ಸಂಸದೆ ಹೊಗಳಿ ವಿವಾದ ಸೃಷ್ಟಿಸಿದ ದಿಗ್ವಿಜಯ್ ಸಿಂಗ್

ಮಧ್ಯಪ್ರದೇಶ, ಜು.26 : ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಪಕ್ಷದ ಸಂಸದೆ ಬಗ್ಗೆ ಕಾಮೆಂಟ್ ಮಾಡಿ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

ಶುಕ್ರವಾರ ಮಧ್ಯಪ್ರದೇಶದ ಮಂದ್ ಸೌರ್ ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಂಸದೆ, ಮೀನಾಕ್ಷಿ ನಟರಾಜನ್ ಅವರನ್ನು ದಿಗ್ವಿಜಯ್ ಸಿಂಗ್ ಸೆಕ್ಸಿ ಮಹಿಳೆ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

ರಾಹುಲ್ ಗಾಂಧಿಯವರ ಆಪ್ತ ಸಹಾಯಕಿ ಆಗಿರುವ ಮೀನಾಕ್ಷಿ ನಟರಾಜನ್ ಅವರು, ಸಂಸತ್ ಸದಸ್ಯೆ, ಆಕೆ ಗಾಂಧಿವಾದಿ. ಆಕೆ ತುಂಬಾ ಸರಳ ಹಾಗು ವಿಶ್ವಾಸರ್ಹಳು. ಆಕೆ ಗ್ರಾಮದಿಂದ ಗ್ರಾಮಗಳಿಗೆ ಹೋಗಿ ಜನರ ಸಮಸ್ಯೆಗಳನ್ನು ಎಲ್ಲವನ್ನು ಆಲಿಸುತ್ತಾರೆ.

ನನಗೆ ರಾಜಕೀಯದಲ್ಲಿ 40-42 ವರ್ಷದ ಅನುಭವವಿದ್ದು, ನಾನು ಹಳೇ ರಸಿಕ. ಯಾರು ಒಳ್ಳೆಯವರು ಯಾರು ಕೆಟ್ಟವರು ಎಂಬುದರ ಬಗ್ಗೆ ರಾಜಕಾರಣಿಗಳು ಬೇಗನೆ ಪತ್ತೆ ಹಚ್ಚಿ ಬಿಡುತ್ತಾರೆ. ಆಕೆ 100%ಸೆಕ್ಸೀ ಮಹಿಳೆ ಹಾಗು ಆಕೆ ಬಡವರಿಗಾಗಿ ಹೋರಾಡುತ್ತಿದ್ದಾಳೆ ಎಂದು ಸಿಂಗ್ ಹೇಳಿದ್ದಾರೆ.

Meenakshi Natarajan

ಮೀನಾಕ್ಷಿ ನಟರಾಜನ್ ಗುಂಪಿನಲ್ಲಿ ಸೇರುವುದಿಲ್ಲ, ಬದಲಾಗಿ ಗುಂಪನ್ನು ತನ್ನೊಂದಿಗೆ ಕರೆದುಕೊಂಡು ಹೋಗುವ ಶಕ್ತಿ ಹೊಂದಿದ್ದಾರೆ. ದೆಹಲಿಯ ಲೋಕಸಭೆಯಲ್ಲಿ ಹಾಗು ಪಕ್ಷದ ಒಳಗೂ ತನ್ನ ಛಾಪು ಮೂಡಿಸಿದ್ದಾರೆ.

ಸೋನಿಯಾಜಿ ಮತ್ತು ರಾಹುಲ್‌ಜಿ ಅವರಿಗೆ ಗೌರವ ನೀಡುತ್ತಾರೆ. ನನ್ನಂತಹ ನಾಯಕರು ಮೀನಾಕ್ಷಿ ಅವರಿಗೆ ಹೆದರುತ್ತಾರೆ. ಅವರಿಗೆ ನಿಮ್ಮ ಬೆಂಬಲ ನೀಡಿ ಎಂದು ದಿಗ್ವಿಜಯ್ ಸಿಂಗ್ ಜನರಿಗೆ ಮನವಿ ಮಾಡಿದ್ದಾರೆ.

ದಿಗ್ವಿಜಯ್ ಸಿಂಗ್ ಈ ರೀತಿ ಹೇಳುತ್ತಿದ್ದ ಸಮಾರಂಭದಲ್ಲಿ ಮೀನಾಕ್ಷಿ ನಟರಾಜನ್ ಉಪಸ್ಥಿತರಿದ್ದರು.ಆದರೆ, ಸಿಂಗ್ ಹೇಳಿಕೆಗೆ ಮೀನಾಕ್ಷಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+