ಎಲೆಕ್ಟ್ರಾನಿಕ್ ಸಿಟಿ: ಹೆಲ್ಮೆಟ್ ಧರಿಸದ ಟೆಕ್ಕಿ ಹಂಪ್ ಗೆ ಬಲಿ

ಮತ್ತೊಂದು ಪ್ರಕರಣದಲ್ಲಿ ರಾತ್ರಿ 12 ಗಂಟೆಯಲ್ಲಿ ನಿಂತಿದ್ದ ಕಸದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಟೆಕ್ಕಿ ತಲೆಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ.
Dell ಟೆಕ್ಕಿ ಅಭಿಷೇಕ್ ಸಾವು: ಬಿಹಾರ ಮೂಲದ ಅಭಿಷೇಕ್ (26) Dell ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ವೀಕ್ ಎಂಡ್ ಮೋಜು ಮಸ್ತಿಗೆಂದು ಗೆಳೆಯರ ಜತೆ ಶನಿವಾರ ರಾತ್ರಿ ಪಾರ್ಟಿ ಮಾಡಿದ್ದ ಅಭಿಷೇಕ್, ಭಾನುವಾರ ಬೆಳಗಿನ ಜಾವ ಅವಲೂರಿನಲ್ಲಿ ತನ್ನ ಮನೆಗೆ ಮರಳುವಾಗ ಅವಘಡಕ್ಕೆ ತುತ್ತಾಗಿದ್ದಾನೆ. ಮುಂಜಾನೆ 4 ಗಂಟೆಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಟೆಕ್ಕಿ ಅಭಿಷೇಕ್ ತನ್ನ ಬೈಕಿನಲ್ಲಿ ಬರುತ್ತಿದ್ದಾಗ ದಿಢೀರನೆ ಕಂಡ ಹಂಪ್ ಅನ್ನು ಅವಾಯ್ಡ್ ಮಾಡಲು ಹೋಗಿ ಸೀದಾ ರಸ್ತೆ ವಿಭಜಕಕ್ಕೆ ಬೈಕನ್ನು ಗುದ್ದಿದ್ದಾನೆ. ಆದರೆ ಬೈಕಿನ ಜತೆಗೆ ಆತನ ತಲೆಯೂ ವಿಭಜಕಕ್ಕೆ ಡಿಕ್ಕಿ ಹೊಡೆದುಕೊಂಡಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನನ್ನನ್ನು ಕೈಗೆ ಧರಿಸುವ ಬದಲು ತಲೆಗೆ ಹಾಕಿಕೊಂಡಿದ್ದರೆ ಬಹುಶಃ ಈ ಸಾವು ಸಂಭವಿಸುತ್ತಿರಲಿಲ್ಲ ಎಂದು ಅಣಕಿಸುವಂತೆ ಹೆಲ್ಮೆಟ್ ಹೇಳುತ್ತಿತ್ತು.
ಮತ್ತೊಬ್ಬ ಟೆಕ್ಕಿ ಶುಶ್ರುತ ಸ್ಥಳದಲ್ಲೇ ಸಾವು:
ಶನಿವಾರ ರಾತ್ರಿ 12 ಗಂಟೆಯಲ್ಲಿ 26 ವರ್ಷದ ಶುಶ್ರುತ ಕೆಲಸ ಮುಗಿಸಿಕೊಂಡು ಕೆಆರ್ ಪುರ ಮಾರ್ಗವಾಗಿ ಆವಲಹಳ್ಳಿಯಲ್ಲಿರುವ ತಮ್ಮ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದರು.
ಆ ವೇಳೆ ರಸ್ತೆಯಲ್ಲಿ ನಿಂತಿದ್ದ ಕಸದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿ, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೆ ಆರ್ ಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications