ಸಿಂಗಪುರ : 3 ಭಾರತೀಯರು ಸೇರಿ 25 ಜನರಿಗೆ ಜೈಲು

Three Indians among 25 jailed in Singapore
ಸಿಂಗಪುರ, ಜು. 18 : ಕೆಲಸದ ಅನುಮತಿ ಪಡೆಯಲು ನಕಲಿ ದಾಖಲೆ ಸೃಷ್ಟಿಸಿದ್ದಕ್ಕಾಗಿ ಮೂವರು ಭಾರತೀಯರು ಸೇರಿದಂತೆ 25 ವಿದೇಶಿಯರಿಗೆ ನಾಲ್ಕು ವಾರಗಳ ಜೈಲು ಶಿಕ್ಷೆ ವಿಧಿಸಿ ಸಿಂಗಪುರದ ನ್ಯಾಯಾಲಯ ಬುಧವಾರ ತೀರ್ಪ ನೀಡಿದೆ.

ಈ ಎಲ್ಲರ ಬಳಿ ವಿಶ್ವವಿದ್ಯಾಲಯದ ಅಸಲಿ ಸರ್ಟಿಫಿಕೇಟ್ ಇಲ್ಲದ್ದರಿಂದ ಕೆಲಸ ಗಿಟ್ಟಿಸಲು ನಕಲಿ ಸರ್ಟಿಫಿಕೇಟುಗಳನ್ನು ಸೃಷ್ಟಿಸಿದ್ದರು ಎಂದು ಸಿಂಗಪುರದ ಮ್ಯಾನ್ ಪವರ್ ಸಚಿವಾಲಯ ಹೇಳಿದೆ. ಇವರೆಲ್ಲ ತಮ್ಮ ತಪ್ಪನ್ನು ನ್ಯಾಯಾಲಯದಲ್ಲಿ ಮಂಗಳವಾರ ಒಪ್ಪಿಕೊಂಡಿದ್ದರು.

ಇಪ್ಪತ್ತೈದು ಅಪರಾಧಿಗಳಲ್ಲಿ ಇಪ್ಪತ್ತು ಜನರಿಗೆ ನಾಲ್ಕು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದ್ದರೆ, ಉಳಿದ ಐವರ ಬಳಿ ದಂಡ ಕಟ್ಟಲು 5 ಸಾವಿರ ಸಿಂಗಪುರ ಡಾಲರ್ ಇಲ್ಲದಿದ್ದರಿಂದ ಅವರಿಗೆ 20 ದಿನಗಳ ಜೈಲು ಶಿಕ್ಷೆಯನ್ನು ನ್ಯಾಯಾಧೀಶರು ವಿಧಿಸಿದ್ದಾರೆ.

ಈ ಅಪರಾಧಿಗಳಲ್ಲಿ ಐವರು ಬಾಣಸಿಗರು, ಓರ್ವ ಕೇಶವಿನ್ಯಾಸಕಾರ ಮತ್ತು ಒಬ್ಬ ನೃತ್ಯ ನಿರ್ದೇಶಕನಿದ್ದಾನೆ. ಇವರು 2012ರ ಮೇ ಮತ್ತು ಆಗಸ್ಟ್ ತಿಂಗಳಲ್ಲಿ ನಕಲಿ ದಾಖಲೆ ಸಲ್ಲಿಸಿ ನಾನಾ ಹುದ್ದೆಗಳನ್ನು ಗಿಟ್ಟಿಸಿಕೊಂಡಿದ್ದರು. ಆದರೆ, ಈ ಖದೀಮತನವನ್ನು ಮುಚ್ಚಿಡಲು ಎಷ್ಟು ದಿನ ಸಾಧ್ಯ?

ಇಪ್ಪತ್ನಾಲ್ಕು ಜನರು ತಮ್ಮ ದೇಶದಿಂದಲೇ ನಕಲಿ ಸರ್ಟಿಫಿಕೇಟುಗಳನ್ನು ಸೃಷ್ಟಿಸಿಕೊಂಡು ಸಚಿವಾಲಯಕ್ಕೆ ಸಲ್ಲಿಸಿದ್ದರು. ಓರ್ವ ಯುವತಿಗೆ ತನ್ನ ಉದ್ಯೋಗದಾತನೇ ನಕಲಿ ಸರ್ಟಿಫಿಕೇಟ್ ಸೃಷ್ಟಿಸಿದ್ದಾನೆ ಎಂದು ತಿಳಿದಿದ್ದರೂ ಸಚಿವಾಲಯಕ್ಕೆ ಇದರ ಬಗ್ಗೆ ಮಾಹಿತಿ ನೀಡಿರಲಿಲ್ಲ.

ಈ ಖದೀಮರ ಗುಂಪಿನಲ್ಲಿ 20 ಪುರುಷರಿದ್ದರೆ, 5 ಜನರು ಮಹಿಳೆಯರಿದ್ದಾರೆ. 21 ಜನರು ಮ್ಯಾನಮಾರ್ ದೇಶದಿಂದ ಬಂದಿದ್ದರೆ, ಮೂವರು ಭಾರತ, ಒಬ್ಬರು ಫಿಲಿಪೈನ್ಸ್ ದೇಶದಿಂದ ಉದ್ಯೋಗ ಅರಸಿ ಬಂದಿದ್ದರು. ಇದೇ ವರ್ಷ ಒಟ್ಟು 28 ಇಂಥದೇ ಪ್ರಕರಣಗಳನ್ನು ಸಿಂಗಪುರದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+