ಗಡ್ಡಕ್ಕೆ ಬೆಂಕಿ ಹತ್ತಿದೆ, ಕಡೆಗೂ ಬಾವಿ ತೋಡಿದ ಯುಪಿಎ

ನವದೆಹಲಿ, ಜು.17: ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆಗಾಗಿ ಕೇಂದ್ರ ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದೆ. ರಕ್ಷಣಾ ಮತ್ತು ದೂರಸಂಪರ್ಕ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ) ಪ್ರಮಾಣವನ್ನು ಮಂಗಳವಾರ ಯುಪಿಎ ಸರ್ಕಾರ ಹೆಚ್ಚಿಸಿದೆ. ಟೆಲಿಕಾಂ, ವಿಮೆ, ರಕ್ಷಣಾ ಇಲಾಖೆ, ಸಾಲ ಮಾಹಿತಿ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಎಫ್ ಡಿಐಗೆ ಅವಕಾಶ ನೀಡಲಾಗಿದ್ದು ಭಾರಿ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ.

ದೂರಸಂಪರ್ಕ ಕ್ಷೇತ್ರದಲ್ಲಿ ಶೇ.100ರಷ್ಟು ಎಫ್ ಡಿಐಗೆ ಅವಕಾಶ ನೀಡಲಾಗಿದೆ. ಈ ಮುಂಚೆ ಶೇ 74ರಷ್ಟು ವಿದೇಶಿ ಹೂಡಿಕೆ ಸಾಧ್ಯವಿತ್ತು. ರಕ್ಷಣಾ ಕ್ಷೇತ್ರದಲ್ಲಿ ಈ ಪ್ರಮಾಣವನ್ನು ಶೇ. 26 ರಿಂದ ಶೇ.46ಕ್ಕೇರಿಸಲು ಸರ್ಕಾರ ನಿರ್ಧರಿಸಿದೆ. ಇದೇ ರೀತಿ ವಿಮಾ ಕ್ಷೇತ್ರದಲ್ಲಿ ಶೇ 49 ರಷ್ಟು ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದ್ದರೂ ಕೆಲವು ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

UPA forces reforms, allows 100% FDI in telecom sector

ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಚಿವರ ಸಭೆಯಲ್ಲಿ ಮಂಗಳವಾರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅರವಿಂಡ್ ಮಾಯಾರಾಮ್ ಅವರಿದ್ದ ಸಮಿತಿ ನೀಡಿದ ಶಿಫಾರಸ್ಸಿನ ಅನ್ವಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಭಾರತಕ್ಕೆ ಎಫ್ ಡಿಐ ಹೊಸ ವಿಷಯವೇನಲ್ಲ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಬಹು ಬ್ರ್ಯಾಂಡ್ ಗಳ ಮೇಲೆ ವಿದೇಶಿಯರ ಹಿಡಿತ ಹೆಚ್ಚಾಗುವುದು ಆತಂಕಕಾರಿ ಎಂಬ ಕೂಗು ಎದ್ದಿದೆ.ಬಹು ಬ್ರ್ಯಾಂಡ್ ಚಿಲ್ಲರೆ ಮಳಿಗೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ ಡಿಐ)ಗೆ ಮುಂದಾಗಿರುವ ಯುಪಿಎ ಸರ್ಕಾರಕ್ಕೆ ಸಂಸತ್ತಿನ ಉಭಯ ಸದನಗಳಲ್ಲೂ ಬಹುಮತ ಸಿಕ್ಕಿತು.

ಭಾರತದಲ್ಲಿ ಸಿಂಗಲ್ ಬ್ರ್ಯಾಂಡ್ ನಲ್ಲಿ ಎಫ್ ಡಿಐಗೆ ಅನುಮತಿ ಇದೆ. ಇದು ಹೋಲ್ ಸೇಲ್, ಬ್ಯಾಂಕಿಂಗ್, ವಿಮಾ ಕ್ಷೇತ್ರದಲ್ಲಿ ಜಾರಿಯಲ್ಲಿದೆ. ಆದರೆ, ಈಗ ಮಲ್ಟಿ ಬ್ರ್ಯಾಂಡ್ ನಲ್ಲಿ ಎಫ್ ಡಿಐಗೆ ಅನುಮತಿ ನೀಡಿದರೆ, ಅಂದರೆ ಶೇ 51 ರಷ್ಟು ಪಾಲು ವಿದೇಶಿ ಕಂಪನಿ ವಶವಾದರೆ, ಇಡೀ ಚಿಲ್ಲರೆ ಮಾರುಕಟ್ಟೆ ಶೆಟ್ಟಿ ಅಂಗಡಿ ಜುಟ್ಟು ಜನಿವಾರ ವಿದೇಶಿಯರ ಕೈವಶವಾಗಲಿದೆ. ವಿಮೆ, ಇನ್ಸುರೆನ್ಸ್ ಹಣಕ್ಕಾಗಿ ವಿದೇಶಿ ಕಂಪನಿ ಮುಂದೆ ಕೈ ಚಾಚುವಂತಾಗುತ್ತದೆ ಎಂದು ಚಿಲ್ಲರೆ ಮಾರಾಟಗಾರರು ಆತಂಕ ವ್ಯಕ್ತಪಡಿಸಿದ್ದರು. ಇದನ್ನೂ ತಪ್ಪದೇ ಓದಿ : ಚಿಲ್ಲರೆ ಮಾರುಕಟ್ಟೆ ಎಫ್ ಡಿಐ: ಲಾಭವೋ? ನಷ್ಟವೋ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+