ಮರ್ರೆ ಗೆಲುವಿಗೆ ಹೆಜ್ಜೆ ಹಾಕಿದ ಬ್ರಿಟಿಷ್ ಪ್ರಧಾನಿ
ಲಂಡನ್, ಜು.8: ಸುಮಾರು 77 ವರ್ಷಗಳ ನಂತರ ಇಂಗ್ಲೆಂಡ್ ಗೆ ವಿಂಬಲ್ಡನ್ ಕಿರೀಟ ಮತ್ತೆ ಸಿಕ್ಕಿದೆ. ಭಾನುವಾರ ಸಂಜೆ ಅಗ್ರ ಶ್ರೇಯಾಂಕದ ಜೊಕೊವಿಕ್ ರನ್ನು ಸೋಲಿಸಿದ ಆಂಡೆ ಮರ್ರೆ ಗೆಲುವಿನ ಸಂಭ್ರಮದಲ್ಲಿ ಬ್ರಿಟಿಷ್ ಪ್ರಧಾನಿ ಕೂಡಾ ಪಾಲ್ಗೊಂಡಿದ್ದು ವಿಶೇಷ.
77 ವರ್ಷಗಳ ಹಿಂದೆ ಫ್ರೆಡ್ ಪೆರ್ರಿ ವಿಂಬಲ್ಡನ್ ಕಿರೀಟ ಧರಿಸಿದ ನಂತರ ಇದುವರೆಗೂ ಆಂಗ್ಲ ಆಟಗಾರರು ಈ ಪ್ರಶಸ್ತಿಯನ್ನು ಗೆದ್ದಿರಲಿಲ್ಲ. 2012ರಲ್ಲಿ ಅಮೆರಿಕನ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ ಮರ್ರೆಗೆ ಇದು ಎರಡನೆ ಗ್ರಾನ್ ಸ್ಲಾಮ್ ಪ್ರಶಸ್ತಿಯಾಗಿದೆ.
ಕಳೆದ ವರ್ಷ ವಿಂಬಲ್ಡನ್ ಫೈನಲ್ ನಲ್ಲಿ ರೋಜರ್ ಫೆಡರರ್ ವಿರುದ್ಧ ಸೋತಿದ್ದ ಮರ್ರೆ ಈ ವರ್ಷ ಮತ್ತೆ ಫೈನಲ್ ತಲುಪಿದ್ದರು. ಆದರೆ, ಟಾಪ್ ಸೀಡ್ ಆಟಗಾರ ಸೆರ್ಬಿಯಾದ ಜೊಕೊವಿಕ್ ರನ್ನು ಸೋಲಿಸುವುದು ಕಷ್ಟ ಎನ್ನಲಾಗಿತ್ತು.
ಅರ್ಜೆಂಟೀನಾದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ಸೆಮಿಫೈನಲ್ ನಲ್ಲಿ 4 ಗಂಟೆ, 43 ನಿಮಿಷಗಳ ಕಾಲ ಸೆಣಸಾಡಿ ಗೆದ್ದಿದ್ದ ಜೊಕೊವಿಕ್ ಫೈನಲ್ ಸೋಲಲು 40 ಡಿಗ್ರಿಯಷ್ಟಿದ್ದ ಉಷ್ಣಾಂಶವೂ ಕಾರಣ ಎನ್ನಬಹುದು.
ಎರಡನೆ ಸೆಟ್ ನಲ್ಲಿ 4-1 ಹಾಗೂ ಮೂರನೆ ಸೆಟ್ ನಲ್ಲಿ 4-2 ರಿಂದ ಮುನ್ನಡೆಯನ್ನು ಸಾಧಿಸಿದ್ದರೂ ಜೊಕೊವಿಕ್ ಪಾಲಿಗೆ ವಿಂಬಲ್ಡನ್ ಕಿರೀಟ ಬರೆದಿರಲಿಲ್ಲ. ಒಟ್ಟಾರೆ 26 ವರ್ಷದ ಮರ್ರೆ ಗೆಲುವಿನ ಸಂಭ್ರಮವನ್ನು ಇಂಗ್ಲೆಂಡ್ ನಲ್ಲಿ ಆಚರಿಸಲಾಗುತ್ತಿದೆ.
ಅಂಡೆ ಮರ್ರೆ ಪತ್ನಿ ಕಿಮ್ ಸೀರ್ಸ್ ಹಾಗೂ ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರೂನ್ ಸೇರಿದಂತೆ ಹಲವಾರು ಗಣ್ಯರು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಮರ್ರೆ ಸಂಭ್ರಮವನ್ನು ಚಿತ್ರಗಳಲ್ಲಿ ನೋಡಿ...

