ಕೊಲ್ಲೂರು ಭೇಟಿ ಬೆನ್ನಲ್ಲೇ ಹೊಸ ಸುದ್ದಿ: ಪತ್ನಿ ಸಂಗೀತಾ ಜೊತೆ ಮತ್ತೆ ಒಂದಾಗಲಿದ್ದಾರಾ ಮುಖ್ಯಮಂತ್ರಿ ವಿಜಯ್‌?

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ವಿಚ್ಛೇದನ ಪ್ರಕರಣವು ಇಡೀ ದಕ್ಷಿಣ ಭಾರತದಲ್ಲೇ ಭಾರಿ ಸಂಚಲನ ಮೂಡಿಸಿದೆ. ಜೂನ್ 15ರಂದು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಈ ಕೇಸ್‌ನ ಮಹತ್ವದ ವಿಚಾರಣೆ ನಡೆಯಲಿದ್ದು, ಎಲ್ಲರ ಕಣ್ಣು ಇದರ ಮೇಲಿದೆ. ಇದರ ನಡುವೆಯೇ, ಸಿಎಂ ವಿಜಯ್ ಅವರು ಇತ್ತೀಚೆಗೆ ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಈ ಭೇಟಿಯು ಕೇವಲ ರಾಜಕೀಯ ಯಶಸ್ಸಿಗಾಗಿ ಅಲ್ಲ, ಬದಲಿಗೆ ತಮ್ಮ ಕೌಟುಂಬಿಕ ಜೀವನದ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಂಡು ಪತ್ನಿ ಜೊತೆ ಒಂದಾಗಲು ನಡೆಸಿದ ವಿಶೇಷ ಪ್ರಾರ್ಥನೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಿಎಂ ಆದ ಕೂಡಲೇ ಕೊಲ್ಲೂರಿಗೆ ಭೇಟಿ

ದಳಪತಿ ವಿಜಯ್ ಅವರು ರಾಜಕೀಯದಲ್ಲಿ ಮೊದಲ ಯತ್ನದಲ್ಲೇ ಮುಖ್ಯಮಂತ್ರಿಯಾಗಿ ದೊಡ್ಡ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ, ರಾಜಕೀಯ ಯಶಸ್ಸಿನ ನಡುವೆಯೂ ವೈಯಕ್ತಿಕ ಜೀವನದ ಬಿರುಗಾಳಿ ಅವರನ್ನು ಕಾಡುತ್ತಿದೆ. ಇತ್ತೀಚೆಗೆ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ಅತ್ಯಂತ ಗೌಪ್ಯವಾಗಿ ವಿಶೇಷ ಪೂಜೆ ಹಾಗೂ ಸಂಕಲ್ಪಗಳನ್ನು ನೆರವೇರಿಸಿದ್ದಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಕೊಲ್ಲೂರು ಕ್ಷೇತ್ರವು ಮನಃಶಾಂತಿ, ಕೌಟುಂಬಿಕ ಸಾಮರಸ್ಯ ಮತ್ತು ದಾಂಪತ್ಯದ ಬಿರುಕುಗಳನ್ನು ನಿವಾರಿಸುವ ಶಕ್ತಿಯುಳ್ಳ ಪವಿತ್ರ ಕ್ಷೇತ್ರ ಎಂದು ಹೆಸರುವಾಸಿಯಾಗಿದೆ.

