ಜೆಟ್ ವಿಮಾನ ವೇಗಕ್ಕೆ ಹಾರಿದ ಸ್ವಿಸ್ ವೀರ
ಬೆಂಗಳೂರು, ಆ.5; ಅತ್ಯಂತ ವೇಗವಾಗಿ ಹಾರಬಲ್ಲ ವಿಮಾನಗಳೆಂದರೆ ಜೆಟ್ ವಿಮಾನಗಳು ಎಂದು ಎಲ್ಲರು ತಿಳಿದಿದ್ದರೆ ಅದು ತಪ್ಪು ಎನ್ನುತ್ತಿದೆ ಈ ಸುದ್ದಿ. ಜೆಟ್ ವೇಗಕ್ಕೆ ಸರಿ ಸಾಟಿಯಾಗಿ ಸ್ವಿಟ್ಜರ್ಲೆಂಡ್ ನ ವ್ಯಕ್ತಿಯೊಬ್ಬ ಹಾರಿದ್ದಲ್ಲದೆ ಜೆಟ್ ವಿಮಾನವನ್ನು ಹಿಂದಿಕ್ಕಿ ಹೊಸ ವಿಕ್ರಮ ಸಾಧಿಸಿದ್ದಾರೆ.
53 ವರ್ಷ ವಯಸ್ಸಿನ ಸ್ವಿಟ್ಜರ್ಲೆಂಡ್ ನ ಪೈಲಟ್ 'ಜೆಟ್ ಮ್ಯಾನ್ ' ಎಂದೇ ಖ್ಯಾತರಾದ ವೆಸ್ ರೊಸ್ಸಿ(Yves Rossy) ಅವರು ಸಮುದ್ರ ಮಟ್ಟದಿಂದ ಸುಮಾರು 12,000 ಅಡಿ ಎತ್ತರದಲ್ಲಿ ಹಾರುತ್ತಾ 190 ಮೈಲಿ ಪ್ರತಿ ಗಂಟೆ ವೇಗದಲ್ಲಿ ಚಲಿಸಿ ವಿಶ್ವದ ಎಲ್ಲಾ ಸಾಹಸಿಗಳ ಹುಬ್ಬೇರುವಂತೆ ಮಾಡಿದ್ದಾರೆ.
ರೊಸ್ಸಿ ಅವರು ಅಮೆರಿಕದಲ್ಲಿ ನಡೆಯುವ ಏರ್ ಶೋನಲ್ಲಿ ಪಾಲ್ಗೊಂಡು ತಮ್ಮದೇ ತಮ್ಮ ಸಾಹಸ ಮೆರೆಯಲು ಸಿದ್ಧತೆ ಅನ್ಡೆಸಿದ್ದಾರೆ. ಇತ್ತೀಚೆಗೆ ತಮ್ಮ ವೇಗದ ಝಲಕ್ ಅನ್ನು ತೋರಿಸಿದ್ದು 190 ಮೈಲಿ ಪ್ರತಿಗಂಟೆ ವೇಗದಲ್ಲಿ ಹಾರಿ ಜೆಟ್ ವಿಮಾನವನ್ನು ಹಿಂದಿಕ್ಕಿದ್ದಾರೆ. ಜೆಟ್ ಮ್ಯಾನ್ ಕುರಿತ ಇನ್ನಷ್ಟು ಮಾಹಿತಿ, ಚಿತ್ರಗಳು ಇಲ್ಲಿವೆ ನೋಡಿ

ಜೆಟ್ ಮ್ಯಾನ್ ವಿಕ್ರಮ
ಬಿ 17 ಬಾಂಬರ್ ಜೊತೆಗೆ ನಾಲ್ಕು ಇಂಜಿನ್ ವುಳ್ಳ ಕಾರ್ಬನ್ ಕೆವ್ಲರ್ ಜೆಟ್ ವಿಂಗ್ ಧರಿಸಿ ಜೆಟ್ ಮ್ಯಾನ್ 190 mph ವೇಗ ಸಾಧಿಸಿದರು.