ಸ್ಮೈಲ್ ಪಿಂಕಿ ಸೀಳ್ದುಟಿ ಶಸ್ತ್ರಚಿಕಿತ್ಸೆಯ ಫಲಾನುಭವಿ,
'ಸ್ಮೈಲ್ ಪಿಂಕಿ' ಖ್ಯಾತಿಯ ಭಾರತದ ಪಿಂಕಿ ಸೋನ್ ಕರ್ ಆಂಡಿ ಮರ್ರೆ ಹಾಗೂ ನೊವಾಕ್ ಜೊಕೊ ವಿಕ್ ನಡುವಿನ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ನಾಣ್ಯವನ್ನು ಚಿಮ್ಮಿದರು. ಬಿಳಿ ಟೀ ಶರ್ಟ್, ಅಂಗಿ ಹಾಗೂ ಬಿಳಿ ನೆಕ್ಲಸ್ ಧರಿಸಿಕೊಂಡು ವಿಂಬಲ್ಡನ್ ಸೆಂಟರ್ ಕೋರ್ಟ್ ಗೆ ಪ್ರವೇಶಿ ಸಿದ ಪಿಂಕಿ ನೆರೆದಿದ್ದ ಪ್ರೇಕ್ಷಕರತ್ತ ಕೈ ಬೀಸಿದರು.

ಸ್ಮೈಲ್ ಪಿಂಕಿ ಸೀಳ್ದುಟಿ ಶಸ್ತ್ರಚಿಕಿತ್ಸೆಯ ಫಲಾನುಭವಿ,
ಹುಟ್ಟಿನಿಂದಲೇ ಸೀಳ್ದುಟಿ ಸಮಸ್ಯೆ ಯನ್ನು ಹೊಂದಿರುವವರಿಗೆ ಸ್ಮೈಲ್ ಟ್ರೈನ್ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಿದೆ. ಪಿಂಕಿಯ ಜೀವನಾಧರಿತ 'ಸ್ಮೈಲ್ ಪಿಂಕಿ' ಎಂಬ ಸಾಕ್ಷಚಿತ್ರಕ್ಕೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಲಭಿಸಿತ್ತು.

ಇಂಗ್ಲೆಂಡಿನಲ್ಲಿ ಟೆನಿಸ್ ಸಂಭ್ರಮ
ಲಂಡನ್: ವಿಂಬಲ್ಡನ್ ಕಪ್ ನೊಂದಿಗೆ ವಿಜೇತ ಇಂಗ್ಲೆಂಡಿನ ಆಂಡೆ ಮರ್ರೆ ಹಾಗೂ ರನ್ನರ್ ಅಪ್ ಸೆರ್ಬಿಯಾದ ನುವಾಕ್ ಜೋಕೊವಿಕ್

ಅದ್ಭುತ ಚುಂಬನ
ಕಳೆದ ಬಾರಿ ಫೈನಲ್ ತನಕ ಬಂದು ಎಡವಿದ್ದ ಮರ್ರೆ ಕನಸು ಕೊನೆಗೂ ಈಡೇರಿದೆ. ವಿಂಬಲ್ಡನ್ ಹುಲ್ಲುಹಾಸಿನ ಕಿಂಗ್ ತನ್ನ ಕಪ್ ಗೆ ಪ್ರೀತಿಯ ಮುತ್ತನೀಡುತ್ತಿದ್ದಾರೆ.