CM Vijay

ವಿಜಯ್ ಅವರ ಈ ಧಾರ್ಮಿಕ ಭೇಟಿಯ ಬೆನ್ನಲ್ಲೇ, ಅವರು ತಮ್ಮ 27 ವರ್ಷಗಳ ದಾಂಪತ್ಯ ಜೀವನವನ್ನು ಉಳಿಸಿಕೊಳ್ಳಲು ಹಾಗೂ ಪತ್ನಿ ಸಂಗೀತಾ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಮತ್ತೆ ಒಂದಾಗಲು ಅಮ್ಮನವರ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದಾರೆ ಎಂಬ ಸುದ್ದಿಗಳು ಮುನ್ನೆಲೆಗೆ ಬಂದಿವೆ. ವಿಜಯ್ ಮತ್ತು ಸಂಗೀತಾ ಇಬ್ಬರಿಗೂ ತಮ್ಮ ಮಕ್ಕಳಾದ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಅವರ ಭವಿಷ್ಯ ಬಹಳ ಮುಖ್ಯವಾಗಿದೆ. ಮಕ್ಕಳ ಕೌಟುಂಬಿಕ ನೆಮ್ಮದಿಗಾಗಿ ದಂಪತಿಗಳು ತಮ್ಮ ಹಠವನ್ನು ಬಿಟ್ಟು, ವಿಚ್ಛೇದನದ ನಿರ್ಧಾರದಿಂದ ಹಿಂದೆ ಸರಿಯಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ವಿಜಯ್ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿರುವ ವಿಜಯ್ ಅವರಿಗೆ ವೈಯಕ್ತಿಕ ಜೀವನದ ವಿವಾದಗಳು ರಾಜಕೀಯವಾಗಿ ಹಿನ್ನಡೆ ತರಬಹುದು ಎಂಬ ಆತಂಕವೂ ಇರಬಹುದು. ಹೀಗಾಗಿ, ಕೌಟುಂಬಿಕ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡು ಸುಖೀ ಸಂಸಾರವನ್ನು ಮುಂದುವರಿಸಲು ಅವರು ಬಯಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊಲ್ಲೂರು ಭೇಟಿಯು ಹೊಸ ಭರವಸೆಯನ್ನು ಮೂಡಿಸಿದ್ದರೂ, ಸದ್ಯದ ವಾಸ್ತವದ ಚಿತ್ರಣ ಮಾತ್ರ ಬೇರೆಯೇ ಗೊಂದಲವನ್ನು ಸೃಷ್ಟಿಸಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ವಿಜಯ್ ಅವರು ನಟಿ ತ್ರಿಶಾ ಕೃಷ್ಣನ್ ಅವರೊಂದಿಗೆ ಸಾರ್ವಜನಿಕವಾಗಿ ಮತ್ತು ಮದುವೆ ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸಂಗೀತಾ ಅವರು ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲೂ ನಟಿಯೊಬ್ಬರ ಜೊತೆಗಿನ ಸಂಬಂಧವೇ ಬಿರುಕಿಗೆ ಕಾರಣ ಎಂದು ಉಲ್ಲೇಖಿಸಿರುವುದರಿಂದ, ವಿಜಯ್ ಅವರ ಈ ನಡವಳಿಕೆ ವಿಚ್ಛೇದನ ಗಟ್ಟಿಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಜೂನ್ 15ರ ಕೋರ್ಟ್ ವಾದವೇ ಅಂತಿಮ

ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಿಗೆ ವಿಜಯ್ ಭೇಟಿ ನೀಡಿರುವುದು ಪತ್ನಿ ಜೊತೆ ಒಂದಾಗುವ ಮನಸ್ಸಿನಿಂದಲೋ ಅಥವಾ ವಿಚ್ಛೇದನದ ಪ್ರಕ್ರಿಯೆಗಳು ಯಾವುದೇ ಅಡೆತಡೆಯಿಲ್ಲದೆ ಸುಸೂತ್ರವಾಗಿ ಮುಗಿಯಲಿ ಎಂಬ ಕಾರಣಕ್ಕೋ ಎಂಬುದು ಇನ್ನೂ ನಿಗೂಢವಾಗಿದೆ. ಜೂನ್ 15ರಂದು ಕೌಟುಂಬಿಕ ನ್ಯಾಯಾಲಯದಲ್ಲಿ ವಿಜಯ್ ಮತ್ತು ಸಂಗೀತಾ ಇಬ್ಬರೂ ಒಟ್ಟಿಗೆ ಬಾಳಲು ಒಪ್ಪುತ್ತಾರಾ? ಅಥವಾ ಸೌಹಾರ್ದಯುತವಾಗಿ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ಸಹಿ ಹಾಕುತ್ತಾರಾ? ಎಂಬ ಪ್ರಶ್ನೆಗೆ ಅಧಿಕೃತ ಉತ್ತರ ಸಿಗಲಿದೆ. ಕೋರ್ಟ್ ರೂಂನಲ್ಲಿ ಇಬ್ಬರ ಪರ ಮಂಡಿಸುವ ಅಂತಿಮ ವಾದಗಳೇ ಈ ಹೈಪ್ರೊಫೈಲ್ ಕೇಸ್‌ನ ಭವಿಷ್ಯವನ್ನು ಬರೆಯಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+