ಚಿಲ್ಲರೆ ಮಾರುಕಟ್ಟೆ ಎಫ್ ಡಿಐ: ಲಾಭವೋ? ನಷ್ಟವೋ?

Posted By:
Subscribe to Oneindia Kannada

ಬಹು ಬ್ರ್ಯಾಂಡ್ ಚಿಲ್ಲರೆ ಮಳಿಗೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ ಡಿಐ)ಗೆ ಮುಂದಾಗಿರುವ ಯುಪಿಎ ಸರ್ಕಾರಕ್ಕೆ ಸಂಸತ್ತಿನ ಉಭಯ ಸದನಗಳಲ್ಲೂ ಬಹುಮತ ಸಿಕ್ಕಿದೆ. ಭಾರತಕ್ಕೆ ಎಫ್ ಡಿಐ ಹೊಸ ವಿಷಯವೇನಲ್ಲ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಬಹು ಬ್ರ್ಯಾಂಡ್ ಗಳ ಮೇಲೆ ವಿದೇಶಿಯರ ಹಿಡಿತ ಹೆಚ್ಚಾಗುವುದು ಆತಂಕಕಾರಿ ಎಂಬ ಕೂಗು ಎದ್ದಿದೆ.

ಎಫ್ ಡಿಐ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಇದೆಯೇ? ಶೇ 51 ರಷ್ಟು ಪಾಲು ವಿದೇಶಿ ಕಂಪನಿಗಳ ಕೈಗೆ ಹೋದರೆ ಸ್ಥಳೀಯರ ಪಾಡೇನು? ಸೇವ್ ಮನಿ, ಲಿವ್ ಬೆಟರ್ ಎಂದು ಚಿಲ್ಲರೆ ಮಾರುಕಟ್ಟೆಗೆ ಕಾಲಿರಿಸಿರುವ ವಾಲ್ ಮಾರ್ಟ್ ಸಂಸ್ಥೆ ಸುಮಾರು 5, 000 ಕೋಟಿ ಲಾಭದ ನಿರೀಕ್ಷೆ ಹೊಂದಿದೆ.

ಫ್ರಾನ್ಸಿನ ಕ್ಯಾರಿಫರ್, ಅಮೆರಿಕದ ವಾಲ್ ಮಾರ್ಟ್ ಹಾಗೂ ಯುಕೆಯ ಟೆಸ್ಕೋ ಕಂಪನಿಗಳು ಭಾರತದ ಚಿಲ್ಲರೆ ಮಾರುಕಟ್ಟೆ ಮೇಲೆ ಏಕಸ್ವಾಮ್ಯತೆ ಹೊಂದಿದರೆ ಮುಂದೆ ಗತಿಯೇನು?

ಭಾರತದಲ್ಲಿ ಸಿಂಗಲ್ ಬ್ರ್ಯಾಂಡ್ ನಲ್ಲಿ ಎಫ್ ಡಿಐಗೆ ಅನುಮತಿ ಇದೆ. ಇದು ಹೋಲ್ ಸೇಲ್, ಬ್ಯಾಂಕಿಂಗ್, ವಿಮಾ ಕ್ಷೇತ್ರದಲ್ಲಿ ಜಾರಿಯಲ್ಲಿದೆ. ಆದರೆ, ಈಗ ಮಲ್ಟಿ ಬ್ರ್ಯಾಂಡ್ ನಲ್ಲಿ ಎಫ್ ಡಿಐಗೆ ಅನುಮತಿ ನೀಡಿದರೆ, ಅಂದರೆ ಶೇ 51 ರಷ್ಟು ಪಾಲು ವಿದೇಶಿ ಕಂಪನಿ ವಶವಾದರೆ, ಇಡೀ ಚಿಲ್ಲರೆ ಮಾರುಕಟ್ಟೆ ಶೆಟ್ಟಿ ಅಂಗಡಿ ಜುಟ್ಟು ಜನಿವಾರ ವಿದೇಶಿಯರ ಕೈವಶವಾಗಲಿದೆ. ವಿಮೆ, ಇನ್ಸುರೆನ್ಸ್ ಹಣಕ್ಕಾಗಿ ವಿದೇಶಿ ಕಂಪನಿ ಮುಂದೆ ಕೈ ಚಾಚುವಂತಾಗುತ್ತದೆ

ಇದೇ ಸಮಸ್ಯೆಗೆ ಮೂಲ ಕಾರಣವಾಗಿರುವುದು. ಒಂದೇ ಮಳಿಗೆಯಲ್ಲಿ ಮಲ್ಟಿ ಬ್ರ್ಯಾಂಡ್ ಮಾರಾಟ ಸಾಧ್ಯವೇ? ಎಫ್ ಡಿಐ ಭೂತವೇ? ಭಗವಂತನ ಕೃಪೆಯೇ? ಮುಂದೆ ಓದಿ...

ಕಿರಾಣಿ ಅಂಗಡಿಗಳ ಸರ್ವನಾಶ?

