ದುಡ್ಡು ತೆತ್ತು ಮೋದಿ ಭಾಷಣ ಕೇಳೋಕೆ ಹೋಗ್ತೀರಾ?

ಹೈದರಾಬಾದ್, ಜು 22: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೈದರಾಬಾದಿನಲ್ಲಿ ನಡೆಸಲು ಉದ್ದೇಶಿಸಿರುವ ಸಾರ್ವಜನಿಕ ಸಭೆ ವ್ಯಾಪಕ ಚರ್ಚೆಗೊಳಗಾಗುತ್ತಿದೆ. ಆಗಸ್ಟ್ ಹನ್ನೊಂದರಂದು ಆಯೋಜಿಸಲಾಗಿರುವ ಮೋದಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಸಾರ್ವಜನಿಕರು ಐದು ರೂಪಾಯಿ ಪಾವತಿಸ ಬೇಕಾಗಿದೆ.

ಈ ಸಂಬಂಧ ಭಾರತೀಯ ಜನತಾ ಪಾರ್ಟಿ ಇಂದು ಅಧಿಕೃತವಾಗಿ ನೊಂದಾಣಿ ಕಾರ್ಯ ಆರಂಭಿಸಿದೆ. ಆನ್ ಲೈನ್ ನೊಂದಣಿ ಕಾರ್ಯ ಹೋದ ವಾರವೇ ಆರಂಭವಾಗಿತ್ತು. ಇದರಲ್ಲಿ ಬರುವ ಮೊತ್ತವನ್ನು ಉತ್ತರಾಖಂಡದ ನೆರೆ ಸಂತ್ರಸ್ತರಿಗೆ ನೀಡುವ ಸದುದ್ದೇಶವನ್ನು ಈ ಸಾರ್ವಜನಿಕ ಸಭೆ ಹೊಂದಿದೆ.

ಒಂದು ರೀತಿಯಲ್ಲಿ ಬಿಜೆಪಿ ನರೇಂದ್ರ ಮೋದಿಗಿರುವ ಜನಪ್ರಿಯತೆಯನ್ನು ಬಿಂಬಿಸುವ ಸಲುವಾಗಿ ಈ ಬೃಹತ್ ಸಾರ್ವಜನಿಕ ಸಭೆ ಆಯೋಜಿಸುತ್ತಿದೆ ಎಂದೂ ಹೇಳಲಾಗುತ್ತಿದೆ. ಮೋದಿ ಸಭೆಯ ಆನ್ ಲೈನ್ ಮತ್ತು ಆಫ್ ಲೈನ್ ನೊಂದಣಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹೈದರಾಬಾದಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಮತ್ತು ಈ ಮೈದಾನ ಮೂವತ್ತು ಸಾವಿರ ಜನ ಸೇರುವ ಸಾಮರ್ಥ್ಯವನ್ನು ಹೊಂದಿದೆ.

ಕಾಂಗ್ರೆಸ್ ಟೀಕೆ

ಕಾಂಗ್ರೆಸ್ ಟೀಕೆ

ನರೇಂದ್ರ ಮೋದಿ ಮಾರುಕಟ್ಟೆ ವ್ಯಾಲ್ಯೂ ಬರೀ ಐದು ರೂಪಾಯಿ. ಅದಕ್ಕಾಗಿಯೇ ಐದು ರೂಪಾಯಿ ಶುಲ್ಕ ವಿಧಿಸುತ್ತಿದೆ. ನರೇಂದ್ರ ಮೋದಿ ಭಾಷಣಕ್ಕೆ ಐದು ರೂಪಾಯಿಯ ಕಿಮ್ಮತ್ತಿಲ್ಲ. ಮೋದಿ ಭಾಷಣ ಕೇಳುವುದಕ್ಕೆ ಲಾಯಕ್ಕಾಗಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಬಿಜೆಪಿ ಸ್ಪಷ್ಟನೆ

ಬಿಜೆಪಿ ಸ್ಪಷ್ಟನೆ

ಮೋದಿ ಜನಪ್ರಿಯತೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಅರಗಿಸಿ ಕೊಳ್ಳಲಾಗುತ್ತಿಲ್ಲ. ಹತಾಶರಾಗಿ ಕಾಂಗ್ರೆಸ್ ಹೇಳಿಕೆ ನೀಡುತ್ತಿದೆ. ಮೋದಿ ಭಾಷಣಕ್ಕೆ ಜನ ಐದು ರೂಪಾಯಿ ಪಾವತಿಸಿ ಬರುತ್ತಾರೆ. ಕಾಂಗ್ರೆಸ್ ಪಕ್ಷದ ಸಭೆಗೆ ಜನ ಬರುವುದೇ ಇಲ್ಲ, ಒಂದು ವೇಳೆ ಅವರೂ ಶುಲ್ಕ ವಿಧಿಸಿದರಂತೂ ಮುಗಿಯಿತು, ಬರುವವರೂ ಬರುವುದಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.

ಉತ್ತರಾಖಂಡ

ಉತ್ತರಾಖಂಡ

ಮಹಾತ್ಮ ಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಕೂಡಾ ಈ ಹಿಂದೆ ಸಣ್ಣ ದೇಣಿಗೆ ಸಾರ್ವಜನಿಕರಿಂದ ಪಡೆದು ಸಾಮಾಜಿಕ ಕೆಲಸಗಳಿಗೆ ಬಳಸುತ್ತಿದ್ದರು. ನಾವೂ ಇದರಲ್ಲಿ ಬರುವ ಹಣವನ್ನು ಉತ್ತರಾಖಂಡದ ಸಂತ್ರಸ್ತರಿಗೆ ನೀಡುವ ಉದ್ದೇಶ ಹೊಂದಿದ್ದೇವೆ ಎಂದು ಬಿಜೆಪಿ ಹೈದರಾಬಾದ್ ಘಟಕದ ಪ್ರಧಾನ ಕಾರ್ಯದರ್ಶಿ ಜಿ ಕೆ ರೆಡ್ಡಿ ಹೇಳಿದ್ದಾರೆ.

ಜಿ ಕೆ ರೆಡ್ಡಿ

ಜಿ ಕೆ ರೆಡ್ಡಿ

ನಾವು ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿ ಇರದಿದ್ದಾಗ 1993ರಲ್ಲಿ ಮುಂಬೈ ಸರಣಿ ಸ್ಪೋಟ ನಡೆಯಿತು. ಎರಡೂ ಕಡೆ ಅಲ್ಲಿ ಇದ್ದದ್ದು ಕಾಂಗ್ರೆಸ್ ಸರಕಾರ. ಕಾಂಗ್ರೆಸ್ ವಕ್ತಾರರು ಹೇಳಿಕೆ ನೀಡುವ ಮುನ್ನ ಸತ್ಯಾಂಸ ಅರಿತು ಮಾತಾಡಲಿ ಎಂದು ರೆಡ್ಡಿ ಹೇಳಿದ್ದಾರೆ.

ಮನೀಶ್ ತಿವಾರಿ

ಮನೀಶ್ ತಿವಾರಿ

ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಗುಜರಾತ್ ಗೋಧ್ರಾ ಹತ್ಯಾಕಾಂಡದ ನಂತರ ಅಸ್ತಿತ್ವಕ್ಕೆ ಬಂತು ಎಂದು ಕಾಂಗ್ರೆಸ್ ವಕ್ತಾರ ಶಕೀಲ್ ಅಹಮದ್ ವಿವಾದಕಾರಿ ಹೇಳಿಕೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+