ಮೆಡಿಕಲ್ ಕೋರ್ಸಿಗೆ ಪ್ರವೇಶ ಪರೀಕ್ಷೆ ರದ್ದು

ಮೂವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠದಲ್ಲಿ ಪ್ರವೇಶ ಪರೀಕ್ಷೆ ರದ್ದು ಪರ ಇಬ್ಬರು ನ್ಯಾಯಮೂರ್ತಿಗಳು ಮತ ಹಾಕಿದರೆ ಮತ್ತೊಬ್ಬರು ಎಂಸಿಐ ಆದೇಶವನ್ನು ಎತ್ತಿ ಹಿಡಿದರು. ಈ ಆದೇಶದ ಮೂಲಕ ಎಂಬಿಬಿಎಸ್, ಬಿಡಿಎಸ್ ಹಾಗೂ ಸ್ನಾತಕೋತ್ತರ ಪದವಿ ಮೆಡಿಕಲ್ ಕೋರ್ಸ್ ಗಳಿಗೆ ಎಂಸಿಐ ನಡೆಸಲು ಉದ್ದೇಶಿಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ತಡೆ ಬಿದ್ದಿದೆ.
ಆದರೆ, ಆದೇಶದಲ್ಲಿ ಇನ್ನೊಂದು ಸ್ಪಷ್ಟನೆ ನೀಡಿರುವ ಸುಪ್ರೀಂಕೊರ್ಟ್, ಈ ಆದೇಶದಿಂದ ಈಗಾಗಲೇ ಆರಂಭವಾಗಿರುವ ಪ್ರವೇಶಾತಿಗೆ ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ.
ಅಖಿಲ ಭಾರತ ಮೆಡಿಕಲ್ ಪ್ರವೇಶ ಪರೀಕ್ಷೆ ನಡೆಸಲು ಎಂಸಿಎಗೆ ಅಧಿಕಾರವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಹಾಗೂ ಜಸ್ಟೀಸ್ ವಿಕ್ರಜೀತ್ ಸೇನ್ ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರವೇಶ ಪರೀಕ್ಷೆ ಕುರಿತಂತೆ ಎಂಸಿಎ ನೀಡಿರುವ ಪ್ರಕಟಣೆಯು ಸಂವಿಧಾನದ ಕಾಯ್ದೆ ಸಂಖ್ಯೆ 19, 25, 26, 29 ಹಾಗೂ 30 ರ ಉಲ್ಲಂಘಟನೆಯಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಆದರೆ, ಜಸ್ಟೀಸ್ ಎಆರ್ ದಾವೆ ಅವರು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(NEET) ನಡೆಸುವುದು ಕಾನೂನು ಪ್ರಕಾರ ಸಮ್ಮತವಾಗಿದೆ. ಸಮಾಜಕ್ಕೆ ಇಂಥ ಪರೀಕ್ಷೆಗಳು ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
NEET ನಡೆಸಲು ಮುಂದಾಗಿದ್ದ ಎಂಸಿಐ ಕ್ರಮವನ್ನು ಪ್ರಶ್ನಿಸಿ ಸುಮಾರು 115ಕ್ಕೂ ಅಧಿಕ ಮೊಕದ್ದಮೆಗಳು ಸಲ್ಲಿಕೆಯಾಗಿತ್ತು. ಇದರಿಂದ ಮೆಡಿಕಲ್ ಕೋರ್ಸ್ ಫಲಿತಾಂಶ ಹೊರಬೀಳುವುದು ಕಷ್ಟವಾಗಿತ್ತು. ಆದರೆ, ಮೇ 13ರಂದು ಫಲಿತಾಂಶ ಪ್ರಕಟಣೆಗೆ ಇದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆಗೆದುಹಾಕಿತ್ತು. ನಂತರ ಪ್ರವೇಶಾತಿ ಪ್ರಕ್ರಿಯೆ ಚಾಲನೆಗೊಂಡಿತ್ತು. (ಪಿಟಿಐ)












Click it and Unblock the Notifications