ಇನ್ಫೋಸಿಸ್ ಫಲಿತಾಂಶ ಚೇತರಿಕೆ: ಷೇರು ನಾಗಾಲೋಟ

ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದ ಫಲಿತಾಂಶ (Q1 2014) ತೆರಿಗೆ ನಂತರದ ಲಾಭ 2374 ಕೋಟಿ ರೂ. ಗಳದ್ದಾಗಿದೆ. ಇದು 2300 ಕೋಟಿ ರೂ ಅಂದಾಜಿಗಿಂತ ಹೆಚ್ಚಾಗಿದೆ. ಆದರೆ ಕಳೆದ ಆರ್ಥಿಕ ಸಾಲಿನಲ್ಲಿ ಇದೇ ಅವಧಿಯಲ್ಲಿ ಲಾಭದ ಮೊತ್ತ 2394 ಕೋಟಿ ರೂ ಇತ್ತು.
ಡಾಲರ್ ಆದಾಯ ಮೂಲದಿಂದ 1991 ದಶಲಕ್ಷ ಡಾಲರ್ ಆದಾಯ ಗಳಿಕೆಯಾಗಿದೆ. ಇದು ಸಹ ಅಂದಾಜಿಗಿಂತ ಹೆಚ್ಚಾಗಿದೆ. ರೂಪಾಯಿ ಮೌಲ್ಯದ ಕುಸಿತವಿದ್ದರೂ ರೂಪಾಯಿ ಲೆಕ್ಕದಲ್ಲಿ Infosys Technologies ಗಳಿಕೆ 11,267 ಕೋಟಿ ರೂ. ಗಳದ್ದಾಗಿದೆ.
'ನಮ್ಮ ಉತ್ಪನ್ನಗಳ ಸರಬರಾಜಿನಲ್ಲಿ ಮತ್ತು ಸಾಫ್ಟ್ ವೇರ್ ಸೇವೆಗಳಲ್ಲಿ ನಮ್ಮ ಸಾಮರ್ಥ್ಯವನ್ನು ಕಾಪಾಡಿಕೊಳ್ಳುತ್ತೇವೆ. ವಿವಿಧ ದೇಶಗಳಲ್ಲಿ 9 ಗ್ರಾಹಕರು ನಮ್ಮ ಉತ್ಪನ್ನಗಳನ್ನು ಅಳವಡಿಸಿಕೊಂಡಿದ್ದಾರೆ' ಎಂದು ಕಂಪನಿ ಪ್ರಕಟಣೆ ತಿಳಿಸಿದೆ.
Cloud ಮತ್ತು Big Data ಮೇಲೆ ನಾವು ಕೇಂದ್ರೀಕರಿಸುತ್ತಿರುವುದು ನಮಗೆ ಲಾಭದಾಯಕವಾಗಿದೆ. ಇದು ಸುಮಾರು ನೂರು ಸಂದರ್ಭಗಳಲ್ಲಿ ಕೈಗೂಡಿದೆ. ಈ ಕ್ಷೇತ್ರದಲ್ಲಿ ಕಂಪನಿಯು ಕಳೆದ ತ್ರೈಮಾಸಿಕದಲ್ಲಿ 15 ಗುತ್ತಿಗೆಗಳನ್ನು ಗಳಿಸಿಕೊಂಡಿದೆ ಎಂದು ಇನ್ಫಿ ಪ್ರಕಟಣೆ ತಿಳಿಸಿದೆ.
ಕಂಪನಿ ಷೇರುಗಳ ಬಗ್ಗೆ ಈಗಲೇ ಏನೂ ಹೇಳಲಾಗದಾದರೂ ಮುಂದಿನ ತ್ರೈಮಾಸಿಕ ಫಲಿತಾಂಶಗಳಲ್ಲಿ ಉತ್ತಮ ಪ್ರದರ್ಶನ ಕಂಡುಬಂದರೆ ಇನ್ಫಿ ಷೇರುಗಳು ಮತ್ತೆ ಗತವೈಭವಕ್ಕೆ ಮರಳಬಹುದು ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications