ಮುಂಬೈ ಟಿವಿ ಆ್ಯಂಕರ್ ಮೇಲೆ ದೌರ್ಜನ್ಯ

ಕೋಲ್ಕೊತ್ತಾಗೆ ಭೇಟಿ ನೀಡಿದ್ದ ಮುಂಬೈನ ಟಿವಿ ಆ್ಯಂಕರ್ ಮೇಲೆ ಹೌರಾ ನಿಲ್ದಾಣದಲ್ಲಿ ಸೋಮವಾರ ರಾತ್ರಿ ದೌರ್ಜನ್ಯ ನಡೆದಿದೆ. ದುರ್ದೈವೆಂದರೆ ಆಕೆಯ ಮೇಲೆ ದೌರ್ಜನ್ಯ ನಡೆದಿದ್ದಾಗ ಸಹಾಯಕ್ಕೆ ಚೀರಿಕೊಂಡಾಗ ಸುತ್ತಮುತ್ತಲಿದ್ದವರು ಆಕೆಯ ನೆರವಿಗೆ ಧಾವಿಸುವ ಬದಲು ಪಾತಕಿಗಳನ್ನು ಉತ್ತೇಜಿಸಿದ್ದಾರೆ.
32 ವರ್ಷದ ಟಿವಿ ಆ್ಯಂಕರ್ ತನ್ನ ತಂದೆ ಮತ್ತು ಇಬ್ಬರು ಸ್ನೇಹಿತರೊಂದಿಗೆ ತಿಂಡಿ ಖರೀದಿಸಲು ಅಂಗಡಿ ಮುಂದೆ ನಿಂತಿದ್ದಾಗ ದಾಳಿಕೋರ ರತನ್ ಸಾಹು, ತನ್ನ ಕಾರಿನಿಂದ ಇಳಿದು ಆಕೆಯ ಮೇಲೆ ದೌರ್ಜನ್ಯಕ್ಕೆ ಮುಂದಾಗಿದ್ದಾನೆ. ನಂತರ ಆಕೆಯನ್ನು ತನ್ನ ಕಾರಿನೊಳಕ್ಕೆ ಎಳೆದುಕೊಳ್ಳುವ ದಾರ್ಷ್ಯವನ್ನೂ ಪ್ರದರ್ಶಿಸಿದ್ದಾನೆ.
ಆ ವೇಳೆ ಉಳಿದಿಬ್ಬರು ಮಹಿಳೆಯರು ಅವನಿಗೆ ಸಮಾ ಬಾರಿಸಿದ್ದಾರೆ. ಆಗಲೇ ಸ್ಥಳೀಯರು ಅವನನ್ನೇ ಪುರಸ್ಕರಿಸಿದ್ದಾರೆ. ಇದರಿಂದ ಪ್ರೇರಿತನಾದ ಆರೋಪಿ ರತನ್ ಸಾಹು, ಆ್ಯಂಕರ್ ಸ್ನೇಹಿತೆಯರಿಗೆ ಬಾರಿಸಿ, ಅವರನ್ನು ಸುಮ್ಮನಾಗಿಸಿದ್ದಾನೆ. ಈ ಮಧ್ಯೆ ಧೈರ್ಯ ತಂದುಕೊಂಡ ಆ್ಯಂಕರ್ ಸಾಹುಗೆ ಚಪ್ಪಲಿಯಲ್ಲಿ ಬಾರಿಸಲಾರಂಭಿಸಿದ್ದಾಳೆ.
ಸುಮಾರು 20 ನಿಮಿಷಗಳ ಕಾಲ ಇದೇ ಕಾಟ ಮುಂದುವರಿದಿದೆ. ಬಳಿಕ ಪೊಲೀಸರು ಆಗಮಿಸಿ, ಯುವತಿಯನ್ನು ರಕ್ಷಿಸಿದ್ದಾರೆ. ಆರೋಪಿ ರತನ್ ಸಾಹುನನ್ನು ವಶಕ್ಕೆ ತೆಗೆದುಕೊಂಡು ಕೋರ್ಟಿಗೆ ಹಾಜರುಪಡಿಸಿದ್ದಾರೆ. ಆದರೆ ಮಾರನೆಯ ದಿನ ಜಾಮೀನು ಪಡೆದು ಅವನು ಬಂಧನದಿಂದ ಪಾರಾಗಿದ್ದಾನೆ.


Click it and Unblock the Notifications