ವೆಲ್ ಡನ್
2012ರಲ್ಲಿ ಅಮೆರಿಕನ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ ಮರ್ರೆಗೆ ಇದು ಎರಡನೆ ಗ್ರಾನ್ ಸ್ಲಾಮ್ ಪ್ರಶಸ್ತಿಯಾಗಿದೆ.

ಆನಂದ ಭಾಷ್ಪ ಸುರಿಸಿದ ಮರ್ರೆ
77 ವರ್ಷಗಳ ಆಂಗ್ಲರ ಕನಸು ನನಸಾದ ಕ್ಷಣ

ವೆಲ್ ಡನ್ ಮರ್ರೆ
ಅಂಡೆ ಮರ್ರೆ ಪತ್ನಿ ಕಿಮ್ ಸೀರ್ಸ್

ಇಂಗ್ಲೆಂಡಿನಲ್ಲಿ ಟೆನಿಸ್ ಸಂಭ್ರಮ
ಮರ್ರೆ ಗೆಲುವನ್ನು ಕೊಂಡಾಡಿದ ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರೂನ್

ಜಾರಿ ಬಿದ್ದ ಜಾಣ
ಜೊಕೊವಿಕ್ ಫೈನಲ್ ಸೋಲಲು 40 ಡಿಗ್ರಿಯಷ್ಟಿದ್ದ ಉಷ್ಣಾಂಶವೂ ಕಾರಣ ಎನ್ನಬಹುದು.

ಜೋಕೊವಿಕ್
ಎರಡನೆ ಸೆಟ್ ನಲ್ಲಿ 4-1 ಹಾಗೂ ಮೂರನೆ ಸೆಟ್ ನಲ್ಲಿ 4-2 ರಿಂದ ಮುನ್ನಡೆಯನ್ನು ಸಾಧಿಸಿದ್ದರೂ ಜೊಕೊವಿಕ್ ಪಾಲಿಗೆ ವಿಂಬಲ್ಡನ್ ಕಿರೀಟ ಬರೆದಿರಲಿಲ್ಲ.

ಜೂನಿಯರ್ಸ್
ಆಸ್ಟ್ರೇಲಿಯಾದ ನಿಕ್ ಕೈರಿಗಿಯೊಸ್ ಹಾಗೂ ಥಾನಾಸಿ ಕೊಕ್ಕಿನಾಕಿಸ್(ಬಲ) ಬಾಯ್ಸ್ ಡಬಲ್ಸ್ ಫೈನಲ್ ಗೆದ್ದ ಸಂಭ್ರಮದಲ್ಲಿ

ಬಾಯ್ಸ್ ಡಬಲ್ಸ್ ಫೈನಲ್
ಬಾಯ್ಸ್ ಡಬಲ್ಸ್ ಫೈನಲ್ ಗೆದ್ದ ಆಸ್ಟ್ರೇಲಿಯಾದ ನಿಕ್ ಕೈರಿಗಿಯೊಸ್ ಹಾಗೂ ಥಾನಾಸಿ ಕೊಕ್ಕಿನಾಕಿಸ್

ಬಾಯ್ಸ್ ಸಿಂಗಲ್ಸ್ ವೀರ
ವಿಂಬಲ್ಡನ್ ಬಾಯ್ಸ್ ಸಿಂಗಲ್ಸ್ ಫೈನಲ್ ನಲ್ಲಿ ಕೊರಿಯಾದ ಹ್ಯಾಯಿನ್ ಚುಂಗ್ ಸೋಲಿಸಿ ಪ್ರಶಸ್ತಿ ಗೆದ್ದ ಇಟಲಿಯ ಗಿಯಾನ್ಲುಗಿ ಕ್ವಿನ್ಜಿ,

ವಿಂಬಲ್ಡನ್ ಚಿತ್ರಗಳು
ಇಂಗ್ಲೆಂಡಿನಲ್ಲಿ ಟೆನಿಸ್ ಸಂಭ್ರಮ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications