ಮೆಟ್ರೋ ಬಗ್ಗೆ ತಿಳಿಯಲು ಎಂಜಿ ರಸ್ತೆಗೆ ಹೋಗಿ ಬನ್ನಿ!

ಬೆಂಗಳೂರು, ಜು.20 : ಮಹಾನಗರ ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ. ಜನರಿಗೆ ಕಾಮಗಾರಿ ಹೇಗೆ ನಡೆಯುತ್ತಿದೆ ಎಂಬ ಕುತೂಹಲವಿದೆ. ಆದರೆ, ಅಲ್ಲಿಗೆ ಪ್ರವೇಶ ನೀಡುವುದಿಲ್ಲ. ಜನರಿಗೆ ಮಟ್ರೋ ಕಾಮಗಾರಿಯ ಮಾಹಿತಿ ನೀಡಲು ನಮ್ಮ ಮೆಟ್ರೋ ನಿಗಮ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದೆ.

ಎಂ.ಜಿ.ರಸ್ತೆಯಲ್ಲಿರುವ ಮೆಟ್ರೋ ರಂಗೋಲಿ ಕಲಾ ಕೇಂದ್ರದಲ್ಲಿ ಶುಕ್ರವಾರ ಈ ಪ್ರದರ್ಶನ ಆರಂಭಗೊಂಡಿದೆ. ಆಗಸ್ಟ್ 18ರ ವರೆಗೆ ಈ ಪ್ರದರ್ಶನ ಸಾರ್ವಜನಿಕರಿಗೆ ಭೇಟಿಗೆ ಮುಕ್ತವಾಗಿರುತ್ತದೆ. ನಮ್ಮ ಮಟ್ರೋದ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಪ್ರದರ್ಶನದಲ್ಲಿ ಲಭ್ಯವಿದೆ.

ನಮ್ಮ ಮೆಟ್ರೋದ ಸುರಂಗ ಮಾರ್ಗ ಪೂರ್ಣಗೊಂಡ ಮೇಲೆ ನಿಲ್ದಾಣ ಹೇಗೆ ಕಾಣುತ್ತದೆ. ನಿಲ್ದಾಣದ ಮೇಲ್ಭಾಗದ ರಸ್ತೆಗಳು ಹೇಗಿರುತ್ತವೆ? ಎಂಬ ಕುತೂಹಲಭರಿತ ಪ್ರಶ್ನೆಗಳಿಗೆ ಪ್ರದರ್ಶನದಲ್ಲಿ ಉತ್ತರ ದೊರೆಯಲಿದೆ.ಕೇವಲ ಚಿತ್ರಗಳು ಮಾತ್ರವಲ್ಲ ಪ್ರತಿಕೃತಿಗಳು ಇಲ್ಲಿ ಲಭ್ಯವಿವೆ.

metro

ಪ್ರದರ್ಶನದಲ್ಲಿ ಏನಿದೆ : ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕು ಸುರಂಗ ಮಾರ್ಗಗಳ ಮಿನಿ ಪ್ರತಿಕೃತಿಗಳನ್ನು ನೀವು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಮೇಕಿಂಗ್ ಆಫ್ ದಿ ಮೆಟ್ರೋ ಶೀರ್ಪಿಕೆಯಡಿ ಸುರಂಗ ಕೊರೆಯುವ ಬೃಹತ್ ಯಂತ್ರದ ಪ್ರತಿಕೃತಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಸುರಂಗ ಮಾರ್ಗ ಕೊರೆಯುವಾಗ ತಜ್ಞರಿಗೆ ಉಂಟಾದ ಸವಾಲು, ಅದನ್ನು ಎದುರಿಸಿ ಅವರ ಕಾರ್ಯ ಪೂರ್ಣಗೊಳಿಸಿರುವುದು ಮುಂತಾದ ವಿವರಗಳು ಪ್ರದರ್ಶನದಲ್ಲಿ ನಿಮಗೆ ದೊರೆಯಲಿವೆ. ಸುರಂಗ ಮಾರ್ಗದ ಮಣ್ಣಿನ ರಚನೆಯ ಬಗ್ಗೆಯೂ ವಿವರಣೆ, ಕಾಮಗಾರಿಯಲ್ಲಿ ದೊರಕಿದ ವಸ್ತುಗಳನ್ನು ಪ್ರದರ್ಶನದಲ್ಲಿ ಕಾಣಬಹುದು. (ಮೆಟ್ರೋ ಮರೆಯಲಾರದ ಆ ಮೊದಲ ದಿನ)

ವೀಕೆಂಡ್ ಕಳೆಯುವುದು ಹೇಗೆ ಎಂದು ನೀವು ಆಲೋಚಿಸುತ್ತಿದ್ದರೆ, ಈ ಪ್ರದರ್ಶನಕ್ಕೆ ಒಮ್ಮೆ ಹೋಗಿ ಬನ್ನಿ. ಬೆಂಗಳೂರಿನಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯ ಸಂಪೂರ್ಣ ಚಿತ್ರಣ ನಿಮಗೆ ಲಭಿಸುತ್ತದೆ. ಒಂದಷ್ಟು ವಿವರ ತಿಳಿದುಕೊಂಡು, ಭರ್ಜರಿ ಶಾಪಿಂಗ್ ಮಾಡಿಕೊಂಡು ಹಿಂದಿರುಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+