ಆ.4ರಂದು ಗ್ರಾಮ ಪಂಚಾಯಿತಿ ಉಪಚುನಾವಣೆ

election
ಬೆಂಗಳೂರು, ಜು.16 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಂದು ಚುನಾವಣೆ ಎದುರಿಸಲು ಸಜ್ಜಾಗಬೇಕಾಗಿದೆ. ರಾಜ್ಯದ 489 ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ 560 ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಜ್ಜಾಗಿದೆ.

ರಾಜ್ಯ ಚುಣಾವಣಾ ಆಯೋಗ ಜು.17ರ ಬುಧವಾರ ಅಧಿಕೃತವಾಗಿ ಚುನಾವಣಾ ವೇಳಾಪಟ್ಟಿ ಪ್ರಟಿಸಲಿದ್ದು, ಅಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಆಗಸ್ಟ್ 4 ರಂದು ಚುನಾವಣೆ ನಡೆಯಲಿದೆ.

ರಾಜ್ಯದ 55 ತಾಲೂಕುಗಳ 489 ಗ್ರಾಮ ಪಂಚಾಯಿತಿಗಳಲ್ಲಿ 560 ಸ್ಥಾನಗಳು ಖಾಲಿ ಇವೆ. ಇವುಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ತಯಾರಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ವೇಳಾಪಟ್ಟಿ : 560 ಸ್ಥಾನಗಳಿಗೆ ಆಗಸ್ಟ್ 4 ರ ಭಾನುವಾರ ಚುನಾವಣೆ ನಡೆಯಲಿದ್ದು, ಆಗಸ್ಟ್‌ 7 ರಂದು ಸಂಬಂಧಿಸಿದ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ. ಜು.17ರಂದು ವೇಳಾಪಟ್ಟಿ ಪ್ರಕಟವಾದ ತಕ್ಷಣ ನೀತಿ ಸಂಹಿತೆ ಜಾರಿಗೆ ಬರಲಿದೆ.

ನೀತಿ ಸಂಹಿತೆ ಅನ್ವಯವಿಲ್ಲ : ಬರ ಪರಿಹಾರ ಕಾಮಗಾರಿ ಮತ್ತು ಪ್ರಕೃತಿ ವಿಕೋಪಗಳ ಪರಿಹಾರ ಕಾರ್ಯಾಚರಣೆಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ವೇಳಾಪಟ್ಟಿ ಕೆಳಕಂಡಂತಿದೆ

* ಜುಲೈ 17ರಂದು ಅಧಿಸೂಚನೆ ಪ್ರಕಟ, ನೀತಿ ಸಂಹಿತೆ ಜಾರಿ
* ಜುಲೈ 24 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ
* ಜುಲೈ 25 ರಂದು ನಾಮಪತ್ರಗಳ ಪರಿಶೀಲನೆ
* ಜುಲೈ 27 ನಾಮಪತ್ರ ಹಿಂಪಡೆಯಲು ಕೊನೆಯ ದಿನ
* ಆಗಸ್ಟ್ 4 ರಂದು ಮತದಾನ
* ಆಗಸ್ಟ್ 7 ರಂದು ಮತ ಎಣಿಕೆ
* ಜುಲೈ 17ರಿಂದ ಆಗಸ್ಟ್ 7ರವರೆಗೆ ನೀತಿ ಸಂಹಿತೆ ಜಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+