ಮತ್ತಷ್ಟು ಸಿಸಿಟಿವಿ ಕಾವಲಿನಲ್ಲಿ ಬೆಂಗಳೂರು!

ಈ ಅನುದಾನದಿಂದ ನಗರದ ಭದ್ರತೆಗಾಗಿ ನೂತನ ತಂತ್ರಜ್ಞಾನಗಳನ್ನು ಆಳವಡಿಸಿಕೊಳ್ಳುವಂತೆ ಕೇಂದ್ರ ಗೃಹ ಇಲಾಖೆ ರಾಜ್ಯಕ್ಕೆ ಸೂಚಿಸಿದೆ. ಆದ್ದರಿಂದ ನಗರದಲ್ಲಿ ಇನ್ನೂ 375 ಸಿಸಿಟಿವಿ ಕ್ಯಾಮರಾಗಳನ್ನು ಆಳವಡಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಸಿಸಿಟಿವಿಗಳನ್ನು ಆಳವಡಿಸಲು ಸಂಚಾರಿ ಪೊಲೀಸರು ನಗರದ ಪ್ರದೇಶಗಳನ್ನು ಗುರುತಿಸುತ್ತಿದ್ದಾರೆ. ಶೀಘ್ರದಲ್ಲೇ ಬೆಂಗಳೂರು ನಗರ ಮತ್ತಷ್ಟು ಸಿಸಿಟಿವಿ ಕಾವಲಿನಲ್ಲಿರುತ್ತದೆ. ಇದರಿಂದ ನಗರದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ನೆರವಾಗಲಿದೆ.
2009ರಲ್ಲಿ ಸರ್ಕಾರ ನಗರದಲ್ಲಿ ಹೆಚ್ಚಿನ ಸಿಸಿಟಿವಿಗಳನ್ನು ಆಳವಡಿಸಲು 350 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಆದರೆ, ಈ ಯೋಜನೆಯಲ್ಲಿ ಅವ್ಯವಹಾರ ಕೇಳಿಬಂದಿದ್ದರಿಂದ, ಅನುದಾನ ಹಿಂಪಡೆಯಲಾಗಿತ್ತು. (ಐದು ನಗರಗಳು ಸೇಫ್ ಸಿಟಿಯಾಗಲಿವೆ)
ನಗರದ ಪೊಲೀಸರು ವಾಣಿಜ್ಯ ಕಟ್ಟಡಗಳು, ಮಾಲ್ ಗಳು, ಶಾಲೆ ಮತ್ತು ಕಾಲೇಜುಗಳಲ್ಲಿ ಸಿಸಿಟಿವಿ ಆಳವಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಪಾರ್ಕ್, ದೇವಸ್ಥಾನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಆಳವಡಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಜೌರಾದ್ಕರ್ ನಗರ ಪ್ರದೇಶಗಳಲ್ಲಿ ಸಿಸಿಟಿವಿ ಆಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ನಗರದ ಎಲ್ಲಾ ಪ್ರದೇಶಗಳಲ್ಲಿಯೂ ಸಿಸಿಟಿವಿ ಆಳವಡಿಸಲಾಗುವುದು ಎಂದರು.
ನಗರದ ಏಳು ಪೊಲೀಸ್ ವಿಭಾಗಗಳ ವ್ಯಾಪ್ತಿಯಲ್ಲಿ ಸಿಸಿಟಿವಿ ಆಳವಡಿಸಲು 50 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಸಿಸಿಟಿವಿ ನಿರ್ವಹಣಾ ಕಚೇರಿ ಮುಂತಾದ ಸೌಲಭ್ಯಗಳು ಸೇರಿದಂತೆ ಈ ಯೋಜನೆಗೆ ಒಟ್ಟು 350 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications