ಬೆಂಗಳೂರಲ್ಲಿ ಉಜಿರೆ ಎಸ್ ಡಿಎಂ ಕಾಲೇಜಿನ ಅಲುಮ್ನಿ ಅಸ್ತಿತ್ವಕ್ಕೆ

ಬೆಂಗಳೂರು, ಜು.16: ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ಸೇರಿ ಬೆಂಗಳೂರಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ನೋಂದಾಯಿಸಿದ್ದಾರೆ. ಜು.20ರಂದು ನಡೆಯುವ ಸಮಾರಂಭದಲ್ಲಿ ಅಧಿಕೃತವಾಗಿ ಉದ್ಘಾಟನೆ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಎನ್. ಸತ್ಯನಾರಾಯಣ ಹೊಳ್ಳ ಹೇಳಿದ್ದಾರೆ.

ಬಸವನಗುಡಿಯ ದೊಡ್ಡ ಗಣೇಶ ಮಂದಿರದ ಪಕ್ಕದಲ್ಲಿರುವ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಜುಲೈ 20 ರಂದು ಬೆಳಿಗ್ಗೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೆಜು ಉಜಿರೆ ಹಿರಿಯ ವಿದ್ಯಾರ್ಥಿಗಳ ಸಂಘ, ಬೆಂಗಳೂರು ಅಧಿಕೃತವಾಗಿ ಉದ್ಘಾಟನೆಯಾಗಲಿದೆ.

ಉದ್ಘಾಟನಾ ಸಮಾರಂಭಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ತುಮಕೂರು ಸಿದ್ದಗಂಗಾ ಮಠಾಧೀಶರಾದ ಡಾ. ಶಿವಕುಮಾರ ಸ್ವಾಮೀಜಿ ಮತ್ತು ಶ್ರೀಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಪ್ರೊ. ಎಚ್. ಪ್ರಭಾಕರ್ ಹಾಗೂ ಸುರೇಂದ್ರ ಕುಮಾರ್ ಅವರು ಭಾಗವಹಿಸಲಿದ್ದಾರೆ.

SDM College Ujire Alumni in Bangalore

ಉಜಿರೆ ಕಾಲೇಜಿನಲ್ಲಿ ಓದಿದ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಾಲೇಜಿನ ಚಟುವಟಿಕೆಗಳನ್ನು ಮೆಲುಕು ಹಾಕುವ ವಿಶೇಷ ಸಂಚಿಕೆಯನ್ನು ಹೊರ ತರಲಾಗುತ್ತದೆ.

ಮಧ್ಯಾಹ್ನ ಯಕ್ಷಗಾನ, ಖ್ಯಾತ ಕಲಾವಿದ ವಿಲಾಸ್ ನಾಯಕ್ ಅವರಿಂದ ವರ್ಣಜಾದೂ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎನ್. ಸತ್ಯನಾರಾಯಣ ಹೊಳ್ಳ ತಿಳಿಸಿದರು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 99168 21201/ 98458 8889/ 99860 46667

* 1972ನೇ ಬ್ಯಾಚಿನ ವಿದ್ಯಾರ್ಥಿಯಾಗಿದ್ದ ಎಸ್.ಎನ್ ಹೊಳ್ಳ ಅವರು ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷರಾಗಿರುತ್ತಾರೆ.
* ಉಪಾಧ್ಯಕ್ಷರು: ಡಾ. ಹೃಷಿಕೇಶ್ ಎಂ.ಪಿ, ನಾಗೇಂದ್ರ ಜೈನ್
* ಕಾರ್ಯದರ್ಶಿ: ಅಶೋಕ್ ಎಂ.
* ಖಜಾಂಚಿ: ಎಂ. ಹರ್ಷೇಂದ್ರ ಜೈನ್
* ಸಂಘಟನಾ ಕಾರ್ಯದರ್ಶಿ: ಸುನೀಲ್ ಕುಮಾರ್ ಆರ್, ಶ್ರೀಮತಿ ವಾಹಿನಿ
* ಜಂಟಿ ಕಾರ್ಯದರ್ಶಿ: ದಾಮೋದರ್ ದೊಂಡೋಲೆ, ಶ್ರೀಮತಿ ವಿಜಯಲಕ್ಷ್ಮಿ ಎಂ.
* ಕಾರ್ಯಕಾರಿ ಸಮಿತಿ ಸದಸ್ಯರು: ಕುಮಾರ್ ಕೆ.ಎ, ಭಾಸ್ಕರ್ ವಿ.ಬಿ, ಕಲಾಧರ ಸರಳಾಯ ಎಂ, ಶಶಿಕಾಂತ್ ಅರಿಗ, ಜಗದೀಶ್ ಪಡಿವಾಳ, ಶ್ಯಾಮಸುಂದರ್ ಗೌಡ ಕೆ, ಚಂದ್ರಕಾಂತ್ ಎಚ್, ಕೇದಾರ್ ಗೋಗಟೆ ಎನ್, ನೇಮಿರಾಜ್ ಎಚ್.ಸಿ, ಸಾತ್ವಿಕ್ ಜೈನ್, ರಾಜು ಕೆ.ಬಿ, ಅಣ್ಣಪ್ಪಯ್ಯ ಶೆಣೈ, ಡಾ. ರವೀಂದ್ರ ಶೆಟ್ಟಿ ಕೆ, ಶ್ರೀಮತಿ ರೇಶ್ಮಾ ಎಸ್.ವಿ, ಶ್ರೀನಿಧಿ ತುಳಪುಲೆ, ಶ್ರೀಮತಿ ಶ್ರುತಿ ಎಸ್.ಟಿ

ಹಿರಿಯ ವಿದ್ಯಾರ್ಥಿಗಳ ಸಂಘ, ಬೆಂಗಳೂರು ಅಧ್ಯಕ್ಷ ಸತ್ಯನಾರಾಯಣ ಹೊಳ್ಳ, ಕಾರ್ಯದರ್ಶಿ ಅಶೋಕ್ ಎಂ, ಎಸ್ ಡಿಎಂ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ, ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಯಶೋವರ್ಮ ಅವರು ಎಲ್ಲರಿಗೂ ಪ್ರೀತಿಪೂರ್ವಕ ಸ್ವಾಗತ ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+