ಡ್ಯಾನ್ಸ್ ಬಾರ್ ರೀ ಓಪನ್ ಗೆ ಸುಪ್ರೀಂ ಅನುಮತಿ

Dance bars can re-open in Mumbai, rules Supreme Court
ನವದೆಹಲಿ, ಜು.16: ಮುಂಬೈ ಹಾಗೂ ಮಹಾರಾಷ್ಟ್ರಗಳಲ್ಲಿ ಡ್ಯಾನ್ಸ್ ಬಾರ್ ಗಳನ್ನು ಮತ್ತೆ ಆರಂಭಿಸಲು ಸುಪ್ರೀಂಕೋರ್ಟ್ ಮಂಗಳ ವಾರ ಅನುಮತಿ ನೀಡಿದೆ.

2005ರಲ್ಲಿ ಮುಂಬೈ ಪೊಲೀಸರು ಮುಂಬೈ ಸೇರಿದಂತೆ ಮಹಾರಾಷ್ಟ್ರಗಳ ಬಾರ್ ಗಳಲ್ಲಿ ನೃತ್ಯ ಮಾಡುವುದಕ್ಕೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಡ್ಯಾನ್ಸ್ ಬಾರ್ ಗಳನ್ನು ಮುಚ್ಚಬೇಕಾಗಿತ್ತು.

ಡ್ಯಾನ್ಸ್ ಬಾರ್ ಗಳು, ಸ್ಟಾರ್ ಹೋಟೆಲ್ ಗಳ ಬಾರ್ ಗಳಲ್ಲೂ ನರ್ತನಕ್ಕೆ ಅವಕಾಶ ಇರಲಿಲ್ಲ. ಇದರಿಂದ ಮುಂಬೈಯೊಂದರಲ್ಲೇ ಸುಮಾರು 70,000 ಮಂದಿ ನರ್ತಕಿಯರು ನಿತ್ಯ ಜೀವನ ಸಾಗಿಸುವುದು ಕಷ್ಟವಾಗಿತ್ತು.

ಡ್ಯಾನ್ಸ್ ಬಾರ್ ಗಳಲ್ಲಿ ನರ್ತಕಿಯರ ಮೈಮಾಟ ಪ್ರದರ್ಶನ, ಅಶ್ಲೀಲ ನೃತ್ಯ ನಡೆಯುತ್ತಿದೆ ಇದು ಮಾನವ ಕಳ್ಳಸಾಗಣೆ ಹಾಗೂ ಮಹಿಳಾ ಶೋಷಣೆ ದಾರಿ ಮಾಡಿದೆ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೊರ್ಟ್ ನಲ್ಲಿ ಅರ್ಜಿ ಹಾಕಿತ್ತು.

ಆದರೆ, ಮಹಿಳಾ ಸಂಘಟನೆಗಳು, ಡ್ಯಾನ್ಸ್ ಬಾರ್ ನರ್ತಕಿಯರ ಪರ ವಕೀಲರ ವಾದ ಆಲಿಸಿದ ಹೈಕೋರ್ಟ್ ನರ್ತನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಡ್ಯಾನ್ಸ್ ಬಾರ್ ನರ್ತಕಿಯರ ಜೀವನಕ್ಕೆ ಸರ್ಕಾರ ಯಾವುದೇ ರೀತಿ ನೆರವು ನೀಡಿದರುವುದರಿಂದ ಅವರಿಗೆ ನರ್ತಿಸಲು ಅವಕಾಶ ಮಾಡಿಕೊಡಬೇಕಾಗುತ್ತದೆ ಎಂದು ಆದೇಶಿಸಿತ್ತು.

ಬಾಂಬೆ ಹೈಕೋರ್ಟಿನ ಈ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ಮಂಗಳವಾರ ಮೇಲ್ಕಂಡ ಆದೇಶವನ್ನು ನೀಡಿದೆ.

ಸದರಿ ಆದೇಶ ಬೇರೆ ರಾಜ್ಯಗಳಿಗೂ ಮಾದರಿಯಾಗಲಿದ್ದು, ಕರ್ನಾಟಕದಲ್ಲಿ ಕಗ್ಗಂಟಾಗಿರುವ ಡ್ಯಾನ್ಸ್ ಬಾರ್, ಪಬ್ ನಲ್ಲಿ ನೃತ್ಯ ಸಮಸ್ಯೆಗೆ ಪರಿಹಾರ ಸಿಕ್ಕಿದ್ದಂತಾಗಿದೆ. ಇತ್ತೀಚೆಗೆ ಪಬ್, ಬಾರ್ ಗಳಲ್ಲಿ ಮಹಿಳಾ ಪರಿಚಾರಕಿಯರಿಗೆ ಉದ್ಯೋಗ ಅವಕಾಶ ನೀಡುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿತ್ತು.

ಕರ್ನಾಟಕ ರಾಜ್ಯದಲ್ಲಿನ ಪಬ್, ಡ್ಯಾನ್ಸ್ ಬಾರ್ ಹಾಗೂ ಲೇಡಿಸ್ ಸರ್ವೀಸ್ ಬಾರ್ ಸೇರಿದಂತೆ ಮನರಂಜನಾ ಕೇಂದ್ರಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರ ಅಧಿಕೃತ ಮಾರ್ಗಸೂಚಿ ಪ್ರಕಟಿಸಿತ್ತು. ಇದರಲ್ಲಿ ಡ್ಯಾನ್ಸ್ ಬಾರ್ ಗಳಲ್ಲಿ ಗ್ರಾಹಕರು ಮಾತ್ರ ನರ್ತಿಸಲು ಅವಕಾಶ ನೀಡಲಾಗಿತ್ತು. ಮಹಿಳಾ ಪರಿಚಾರಕಿಯರು ಅಥವಾ ನೃತ್ಯಗಾರ್ತಿಗಳ ನರ್ತನಕ್ಕೆ ಅವಕಾಶ ನೀಡಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+