ಗುಲ್ಬರ್ಗ ಜಿಲ್ಲಾಸ್ಪತ್ರೆಯಲ್ಲೊಂದು ಹೃದಯವಿದ್ರಾವಕ ಘಟನೆ
ಗುಲ್ಬರ್ಗ,ಆಗಸ್ಟ್ 6: OMG! ಇಲ್ಲಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆವರಣದ ಕಸದ ತೊಟ್ಟಿಯಲ್ಲಿ ಎಸೆಯಲಾಗಿದ್ದ ಮಗುವಿನ ಶವವೊಂದು ನಾಯಿಗೆ ಆಹಾರವಾಗಿದೆ. ಈ ಹೃದಯವಿದ್ರಾವಕ ಘಟನೆ ಆಸ್ಪತ್ರೆಯ ಕಾರ್ಯನಿರ್ವಹಣೆ ಬಗ್ಗೆ ಅನುಮಾನ, ಆಕ್ರೋಶಗಳನ್ನು ಹುಟ್ಟುಹಾಕಿದೆ.
ಆಸ್ಪತ್ರೆಯ ಮರಣೋತ್ತರ ಪರೀಕ್ಷೆ ವಿಭಾಗದ ಪಕ್ಕದಲ್ಲಿರುವ ತ್ಯಾಜ್ಯ ಚೆಲ್ಲುವ ಜಾಗದಲ್ಲಿ ಶಿಶುವಿನ ಶವ ಕಂಡ ನಾಯಿಯೊಂದು ಅದನ್ನು ಕಚ್ಚೊಯ್ದು ಸಮೀಪದ ಪೊದೆಯ ಮರೆಯಲ್ಲಿ ತಿಂದುಹಾಕಿದೆ.

ಮೂಕರೋಧನೆ: ನಾಯಿ ಹೊಟ್ಟೆ ಸೇರಿದ ಶಿಶು ಯಾರದು? ಬೆಳೆದ ಶಿಶುವಿನ ಶವವನ್ನು ಆಸ್ಪತ್ರೆಯ ತೊಟ್ಟಿ ಬಳಿ ಏಕೆ ಎಸೆಯಲಾಗಿತ್ತು? ಇದರಲ್ಲಿ ಹೆತ್ತವರ ಪಾತ್ರವೇನು? ಎಂಬುದು ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಹೆರಿಗೆಯಾದರೂ ನಿಯಮದಂತೆ ಜನನ ಮತ್ತು ಮರಣದ ದಾಖಲೆ ಇರಬೇಕು. ಆ ದಾಖಲೆಗಳನ್ನು ತಡಕಾಡಿದರೆ ಸತ್ಯ ಬಹಿರಂಗವಾಗುವುದೇ? ಜಿಲ್ಲಾ ವೈದ್ಯಾಧಿಕಾರಿ ಈ ಬಗ್ಗೆ ಏನನ್ನುತ್ತಾರೆ? ಸದ್ಯಕ್ಕೆ ಗೊತ್ತಿಲ್ಲ. (ಸಚಿತ್ರ ವರದಿ- ವಿಜಯವಾಣಿ)












Click it and Unblock the Notifications