ಪಂಚೆ ಉಟ್ಟರೆ ದುಬೈ ಮೆಟ್ರೋದಲ್ಲಿ ನೋ ಎಂಟ್ರಿ!

Dhoti
ದುಬೈ, ಆ.5 : ಭಾರತದ ಸಾಂಪ್ರದಾಯಿಕ ಉಡುಗೆ ಪಂಚೆಗೆ ದೂರದ ದುಬೈನಲ್ಲಿ ಬೆಲೆ ಇಲ್ಲದಂತಾಗಿದೆ. ಪಂಚೆ ಉಟ್ಟು ಮೆಟ್ರೋ ರೈಲು ಏರಲು ಹೋದ ಭಾರತೀಯ ಪ್ರವಾಸಿಯನ್ನು ದುಬೈ ಪೊಲೀಸರು ತಡೆದು ನಿಲ್ಲಿಸಿದ್ದಾರೆ.

67 ವರ್ಷದ ವೃದ್ಧರೊಬ್ಬರು ತಮ್ಮ ಮಗಳನ್ನು ನೋಡಿಕೊಂಡು ಬರಲು ದುಬೈ ಪ್ರವಾಸ ಕೈಗೊಂಡಿದ್ದರು. ಅಲ್ಲಿ ನಗರ ಪ್ರದಕ್ಷಿಣೆ ಹೋಗುವಾಗ ಪಂಚೆ ಉಟ್ಟಿದ್ದರು ಎಂಬ ಕಾರಣಕ್ಕಾಗಿ ಅವರಿಗೆ ಮೆಟ್ರೋ ರೈಲು ಏರಲು ಪೊಲೀಸರು ಅವಕಾಶ ನೀಡಿಲ್ಲ.

ಮೆಟ್ರೋ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲೇ ಪಂಚೆ ಉಟ್ಟಿದ್ದ ವೃದ್ಧರನ್ನು ಪೊಲೀಸರು ತಡೆದಿದ್ದಾರೆ. ಯಾವುದೇ ವಿವರಣೆ ನೀಡಿದರೂ ಕೇಳದೆ, ಅವರಿಗೆ ರೈಲು ಹತ್ತುವ ಅವಕಾಶವನ್ನು ಪೊಲೀಸರು ನೀಡಿಲ್ಲ.

ವೃದ್ಧರ ಮಗಳು ಮಧಮತಿ ಅವರು, ನಮ್ಮ ತಂದೆ ಮೊದಲ ಬಾರಿಗೆ ದುಬೈಗೆ ಆಗಮಿಸಿದ್ದಾರೆ. ನಗರದಲ್ಲಿ ಎಲ್ಲೂ ಅವರನ್ನು ಪಂಚೆ ಉಟ್ಟಿದ್ದರಿಂದ ತಡೆದು ನಿಲ್ಲಿಸಿಲ್ಲ. ಆದರೆ, ಇಲ್ಲಿ ಯಾಕೆ ತಡೆದು ನಿಲ್ಲಿಸುತ್ತೀರಿ ಎಂದರು ಪೊಲೀಸರು ಕೇಳಿಲ್ಲ.

ದುಬೈ ರಸ್ತೆ ಮತ್ತು ಸಾರಿಗೆ ಇಲಾಖೆಯ ನಿಯಮಾವಳಿಯಂತೆ ಮೈ ಮುಚ್ಚುವ ಬಟ್ಟೆ ಧರಿಸಿ ಬಂದರೆ ಸಾಕು. ಪಂಚೆ ಉಡಬಾರದು ಎಂಬ ನಿಷೇಧವೇನಿಲ್ಲ ಎಂದು ಪರಿಪರಿಯಾಗಿ ಹೇಳಿದರೂ, ಪೊಲೀಸರು ತಮ್ಮ ನಿರ್ಧಾರ ಬದಲಿಸಿಲ್ಲ.

ಅಲ್ಲದೇ ದುಬೈನ ಹಲವಾರು ಕಡೆ ತಂದೆಯೊಂದಿಗೆ ಮಧುಮತಿ ಓಡಾಡಿದ್ದಾರೆ. ಆದರೆ, ಎಲ್ಲಿಯೂ ಅವರನ್ನು ಪಂಚೆ ಉಟ್ಟ ಕಾರಣಕ್ಕಾಗಿ ತಡೆದಿರಲಿಲ್ಲ. ಪ್ರಕರಣದ ಕುರಿತು ಮಧುಮತಿ ರೈಲ್ವೆ ಇಲಾಖೆಗೆ ದೂರು ನೀಡಿದ್ದಾರೆ.

ಮೆಟ್ರೋ ನಿಗಮದ ಪರವಾಗಿ ವಿವರಣೆ ನೀಡಿರುವ ನಿರ್ವಾಹಣಾಧಿಕಾರಿ ರಮ್ದಾನ್ ಅಬ್ದುಲ್ಲಾ, ಪಂಚೆ ಉಡಬಾರದು ಎಂಬ ನಿಯಮವಿಲ್ಲ. ಇದು ಪೊಲೀಸರ ವೈಯಕ್ತಿಕ ಕೆಲಸವಾಗಿರಬೇಕು, ಈ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+