ಚಿತ್ರದುರ್ಗದ ಚೇತನಾ ಸ್ಥಿತಿ ಗಂಭೀರ

Chetana
ಬೆಂಗಳೂರು, ಜು.25 : ವೈದ್ಯರ ಎಡವಟ್ಟಿನಿಂದಾಗಿ ಕೋಮಾಸ್ಥಿತಿಯಲ್ಲಿರುವ ಚಿತ್ರದುರ್ಗ ಮೂಲದ ಚೇತನಾ ಅವರ ಸ್ಥಿತಿ ಗಂಭೀರವಾಗಿದೆ. ನಿಮ್ಹಾನ್ಸ್ ನಲ್ಲಿ ದಾಖಲಾಗಿರುವ ಅವರು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನಿಮ್ಹಾನ್ಸ್ ಅಧೀಕ್ಷಕ ಡಾ.ಸತೀಶ್, ಚೇತನಾ ಅವರಿಗೆ ಕೆಲವು ದಿನಗಳ ಹಿಂದೆ ನಾಯಿ ಕಚ್ಚಿತ್ತು. ಆದ್ದರಿಂದ ಅವರು ರೇಬಿಸ್ ರೋಗಕ್ಕೆ ತುತ್ತಾಗಿದ್ದಾರೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಚೇತನಾ ಅವರಿಗೆ ಅರಿವಳಿಕೆ ಔಷಧಿ ನೀಡಿರುವುದರಿಂದ ಮೆದುಳಿನ ಸೋಂಕು ಉಂಟಾಗಿದೆ. ತುರ್ತು ಚಿಕಿತ್ಸಾ ಘಟಕದಲ್ಲಿ ಅವರನ್ನು ದಾಖಲಿಸಲಾಗಿದ್ದು, ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. (ವೈದ್ಯರ ಯಡವಟ್ಟು ಯುವತಿ ಕೋಮಾಸ್ಥಿತಿಗೆ)

ವೈದ್ಯರ ಸ್ಪಷ್ಟನೆ : ಚೇತನಾ ಅವರಿಗೆ ಓವರ್ ಡೋಸ್ ಔಷಧಿ ನೀಡಿರುವ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಕೃಷ್ಣ ಆಸ್ಪತ್ರೆಯ ವೈದ್ಯ ಡಾ.ದೀಪಕ್ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿ, ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಒಬ್ಬ ವೈದ್ಯನಾಗಿ ನಾನು ವೈಜ್ಞಾನಿಕವಾಗಿಯೇ ಚಿಕಿತ್ಸೆ ನೀಡಿದ್ದೇನೆ. ಚೇತನಾ ಸಂಬಂಧಿಕರಿಂದ ನನಗೆ ಜೀವ ಬೆದರಿಕೆ ಇರುವುದರಿಂದ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡುವುದು ವಿಳಂಬವಾಯಿತು ಎಂದು ಹೇಳಿದ್ದಾರೆ. ಚೇತನಾ ಅವರು ಆಸ್ಪತ್ರೆಗೆ ಬಂದಾಗ ವಿಪರೀತವಾದ ಚಳಿ, ಜ್ವರದಿಂದ ಬಳಲುತ್ತಿದ್ದರು. ಅವರಿಗೆ ನಾನೇ ಚಿಕಿತ್ಸೆ ನೀಡಿದ್ದೆ ಎಂದು ಡಾ.ದೀಪಕ್ ಒಪ್ಪಿಕೊಂಡಿದ್ದಾರೆ.

ವೈದ್ಯರು ಏನೇ ಸ್ಪಷ್ಟನೆ ನೀಡಿದರೂ ಚೇತನಾ ಅವರು ಮಾತ್ರ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇಂತಹ ಘಟನೆಗಳಿಗೆ ಯಾರು ಜವಾಬ್ದಾರಿ? ಅವರಿಗೆ ಎಂತಹ ಶಿಕ್ಷೆ ನೀಡಬೇಕು ಎಂದು ಸರ್ಕಾರವೇ ತೀರ್ಮಾನಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+