ಕರ್ನಾಟಕಕ್ಕೆ ಬರಲಿದೆ ಎರಡು ಪಾಸ್ ಪೋರ್ಟ್ ಕೇಂದ್ರ

passport
ಬೆಂಗಳೂರು, ಆ.5 : ಕರ್ನಾಟಕದಲ್ಲಿ ಎರಡು ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ತೆರಯಲು ಸಿದ್ಧತೆ ಆರಂಭಗೊಂಡಿದೆ. ಮೈಸೂರು ಮತ್ತು ಗುಲ್ಬರ್ಗಾದಲ್ಲಿ ನೂತನ ಸೇವಾ ಕೇಂದ್ರಗಳು ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಮೈಸೂರು ಮತ್ತು ಗುಲ್ಬರ್ಗಾದಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭಿಸುವಂತೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಕೇಂದ್ರ ವಿದೇಶಾಂಗ ಇಲಾಖೆ ಅನುಮತಿ ನೀಡಿದರೆ, ಶೀಘ್ರವೇ ಕೇಂದ್ರ ಆರಂಭಿಸಲಾಗುವುದು ಎಂದು ಪ್ರಾದೇಶಿಕ ಪಾಸ್ ಪೋರ್ಟ್ ಕೇಂದ್ರದ ಅಧಿಕಾರಿ ಪಿ.ಎಸ್.ಕಾರ್ತಿಗೇಯನ್
ಹೇಳಿದ್ದಾರೆ.

ಉತ್ತರ ಕರ್ನಾಟಕ ಭಾಗದ ಜನರು ಪಾಸ್ ಪೋರ್ಟ್ ಅರ್ಜಿಸಲ್ಲಿಸಲು ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಅಥವ ಮಂಗಳೂರಿಗೆ ತೆರಳಬೇಕಾಗುತ್ತದೆ. ಗುಲ್ಬರ್ಗಾದಲ್ಲಿ ಅರ್ಜಿಗಳನ್ನು ಪಡೆಯುವ ಕಚೇರಿಇದೆ. ಇದನ್ನು ಸೇವಾಕೇಂದ್ರವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ವಿದೇಶಾಂಗ ಇಲಾಖೆ ಜೊತೆ ರಾಜ್ಯದಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ತೆರೆಯುವ ಕುರಿತು ಚರ್ಚೆ ನಡೆಸಿದ್ದು, ಕೆಲವು ತಿಂಗಳಿನಲ್ಲಿ ಅನುಮತಿ ದೊರೆತು, ಕೇಂದ್ರಗಳು ಆರಂಭವಾಗಲಿದೆ ಎಂದು ತಿಳಿಸಿದರು.

ಬೆಂಗಳೂರು ಛೇಂಬರ್ ಆಫ್ ಕಾಮರ್ಸ್ ಮತ್ತು ಇತರ ವಾಣಿಜ್ಯ ಸಂಘಗಳು ಕೇಂದ್ರ ಸರ್ಕಾರಕ್ಕೆ ಪಾಸ್ ಪೋರ್ಟ್ ಸೇವಾ ಕೇಂದ್ರ ತೆರಯುವಂತೆ ಮನವಿ ಮಾಡುತ್ತಿವೆ. ಜನಪ್ರತಿನಿಧಿಗಳು ಒತ್ತಡ ಹಾಕಿದರೆ ಶೀಘ್ರದಲ್ಲೇ ಕೇಂದ್ರ ಅನುಮತಿ ನೀಡಲಿದೆ ಎಂದರು.

ಕಳೆದ ವಾರ ಬೆಂಗಳೂರಿಗೆ ಭೇಟಿ ನೀಡಿದ್ದ ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರಿಗೆ ರಾಜ್ಯದಲ್ಲಿ ನೂತನ ಸೇವಾ ಕೇಂದ್ರಗಳನ್ನು ತೆರಯುವ ಮನವಿ ಸಲ್ಲಿಸಲಾಗಿದೆ. ಮನವಿಯನ್ನು ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ದೇಶಾದ್ಯಂತ 77 ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭಿಸಲು ಚಿಂತನೆ ನಡೆಸಿದೆ, ಇದರಲ್ಲಿ ಕೇರಳದಲ್ಲಿ 13, ತಮಿಳುನಾಡಿನಲ್ಲಿ 8 ಮತ್ತು ಕರ್ನಾಟಕದಲ್ಲಿ 2 ಕೇಂದ್ರಗಳು ಸ್ಥಾಪನೆ ಆಗಬಹುದು ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+