ಕಿರಾಣಿ ಅಂಗಡಿಗಳ ಸರ್ವನಾಶ?

ಚಿಲ್ಲರೆ ಮಾರುಕಟ್ಟೆಯಲ್ಲಿ ಬಹು ಬ್ರ್ಯಾಂಡ್ ಅನುವು ಮಾಡಿಕೊಟ್ಟು ಶೇ 51 ರಷ್ಟು ಹೂಡಿಕೆಗೆ ಅವಕಾಶ ಕೊಟ್ಟರೆ, ಸಣ್ಣ ಪುಟ್ಟ ಕಿರಾಣಿ, ದಿನಸಿ ಅಂಗಡಿಗಳು ಮುಚ್ಚಬೇಕಾಗುತ್ತದೆ.

ವಿದೇಶಿ ರೀಟೈಲ್ ಕ್ಷೇತ್ರ ದಿಗ್ಗಜರ ಮುಂದೆ ಮಂಡಿಯೂರಬೇಕಾಗುತ್ತದೆ. ದೈನಂದಿನ ಸಾಮಾಗ್ರಿ ಈಗಾಗಲೇ ಮಾಲ್ ಬಜಾರುಗಳಲ್ಲಿ ಜನಪ್ರಿಯವಾಗಿದೆ. ಹೀಗಾಗಿ ರೀಟೈಲ್ ಮಳಿಗೆಗಳ ಆಫರ್ ಗಳಿಗೆ ಜನ ಮುಗಿಬೀಳುತ್ತಾರೆ.

ನಿರುದ್ಯೋಗ ಸಮಸ್ಯೆ

ನಿರುದ್ಯೋಗ ಸಮಸ್ಯೆ

ವಾಲ್ ಮಾರ್ಟ್ ಭಾರತದಲ್ಲಿ 17 ಕಡೆ ಹೊಸ ಮಳಿಗೆ ಸ್ಥಾಪಿಸಲಿದೆ. ಒಟ್ಟಾರೆ ಎಲ್ಲಾ ಕಂಪನಿಗಳಿಂದ 60 ರಿಂದ 80 ಲಕ್ಷ ಉದ್ಯೋಗ ಅವಕಾಶ ಸಿಗಲಿದೆ.

ಎಫ್ ಡಿಐನಿಂದ ಸ್ಥಳೀಯ ಉದ್ಯೊಗ ಸಿಕ್ಕರೂ ಅದು ಸೇಲ್ಸ್ ಮ್ಯಾನ್, ಮಾರ್ಕೆಟಿಂಗ್ ಗೆ ಸ್ಥೀಮಿತವಾಗಲಿದೆ. ಪ್ರಮುಖ ಕಾರ್ಪೋರೇಟ್ ಸಂಸ್ಥೆಗಳಾದ ರಿಲೆಯನ್ಸ್, ಆದಿತ್ಯಾ ಬಿರ್ಲಾ ಹಾಗೂ ಗೋಯೆಂಕಾ ಸಂಸ್ಥೆಗಳಿಂದಲೂ ಉದ್ಯೋಗ ಸಮಸ್ಯೆ ಬೆಳೆದಿದೆ.

ಬೆಲೆ ಏರಿಕೆ ಇಳಿಕೆ ಭಯ

ಬೆಲೆ ಏರಿಕೆ ಇಳಿಕೆ ಭಯ

ಭಾರಿ ಆರ್ಥಿಕ ಬಂಡವಾಳ ಹೂಡಿಕೆ ಮಾಡಲಿರುವ ವಿದೇಶಿ ಕಂಪನಿಗಳು ಎಲ್ಲದರ ರೇಟ್ ಫಿಕ್ಸ್ ಮಾಡಿ ಲಾಭದತ್ತ ಮಾತ್ರ ಯೋಚಿಸುತ್ತಾರೆ.

ಕಿರಾಣಿ ಅಂಗಡಿಯಲ್ಲಿ ಚೌಕಾಸಿ ಮಾಡಿದಂತೆ ಇಲ್ಲ ಸಾಧ್ಯವಿಲ್ಲ. ರೈತರಿಗೆ ಸೂಕ್ತ ಬೆಲೆ ಸಿಗುವುದಿಲ್ಲ, ಮಧ್ಯವರ್ತಿಗಳ ಕೈ ಮೇಲಾಗುತ್ತದೆ. ಗ್ರಾಹಕರಿಗೆ ಅಸಲಿ ಬೆಲೆ ಗೊತ್ತಾಗುವುದೇ ಇಲ್ಲ.

