಬಗ್ಗೆ ವಿವಾದವಿದೆ ಎಂದು ಅವರು ಹೇಳಿದ್ದಾರೆ. ಎಸ್ ಬಿಐ 1600 ಕೋಟಿ ರು ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಐಡಿಬಿಐ ಬ್ಯಾಂಕ್ ತಲಾ 800 ಕೋಟಿ ರು ಹಾಗೂ ಬ್ಯಾಂಕ್ ಆಫ್ ಇಂಡಿಯಾ 650 ಕೋಟಿ ರು ಸಾಲ ಹಿಂಪಡೆಯುವ ನಿರೀಕ್ಷೆಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+