ಜಾರ್ಖಂಡ್ : ತಲೆ ತಗ್ಗಿಸುವಂಥ ಅತ್ಯಾಚಾರ ಪ್ರಕರಣ

Jharkhand: 8 held for gang-rape of minor girls
ರಾಂಚಿ, ಜು.16: ನಾಲ್ಕು ಮಂದಿ ಅಪ್ರಾಪ್ತ ಬುಡಕಟ್ಟು ಜನಾಂಗದ ಬಾಲಕಿಯರನ್ನು ಅಪಹರಿಸಿ ಅಮಾನುಷವಾಗಿ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಪೊಲೀಸರು 8 ಮಂದಿಯನ್ನು ಮಂಗಳವಾರ ಬಂಧಿಸಿದ್ದಾರೆ.

ಸುಮಾರು 20 ಮಂದಿ ತಂಡ ಅಮಾನುಷವಾಗಿ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ಜಾರ್ಖಂಡ್ ನ ಫಕೂರ್ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ನಡೆದಿತ್ತು.

ಕ್ರಿಶ್ಚಿಯನ್ ಮಿಷಿನರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪಹಾಡಿಯಾ ಬುಡಕಟ್ಟು ಜನಾಂಗದ ನಾಲ್ವರು ಅಪ್ರಾಪ್ತ ವಿದ್ಯಾರ್ಥಿನಿಯರು ಸ್ಥಳೀಯ ವಿದ್ಯಾರ್ಥಿ ನಿಲಯದಲ್ಲಿ ತಂಗಿದ್ದರು. ರಾತ್ರಿ ವೇಳೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳ ತಂಡ ಅವರನ್ನು ಅಪಹರಿಸಿದೆ. ಅಪಹೃತರನ್ನು ಸಮೀಪದ ದಟ್ಟ ಕಾನನಕ್ಕೆ ಎಳೆದೊಯ್ದ ದುಷ್ಕರ್ಮಿಗಳು ನಾಲ್ವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಹತ್ಯೆಗೈಯಲು ಯತ್ನಿಸಿದ್ದರು.

ಆದರೆ ಸ್ಥಳೀಯರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದರು. ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ಕೆಲವು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು.

ಅತ್ಯಾಚಾರಕ್ಕೊಳಗಾದ ಬಾಲಕಿಯರ ಸರಾಸರಿ ವಯೋಮಾನ 12 ರಿಂದ 14 ಎಂದು ತಿಳಿದು ಬಂದಿದೆ. ಎಲ್ಲರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಾಮುಕರಿಂದ ನಲುಗಿರುವ ಈ ಬಾಲಕಿಯರ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ಜಾರ್ಖಂಡ್ ನ ಹೊಸ ಮುಖ್ಯಮಂತ್ರಿ ಹೇಮಂತ್ ಸೊರೆನ್ ಭರವಸೆ ನೀಡಿದ್ದಾರೆ.

ಘಟನೆ ಬಗ್ಗೆ ಕ್ರಿಶ್ಚಿಯನ್ ಮಿಷನರಿ ಶಾಲೆಯ ಮುಖ್ಯೋಪಾಧ್ಯಾಯರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ತನಿಖೆಗೆ ಸೂಕ್ತ ಬೆಂಬಲ ನೀಡುತ್ತಿದ್ದಾರೆ. ವಿದ್ಯಾರ್ಥಿನಿಯರ ಹೇಳಿಕೆ ಪಡೆಯಲಾಗಿದೆ. ಈವರೆಗೂ ಸುಮಾರು 8-10 ಜನರನ್ನು ಬಂಧಿಸಲಾಗಿದೆ. ಇನ್ನಷ್ಟು ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂದು ಡಿಜಿಪಿ ರಾಜೀವ್ ಕುಮಾರ್ ಹಾಗೂ ಗೃಹ ಕಾರ್ಯದರ್ಶಿ ಎನ್ ಎನ್ ಪಾಂಡೆ ಜಂಟಿ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+