ಕೊಳೆತ ಆಹಾರ, ತ್ಯಾಜ್ಯ ನಿರ್ವಹಣೆ ಸುಲಭ

ಕೊಳೆತ ಆಹಾರ, ತ್ಯಾಜ್ಯ ನಿರ್ವಹಣೆ ಸುಲಭ

ರೀಟೈಲ್ ನಲ್ಲಿ ಎಫ್ ಡಿಎಇ ಬಂದರೆ ಆಹಾರ ಸಾಮಾಗ್ರಿಗಳು, ತ್ಯಾಜ್ಯಗಳ ನಿರ್ವಹಣೆ ಸುಲಭವಾಗಲಿದೆ. ಕೋಲ್ಡ್ ಸ್ಟೋರೇಜ್, ಆಹಾರ ಶೇಖರಣೆಗೆ ವಿದೇಶಿ ತಂತ್ರಜ್ಞಾನ ಕೂಡಾ ಬರಲಿದೆ.

ರೈತರು ನೊಂದು ಬೆಳೆಗಳನ್ನು ರಸ್ತೆಗಳಲ್ಲಿ ಎಸೆಯುವುದು ತಪ್ಪುತ್ತದೆ. ವಾರ್ಷಿಕವಾಗಿ ಸರ್ಕಾರಕ್ಕೆ ಆಹಾರ ತ್ಯಾಜ್ಯದಿಂದ ಉಂಟಾಗುತ್ತಿರುವ 55,000 ಕೋಟಿ ರು ಉಳಿತಾಯವಾಗಲಿದೆ.

ಮಧ್ಯವರ್ತಿಗಳ ಕಾಟ ಇರುವುದಿಲ್ಲ

ಮಧ್ಯವರ್ತಿಗಳ ಕಾಟ ಇರುವುದಿಲ್ಲ

ಚಿಲ್ಲರೆ ಮಾರುಕಟ್ಟೆ ಮಲ್ಟಿ ಬ್ರ್ಯಾಂಡ್ ನಲ್ಲಿ ಎಫ್ ಡಿಐ ಬಯಸುವವರು ಮಧ್ಯವರ್ತಿಗಳ ಕಾಟ ತಪ್ಪಿಸುವ ಭರವಸೆ ನೀಡಿದ್ದಾರೆ. ಇದು ನಿಜವಾದರೆ ರೈತರ ಪಾಲಿಗೆ ಎಫ್ ಡಿಐ ಭಾಗ್ಯೋದಯವಾಗಲಿದೆ. ರೈತರೊಡನೆ ವಿದೇಶಿ ಕಂಪನಿಗಳು ನೇರ ಸಂಪರ್ಕ ಸಾಧ್ಯವೇ ಎಂಬ ಪ್ರಶ್ನೆ ಕೂಡಾ ಇದೆ.

ಉದ್ಯೋಗಗಳ ಮಹಾಪೂರ ಹರಿಯಲಿದೆ

ಉದ್ಯೋಗಗಳ ಮಹಾಪೂರ ಹರಿಯಲಿದೆ

ಹೆಚ್ಚಿನ ವೃತ್ತಿಪರತೆ, ಕಾರ್ಯಕ್ಷಮತೆ ಬೆಳೆಯಲಿದೆ. 80 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿದೆ.
ರತನ್ ಟಾಟಾ, ಗ್ಲೋಬಲ್ ಹಂಟ್ ಸಂಸ್ಥೆ ಆರ್ಥಿಕ ತಜ್ಞರು ಕೂಡಾ ಎಫ್ ಡಿಐಗೆ ಓಕೆ ಎಂದಿದ್ದಾರೆ. ವಾಲ್ಮರ್ಟ್ ಇ ಕಾಮರ್ಸ್ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡುವ ನಿರೀಕ್ಷೆಯಿದೆ.

ವಿದ್ಯಾರ್ಥಿಗಳಿಗೆ 8 ಸಾವಿರ ರು ಸಂಬಳ ಎಂದರೆ ಇನ್ನು ಪದವೀಧರರಿಗೆ ಎಷ್ಟು ಸಿಗಬಹುದು ಊಹಿಸಿ

ಸೇವ್ ಮನಿ, ಲಿವ್ ಬೆಟರ್

ಸೇವ್ ಮನಿ, ಲಿವ್ ಬೆಟರ್

ಗ್ರಾಹಕರನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯತೆ. ಬೆಲೆ ಸಮರದಿಂದಾಗಿ ಎಲ್ಲಾ ಸಾಮಾಗ್ರಿಗಳು ಕಡಿಮೆ ದರಕ್ಕೆ ಗ್ರಾಹಕರಿಗೆ ಸಿಗುವ ಸಾಧ್ಯತೆ ಇರುತ್ತದೆ.

ಜೊತೆಗೆ ಆನ್ ಲೈನ್ ವ್ಯಾಪಾರ, ರಿಯಾಯಿತಿ ದರ ಮಾರಾಟ ಕೂಡಾ ಗ್ರಾಹಕರನ್ನು ಆಕರ್ಷಿಸಲಿದ್ದು, ಜಾಗತಿಕವಾಗಿ ಯಶಸ್ವಿಯಾದ ಕಂಪನಿಗಳು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವರ್ತಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Even as a debate rages in parliament over foreign direct investment, or FDI in muti-brand retail, here are a few things that the common man should know about FDI in multi-brand retail.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