ಸ್ಟಾರ್ ಬಕ್ಸ್ ಗೆ ಗೂಗಲ್ ವೈ ಫೈ ನೀಡಿದ್ದೇಕೆ?

ಅಮೆರಿಕದ ಸ್ಟಾರ್ ಬಕ್ಸ್ ಸಂಪರ್ಕದಲ್ಲಿರುವ ಸುಮಾರು 7000ಕ್ಕೂ ಅಧಿಕ ಕಂಪನಿಗಳಿಗೆ ತ್ವರಿತ ಗತಿಯಲ್ಲಿ ಉಚಿತ ವೈಫೈ ಸಂಪರ್ಕ ಒದಗಿಸಲು ಗೂಗಲ್ ಮುಂದೆ ಬಂದಿದೆ. ಮುಂದಿನ 18 ತಿಂಗಳವರೆಗೂ ಈ ಉಚಿತ ವೈಫೈ ಸೌಲಭ್ಯ ನೀಡುವುದಾಗಿ ಗೂಗಲ್ ತನ್ನ ಅಧಿಕೃತ ಬ್ಲಾಗಿನಲ್ಲಿ ಹೇಳಿಕೊಂಡಿದೆ.
ನಿಮ್ಮ ಸ್ಥಳೀಯ ಸ್ಟಾರ್ ಬಕ್ಸ್ ವೈಫ್ ಜಾಲದೊಡನೆ ಗೂಗಲ್ ಬೆರೆತರೆ, ವೆಬ್ ಲೋಕದಲ್ಲಿ 10x ಅಧಿಕ ವೇಗದಲ್ಲಿ ನೀವು ಜಾಲಾಡಬಹುದು ಎಂದು ಬ್ಲಾಗಿನಲ್ಲಿ ಹೇಳಲಾಗಿದೆ.ಗೂಗಲ್ ಫೈಬರ್ ಸಿಟಿಯಲ್ಲಿ ನೀವಿದ್ದರೆ ನಿಮಗೆ ಸುಮಾರು 100x ವೇಗದಲ್ಲಿ ನಿಮಗಎ ಅಂತರ್ಜಾಲ ಸಂಪರ್ಕ ಒದಗಿಸಲು ನಾವು ಬದ್ಧರಾಗಿದ್ದೇವೆ. ಅಂತರ್ಜಾಲ ವೇಗವಾಗಿ ವೃದ್ಧಿಯಾಗಬೇಕು ಇನ್ನಷ್ಟು ವಿಸ್ತೃತ ಜಾಲ ಹೊಂದಬೇಕು ಎಂದು ಗೂಗಲ್ ಇಚ್ಛಿಸಿದೆ.
ಸ್ಯಾಂಡಿ ಚಂಡಮಾರುತ ಅಪ್ಪಳಿಸಿದ ನಂತರ ಸ್ಟಾರ್ ಬಕ್ಸ್ ನಲ್ಲಿ ವೈಫೈ ಇಂಟರ್ನೆಟ್ ಬಳಕೆ ಹೆಚ್ಚಳ ಕಂಡಿದೆ. ವಿದ್ಯಾರ್ಥಿಗಳು ಸೇರಿದಂತೆ ನೆಟ್ಟಿಗರು ತಮ್ಮ ಕಾರ್ಯಗಳನ್ನು ಮನೆಗಿಂತ ಹೆಚ್ಚಾಗಿ ಸ್ಟಾರ್ ಬಕ್ಸ್ ನಲ್ಲಿ ಕೂತು ಮುಗಿಸುತ್ತಿದ್ದಾರೆ.
ಗೂಗಲ್ ತನ್ನ ಹೊಸ ಜಾಲವನ್ನು ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ. ಗೂಗಲ್ ಸ್ಟಾರ್ ಬಕ್ಸ್ SSID ಗೆ ಲಾಗ್ ಇನ್ ಆಗಿ ಸಂಪರ್ಕ ಹೊಂದಬಹುದು ಎಂದು ಗೂಗಲ್ ಆಕ್ಸೆಸ್ ನ ಪ್ರಧಾನ ವ್ಯವಸ್ಥಾಪಕ ಕೆವಿನ್ ಲೊ ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ಗೂಗಲ್ ಬ್ಲಾಗ್ ನಲ್ಲಿ ಓದಬಹುದು.












Click it and Unblock the Notifications