ಯುವಜನರೇ ದೇಶದ ಶಕ್ತಿ : ನರೇಂದ್ರ ಮೋದಿ

ಪುಣೆ, ಜು.14 :"ಯವಜನತೆಯೇ ದೇಶದ ಶಕ್ತಿ. ಅವರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ" ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ ಭಾಷಣದ ಮೂಲಕ ಯುವಜನರನ್ನು ಮತ್ತೊಮ್ಮೆ ಸೆಳೆದಿದ್ದಾರೆ.

ಭಾನುವಾರ ಮಧ್ಯಾಹ್ನ ಫರ್ಗುಸನ್ ಕಾಲೇಜಿನಲ್ಲಿ ನರೇಂದ್ರ ಮೋದಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಾಷಣದ ಉದ್ದಕ್ಕೂ ದೇಶ, ಶಿಕ್ಷಣದ ಅವಶ್ಯಕತೆ ಮತ್ತು ಯುವಜನರ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಿಚ್ಚಿಟ್ಟರು.

"ಇನ್ನುಳಿದ ಪಕ್ಷಗಳು ಅಧಿಕಾರಕ್ಕಾಗಿ ಬಯಸುತ್ತಿದ್ದರೆ, ನಾವು ಅಧಿಕಾರವನ್ನು ನೀಡುವಲ್ಲಿ ಆಸಕ್ತಿ ಹೊಂದಿದ್ದೇವೆ" ಎಂದು ಹೇಳುವ ಮೂಲಕ ಯುಪಿಎ ಸರ್ಕಾರದ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ ನಡೆಸಿದರು.

"ನಮ್ಮ ದೇಶವು ಆಶಾಭಾವನೆಗಳಿಂದ ವಿಮುಖವಾಗುತ್ತಿದೆ. ನಾನಿದನ್ನು ಬೆಂಬಲಿಸುವುದಿಲ್ಲ. ನಾನು ಯಾವತ್ತೂ ಧನಾತ್ಮಕ ಚಿಂತನೆಗೆ ಹೆಚ್ಚು ಒತ್ತು ನೀಡುತ್ತೇನೆ" ಎಂದು ಮೋದಿ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು. ಮೋದಿ ಭಾಷಣದ ಪ್ರಮುಖ ಅಂಶಗಳು ಹೀಗಿವೆ.

Narendra Modi

* ನನ್ನ ಭಾಷಣವು ದೇಶದ ಯುವಜನಾಂಗದ ಪ್ರತಿಧ್ವನಿಯಾಗಿದೆ. ಯುವಜನರೇ ದೇಶದ ನಿಜವಾದ ಶಕ್ತಿ.

* ನಮ್ಮ ದೇಶದಲ್ಲಿನ ಶೇ 65 ಜನರು 35 ವರ್ಷಗಿಂತ ಕೆಳಗಿನ ವಯಸ್ಸಿನವರಾಗಿದ್ದು, ಇವರೆಲ್ಲರಿದೂ ದೇಶದ ಬಗ್ಗೆ ಕಾಳಜಿ ಇದೆ.

* ಯುವಜನಾಂಗ ತುಂಬಾ ಪ್ರತಿಭಾವಂತರಾಗಿರುವುದರಿಂದ ಅವರಿಗೆ ಸರಿಯಾದ ಮಾರ್ಗದರ್ಶನ ಅಗತ್ಯವಿದೆ.

* ವಿದೇಶದಲ್ಲಿ ಇತಿಹಾಸವನ್ನು ಶತಮಾನದಲ್ಲಿ ಹೇಳುತ್ತಾರೆ. ಆದರೆ, ಭಾರತದ ಸಹಸ್ರರಾರು ತಾಣಗಳಿಗೆ ವರ್ಷಗಳಷ್ಟು ಇತಿಹಾಸವಿದೆ.

* ದೇಶ ಪುನರ್ ನಿರ್ಮಾಣ ಮಾಡುವುದಕ್ಕೆ ಚೀನಾ ಸ್ಪೂರ್ತಿ. ದೇಶ ಹೇಗೆ ಕಟ್ಟಬೇಕೆಂದು ಅವರು ಸಾಧಿಸಿ ತೋರಿಸಿದ್ದಾರೆ.

* ಭಾರತಕ್ಕೆ ಸ್ನೇಹಮಯ ನೆರೆಯ ರಾಷ್ಟ್ರಗಳ ಕೊರತೆ ಇದೆ.

ನರೇಂದ್ರ ಮೋದಿ ಭಾಷಣ ಮುಗಿಸಿದ ಬಳಿಕ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವುದು ಹೀಗೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+