ಕೈರೋ ಹಿಂಸಾಚಾರ, 125ಕ್ಕೂ ಅಧಿಕ ಜನ ಬಲಿ

ಕೈರೋ, ಜು.28: ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಭಾರಿ ಕದನ ಉಂಟಾಗಿದೆ. ಶನಿವಾರ ಮಧ್ಯಾಹ್ನದ ಪ್ರಾರ್ಥನೆ ಬಳಿಕ ಸಾವಿರಾರು ಜನರಿದ್ದ ಎರಡೂ ಗುಂಪುಗಳು ಕೈರೋದಲ್ಲಿ ಮುಖಾಮುಖಿ ಘರ್ಷಣೆಯಾಗಿದೆ.

ಈ ವೇಳೆ ನಡೆದ ಹಿಂಸಾಚಾರದಲ್ಲಿ 125ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಕನಿಷ್ಠ ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರ ತೀವ್ರರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಕಂಡಲ್ಲಿ ಗುಂಡಿಗೆ ಆದೇಶಿಸಲಾಗಿದೆ.

ಈಜಿಪ್ತ್‌ನ ಈ ಹಿಂದಿನ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರನ್ನು ಕೆಳಗಿಳಿಸಲು ದೇಶಾದ್ಯಂತ ದಂಗೆಗಳು ನಡೆದಿವೆ. ಮುಸ್ಲಿಂ ಬ್ರದರ್‌ಹುಡ್‌ನ ಬೆಂಬಲವಿರುವ ಮೊಹಮದ್ ಮೋರ್ಸಿ ಅವರು ಹಮಾಸ್ ಉಗ್ರರ ನೆರವು ಪಡೆದು, ದೇಶದ ಹಲವು ಪೊಲೀಸ್ ಠಾಣೆಗಳು ಹಾಗೂ ಕಾರಾಗೃಹಗಳ ಮೇಲೆ ದಾಳಿ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ.

Over 125 killed in police firing on pro-Morsi supporters:Brotherhood

ಈ ಪ್ರಕರಣ ಸಂಬಂಧ ಮೋರ್ಸಿವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ ಈಜಿಪ್ಟ್ ನ್ಯಾಯಾಲಯ ಆದೇಶ ನೀಡಿದೆ. ಈಗಾಗಲೇ ಮೋರ್ಸಿ ಸೇನೆಯ ವಶದಲ್ಲಿದ್ದಾರೆ. ಇದನ್ನು ವಿರೋಧಿಸಿ ಬ್ರದರ್‌ಹುಡ್ ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದಾರೆ.

ಈ ಹಿಂಸಾಚಾರದ ಬಗ್ಗೆ ವರದಿ ಮಾಡಿರುವ ಅಲ್ ಜಝೀರಾ ಸುದ್ದಿ ವಾಹಿನಿ, ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ 125ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕನಿಷ್ಠ 4,500 ಜನರು ಗಾಯಗೊಂಡಿದ್ದಾರೆ ಎಂದಿದೆ.

ಆದರೆ, ಘಟನೆಯಲ್ಲಿ ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಇನ್ನೂ ಅಧಿಕೃತವಾಗಿ ಹೊರ್ರಬಿದ್ದಿಲ್ಲ. ಮೋರ್ಸಿ ಪದಚ್ಯುತಗೊಂಡ ದಿನದಿಂದ ಇಲ್ಲಿಯವರೆಗೂ ನಡೆದಿರುವ ದಾಳಿಯಲ್ಲಿ ಎಷ್ಟು ಜನ ಸತ್ತಿದ್ದಾರೆ ಎಂಬ ಮಾಹಿತಿ ಕಲೆಹಾಕಲು ಸರಕಾರ ತನಿಖಾ ತಂಡವನ್ನು ರಚಿಸಲಾಗಿದೆ. ಈಶಾನ್ಯ ಕೈರೋದಲ್ಲಿರುವ ರಬ್ಬಾ ಅಲ್-ಅದಾವಿಯಾದಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ತಾಳಿದ್ದು ಯೋಧರ ಗುಂಡಿನ ದಾಳಿ ಇನ್ನೂ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+