ದಶಕಗಳ ಪರಿಶ್ರಮ
ವಾಯುವೇಗ ಸಾಧಿಸಲು ರೊಸ್ಸಿ ಅವರಿಗೆ ಸೂಕ್ತ ದಿರಿಸು ಹಾಗೂ ಸಾಧನಗಳು ಅವಶ್ಯವಿತ್ತು. ಇದಕ್ಕಾಗಿ ಫ್ಲೈಟ್ ದಿರಿಸು ರೂಪಿಸಲು 10 ವರ್ಷ ಕಾಲ ಬೇಕಾಯಿತು. ಕಾರ್ಬನ್ ಕೆಲ್ವರ್ ರೆಕ್ಕೆಗಳು ಹಾಗೂ ನಾಲ್ಕು ಜೆಟ್ ಇಂಜಿನ್ ಜೊತೆ ವಿಶೇಷ ಡ್ರೆಸ್ ಸಿದ್ಧತೆ ತುಂಬಾ ಕಷ್ಟವಿತ್ತು.

ಇನ್ನಷ್ಟು ಎತ್ತರಕ್ಕೆ
ನಾನು ಇನ್ನಷ್ಟು ಎತ್ತರ ಹಾಗೂ ವೇಗವಾಗಿ ಹಾರಲು ಇಷ್ಟಪಡುತ್ತೇನೆ, ಎತ್ತರದ ಹಾರಾಟ ನನಗೆ ಖುಷಿ ಕೊಡುತ್ತದೆ, ಆಕಾಶದಲ್ಲಿ ಸಂತಸವಿದೆ ಎಂಉದ್ ರೊಸ್ಸಿ ಹೇಳುತ್ತಾರೆ.

ಹೇಗಿದೆ ಜಿಗಿತ
ಆರು ಅಡಿ ವಿಸ್ತಾರದ carbon-Kevlar ರೆಕ್ಕೆ ಜೊತೆಗೆ ಹ್ಯಾಂಡ್ ಥ್ರೋಟಲ್ ಹಾಗೂ ದೇಹ ತಿರುಗಿಸಿದಂತೆ ದಿಕ್ಕು ಬದಲಾಯಿಸಲು ಉಪಕರಣವಿದೆ
ಸಾಹಿಸಿ ಜೆಟ್ ಮ್ಯಾನ್
ವಾಯುವೇಗ ಸಾಧಿಸಿದ ವೀರ ಸಾಹಿಸಿ ಜೆಟ್ ಮ್ಯಾನ್ ವಿಡಿಯೋ ತುಣುಕು

ಸ್ಪೀಡ್ ಮೆಷಿನ್
ಜೆಟ್ ವಿಮಾನದ ಜೊತೆ ಜೆಟ್ ಮ್ಯಾನ್ ಪೈಪೋಟಿ

ಇದು ಅತಿ ವೇಗದ ಸ್ಪರ್ಧೆ
ಜೆಟ್ ವಿಮಾನಗಳ ಜೊತೆ ಜೆಟ್ ಮ್ಯಾನ್ ಪೈಪೋಟಿ ಶುರು

ವೇಗದ ಸ್ಪರ್ಧೆ
ಜೆಟ್ ವಿಮಾನಗಳ ಜೊತೆ ಪೈಪೋಟಿ ನಡೆಸಿ 120 mph ವೇಗ ಸಾಧಿಸಿದ ಜೆಟ್ ಮ್ಯಾನ್

ಜೆಟ್ ಮ್ಯಾನ್ ಕಮಾಲ್
ಪ್ರತಿಕ್ಷಣವನ್ನು ದಾಖಲಿಸಲು ಸ್ಪರ್ಧಿಗಳನ್ನು ಹಿಂಬಾಲಿಸಿದ ಹೆಲಿ ಕಾಪ್ಟರ್

ಜೆಟ್ ಮ್ಯಾನ್
ಜೆಟ್ ವಿಮಾನಗಳನ್ನು ಹಿಂದಿಕ್ಕಿ ಅದ್ಭುತ ವೇಗ ಸಾಧಿಸಿದ ಮೇಲೆ ಈಗ ಧರೆಗಿಳಿಯುವ ಸಮಯ












Click it and Unblock the Notifications