ಕೆಲಸದಾಳು ಮೇಲೆ ಮೈಕ್ರೋಸಾಫ್ಟ್ ಟೆಕ್ಕಿ ವಿನೀತ್ ರೇಪ್

washington-ex-microsoft-techie-vineet-kumar-charged-with-rape
ವಾಷಿಂಗ್ಟನ್, ಆಗಸ್ಟ್ 8: ಮೈಕ್ರೋಸಾಫ್ಟ್ ಕಂಪನಿಯ ಭಾರತೀಯ ಮೂಲದ ಟೆಕ್ಕಿಯ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಮೈಕ್ರೋಸಾಫ್ಟ್ ಕಂಪನಿಯಲ್ಲಿ ಪ್ರೋಗ್ರಾಮಿಂಗ್ ಮ್ಯಾನೇಜರ್ ಆಗಿರುವ ಆರೋಪಿ, ಕಚೇರಿಯ ಕೆಲಸದಾಕೆ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

ವಿನೀತ್ ಕುಮಾರ್ ಶ್ರೀವಾತ್ಸವ (36) ವಾಷಿಂಗ್ಟನಲ್ಲಿರುವ ಕಂಪನಿಯ ಪ್ರಧಾನ ಕಚೇರಿಯಲ್ಲಿ ಈ ದುಷ್ಕೃತ್ಯವೆಸಗಿದ್ದು, ಕಳೆದ ತಿಂಗಳು 22ರಂದು ವಿಶಾಲವಾಗಿರುವ ತನ್ನ ಕಚೇರಿಗೆ ರಾತ್ರಿಯ ವೇಳೆ ಸದರಿ ಯುವತಿಯನ್ನು ಕೆಲಸದ ನಿಮಿತ್ತ ಕರೆಯಿಸಿಕೊಂಡು ಅತ್ಯಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಕೋರ್ಟಿಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ವಿನೀತ್ ಕುಮಾರ್ ಆಕೆಯ ಬ್ಲೌಸ್ ಅನ್ನು ಹರಿದುಹಾಕಿದ್ದಾನೆ. ಅದಕ್ಕೂ ಮುನ್ನ ತನ್ನ ಮೊಬೈಲಿನಲ್ಲಿರುವ ಅಶ್ಲೀಲ ವಿಡಿಯೋ ಚಿತ್ರಗಳನ್ನು ತೋರಿಸಿದ್ದಾನೆ. ತನ್ನ ಹಿಡಿತದಿಂದ ತಪ್ಪಿಸಿಕೊಂಡು ಹೋಗದಂತೆ ಆಕೆಯನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಟ್ಟಿದ್ದಾನೆ ಎಂದು ಕೋರ್ಟ್ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ತನ್ನನ್ನು ಬಿಟ್ಟುಬಿಡು ಎಂದು ಬೊಬ್ಬಿಡುತ್ತಿದ್ದ ಯುವತಿಯನ್ನು ವಿನೀತ್ ಕುಮಾರ್ ಕೆಳಗೆ ತಳ್ಳಿ, ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅದಾಗುತ್ತಿದ್ದಂತೆ ವಿನೀತನನ್ನು ಜುಲೈ 26ರಂದು ಆತನ ಕಚೇರಿಯಲ್ಲಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ವಿನೀತ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.

ಪ್ರಕರಣ ಬಹಿರಂಗವಾಗುತ್ತಿದ್ದಂತೆ ವಿನೀತ್ ಕುಮಾರನನ್ನು Microsoft ಕಂಪನಿ ಕೆಲಸದಿಂದ ತೆಗೆದುಹಾಕಿದೆ.

ಆದರೆ ಬೇರೆಯದೇ ಕಥೆ ಕಟ್ಟಿರುವ ವಿನೀತ್ ಕುಮಾರ್, ಕೆಲಸದಾಳು ತನ್ನ ಜತೆ ಸಂಭೋಗ ನಡೆಸು ಎಂದು ಬಲವಂತ ಮಾಡಿದಳು. ಆಕೆಯ ಬಗ್ಗೆ ನನಗೆ ಭಯವಾಯ್ತು. ಆದರೆ ನನ್ನ ಕಾರಿನ ಬಳಿ ಹೋಗಿ ಕಾಂಡೋಮ್ ತಂದೆ. ಅದಾದ ನಂತರ ಪ್ರಕರಣ ನಡೆದಿದೆ ಎಂದು ಅಲವತ್ತುಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+