ಸೆಕ್ಸ್ ಹಗರಣ: ಬಿಜೆಪಿ ಮಾಜಿ ಸಚಿವ ಬಂಧನ

Madhya Pradesh Sex Scandal- ex BJP Minister Raghavji arrested
ಭೋಪಾಲ್, ಜುಲೈ 9: ಮಧ್ಯ ಪ್ರದೇಶದ ಮಾಜಿ ಸಚಿವ, ಬಿಜೆಪಿ ನಾಯಕ ರಾಘವಜಿ ಅವರನ್ನು ಸೆಕ್ಸ್ ಹಗರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಹಗರಣ ಬೆಳಕಿಗೆ ಬರುತ್ತಿದ್ದಂತೆ ಕಳೆದ ವಾರ ರಾಘವಜಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

29 ವರ್ಷದ ಮನೆ ಕೆಲಸದಾಳಿನ ಜತೆ ಅಸಹಜ ಸೆಕ್ಸ್ ಮಾಡಿದ ಆರೋಪದಲ್ಲಿ ರಾಘವಜಿ ವಿರುದ್ಧ ಪೊಲೀಸರು ಇತ್ತೀಚೆಗೆ ಪ್ರಕರಣ ದಾಖಲಿಸಿದ್ದರು. 79 ವರ್ಷದ ರಾಘವಜಿಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪಕ್ಷದಿಂದ ಇತ್ತೀಚೆಗೆ ಉಚ್ಚಾಟಿಸಿದ್ದರು.

ನನಗೆ ಹತ್ತಾರು ಕಾಯಿಲೆಗಳಿವೆ. ನನ್ನ ಕೈಯಲ್ಲಿ ಅಂತಹ ಸೆಕ್ಸ್ ಮಾಡುವುದಕ್ಕೆ ಆಗೋಲ್ಲ. ಆದ್ದರಿಂದ ನನ್ನನ್ನು ಬಂಧಿಸಬೇಡಿ ಎಂದು ರಾಘವಜಿ ನಿರೀಕ್ಷಣಾ ಜಾಮೀನು ಅರ್ಜಿಯ ಮೊರೆಹೋಗಿದ್ದರು.

ಆದರೆ ಕೆಲಸದಾಳು ಮಾತ್ರ ತನ್ನ ಜತೆ ನಡೆಸಿದ ಸೆಕ್ಸ್ ವಿಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಾ 'ರಾಘವಜಿ ನಾಟಕವಾಡುತ್ತಿದ್ದಾರೆ. ಅವರು ತಮ್ಮ ಆಪ್ತ ಸಿಬ್ಬಂದಿಯ ಪತ್ನಿಯರ ಜತೆಯಲ್ಲೆಲ್ಲ ಸೆಕ್ಸ್ ಮಾಡುತ್ತಾರೆ' ಎಂದು ಆರೋಪಿಸಿದ್ದರು.

ತನ್ನ ಜತೆ ಸೆಕ್ಸಿಗೆ ಸಹಕರಿಸಿದರೆ ಮತ್ತು ಇತರೆ ಸೆಕ್ಸ್ ಪ್ರಕರಣಗಳನ್ನು ಬಹಿರಂಗಪಡಿಸದಿದ್ದರೆ ಸರಕಾರಿ ಕೆಸಲ ಕೊಡಿಸುವುದಾಗಿ ಸಚಿವ ರಾಘವಜೀ ಪ್ರಲೋಭೆವೊಡ್ಡಿದ್ದರು ಎಂದೂ ಬಾಧಿತ ಯುವಕ ಅಲವತ್ತುಕೊಂಡಿದ್ದ. ಪ್ರತಿಪಕ್ಷ ನಾಯಕ ಅಜಯ್ ಸಿಂಗ್ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕೆಲಸದಾಳು ರಾಘವಜೀಯ ಹೀನಚರಿತ್ರೆಯನ್ನು ಬಹಿರಂಗಪಡಿಸಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+