ಸಿಕಂದರಾಬಾದಿನಲ್ಲಿ ಹೋಟೆಲ್ ಕುಸಿತ, 13 ಜನ ಸಾವು

ಸಿಕಂದರಾಬಾದ್, ಜು.8: ಇಲ್ಲಿನ ಎರಡು ಅಂತಸ್ತಿನ ಹೋಟೆಲ್ ಕಟ್ಟಡ ಕುಸಿದ ಪರಿಣಾಮ ಸುಮಾರು 13 ಜನ ಸಾವನ್ನಪ್ಪಿದ್ದು, ಹಲವಾರು ಜನ ಗಾಯಾಳುಗಳಾಗಿರುವ ಘಟನೆ ಸೋಮವಾರ ಸಂಭವಿಸಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಜನ ಸಿಲುಕಿರುವ ಸಾಧ್ಯತೆ ಇರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.

ಸಿಕಂದರಾಬಾದಿನ ರಾಷ್ಟ್ರಪತಿ ರಸ್ತೆಯಲ್ಲಿರುವ ಸಿಟಿ ಲೈಟ್ ಇರಾನಿಯನ್ ಕಟ್ಟಡದ ಒಂದು ಭಾಗ ಮುಂಜಾನೆ ಕುಸಿದು ಬಿದ್ದಿದೆ. ಕಟ್ಟಡ ಕುಸಿತಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸ್ ಪಡೆ, ಅಗ್ನಿ ಶಾಮಕದಳ ಧಾವಿಸಿದ್ದು, ಪರಿಹಾರ ಕಾರ್ಯ ಮುಂದುವರೆದಿದೆ.

Secunderabad: Hotel collapses in Andhra, 4 feared dead

ಕಟ್ಟಡದ ಅವಶೇಷಗಳಿಂದ ಸುಮಾರು 11 ಜನರ ಶವವನ್ನು ಹೊರಕ್ಕೆ ತೆಗೆಯಲಾಗಿದೆ ಸುಮಾರು 40ಕ್ಕೂ ಅಧಿಕ ಜನ ಪ್ರಾಣಾಪಯದಲ್ಲಿ ಸಿಲುಕಿರಬಹುದು ಅಥವಾ ಅವಶೇಷಗಳಡಿ ಸಮಾಧಿಯಾಗಿರಬಹುದು ಎಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ ಎಂಸಿ) ಅಧಿಕಾರಿಗಳು ಹೇಳಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ ಮತ್ತು ಗಾಯಗೊಂಡವರಿಗೆ ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಟ್ಟಡದ ಅವಶೇಷಗಳಡಿಯಿಂದ ಈವರೆಗೆ 11 ಮೃತ ದೇಹಗಳನ್ನು ಹೊರ ತೆಗೆದಿದ್ದೇವೆ ಮತ್ತು ಇನ್ನು 20 ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಅನುರಾಗ್ ಶರ್ಮಾ ಅವರು ವರದಿಗಾರರಿಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+