ಹೊಟ್ಟೆ ಕರಗಿಸುವವರಿಗೆ ಚಿನ್ನ ಬಹುಮಾನ!

ಶ್ರೀಮಂತ ಕೊಲ್ಲಿ ರಾಷ್ಟ್ರಗಳಲ್ಲಿ ಈ ಡೊಳ್ಳು ಹೊಟ್ಟೆಯ ಡುಬ್ಬಣ್ಣಗಳ ಸಂಖ್ಯೆ ಆತಂಕಕಾರಿ ಮಟ್ಟದಲ್ಲಿದ್ದು, ಶತಾಯಗತಾಯ 'ಹೊಟ್ಟೆ ಕರಗಿಸಲು' ಸ್ಥಳೀಯ ಆಡಳಿತಗಳು ಸಾಕಷ್ಟು ಪ್ರಯತ್ನಿಸಿವೆ. ಆದರೆ 'ಫಲ ನೀಡಿಲ್ಲ'. ಹಾಗಾಗಿ ಈ ಹೊಟ್ಟೆ ಇರುವವರ ಬಯಕೆಯನ್ನು ತಿಳಿದುಕೊಂಡಿರುವ ಸ್ಥಳೀಯ ಆಡಳಿತಗಳು, ಹೆಚ್ಚು ಹೊಟ್ಟೆ ಕರಗಿಸಿಕೊಳ್ಳುವವರಿಗೆ ಬಹುಮಾನದ ರೂಪದಲ್ಲಿ ಚಿನ್ನ ನೀಡುವುದಾಗಿ ಆಸೆ ಹುಟ್ಟಿಸಿದೆ.
ಹಾಗಾಗಿ ಜನ ಈಗ ಚಿನ್ನದ ಆಸೆಗೆ ಬಿದ್ದು ಮೈಭಾರ ಕಡಿಮೆ ಮಾಡಿಕೊಳ್ಳಲು ಜಿಮ್ ಸೆಂಟರುಗಳತ್ತ ಓಡುತ್ತಿದ್ದಾರಂತೆ! ನಿಮ್ಮ ತೂಕ ಚಿನ್ನಕ್ಕೆ ಸಮಾನ ಎಂದು ಆಸೆ ಹುಟ್ಟಿಸಿರುವ ಸ್ಥಳೀಯ ಆಡಳಿತಗಳು ಭಾರಿ ಭಾರಿ ಆಮಿಷಗಳನ್ನೇ ಒಡ್ಡುತ್ತಿವೆ.
ಏನಿಲ್ಲಾ ಸಿಂಪಲ್ಲಾಗಿ ಆಗಸ್ಟ್ 16ರ ವೇಳೆಗೆ ನೀವು ತೂಕ ಕಡಿಮೆ ಮಾಡಿಕೊಳ್ಳಿ. ಕನಿಷ್ಠ 2 ಕೆಜಿ ಆದರೂ ಕಡಿಮೆ ಮಾಡಿಕೊಳ್ಳಬೇಕು. ಹಾಗೆ ನೀವು ಕರಗಿಸುವ ತೂಕಕ್ಕೆ ಸಮನಾಗಿ ಅಂದರೆ ಒಂದು ಕೆಜಿ ತೂಕ ಕಡಿಮೆ ಮಾಡಿಕೊಂಡರೆ 1 ಗ್ರಾಂ ಚಿನ್ನ ನೀಡುತ್ತೇವೆ' ಎಂಬ ಜಾಹೀರಾತು ಫಲಕಗಳು ಎಲ್ಲೆಲ್ಲೂ ಈಗ ಕಣ್ಣುಕುಕ್ಕುತ್ತಿವೆ.
ಹೇಳಿ ಕೇಳಿ ಇದು ರಂಜಾನ್ ಸಮಯ. ಆರೋಗ್ಯದ ಬಗ್ಗೆ ಕಾಳಜಿ ಹೊಂದುವುದು ಒಳ್ಳೆಯದೇ. ಹಾಗಾಗಿ, ದುಬೈ ವಾಸಿಗಳು ಒಂದು ಕೈ ನೋಡುವುದು ವಾಸಿ.












Click it and Unblock the Notifications